nammatumakuru

    Subscribe to Updates

    Get the latest creative news from FooBar about art, design and business.

    What's Hot

    ತಿಪಟೂರು: ತೋಟದ ಬಾವಿಗೆ ಬಿದ್ದಿದ್ದ ಚಿರತೆ ರಕ್ಷಣೆ

    February 15, 2026

    ವೈದ್ಯಕೀಯ ಕ್ಷೇತ್ರ ಸದಾ ಬದಲಾಗುತ್ತಿರುತ್ತದೆ, ನಿತ್ಯವೂ ಅಪ್ಡೇಟ್ ಆಗುತ್ತಿರಬೇಕು: ಸಿದ್ದಲಿಂಗ ಮಹಾಸ್ವಾಮೀಜಿ

    February 15, 2026

    ಖಾದಿ ಬಟ್ಟೆ ಧರಿಸಿ, ನೇಕಾರ ಸಮುದಾಯಕ್ಕೆ ಉತ್ತೇಜನ ನೀಡಿ: ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ

    February 15, 2026
    Facebook Twitter Instagram
    ಟ್ರೆಂಡಿಂಗ್
    • ತಿಪಟೂರು: ತೋಟದ ಬಾವಿಗೆ ಬಿದ್ದಿದ್ದ ಚಿರತೆ ರಕ್ಷಣೆ
    • ವೈದ್ಯಕೀಯ ಕ್ಷೇತ್ರ ಸದಾ ಬದಲಾಗುತ್ತಿರುತ್ತದೆ, ನಿತ್ಯವೂ ಅಪ್ಡೇಟ್ ಆಗುತ್ತಿರಬೇಕು: ಸಿದ್ದಲಿಂಗ ಮಹಾಸ್ವಾಮೀಜಿ
    • ಖಾದಿ ಬಟ್ಟೆ ಧರಿಸಿ, ನೇಕಾರ ಸಮುದಾಯಕ್ಕೆ ಉತ್ತೇಜನ ನೀಡಿ: ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ
    • ಉರ್ದು ಮಾಧ್ಯಮ ಶಾಲೆಗಳಲ್ಲಿ ಮಕ್ಕಳನ್ನು ಶಾಲೆಗೆ ಕರೆ ತರುವುದು ಸವಾಲಿನ ಕೆಲಸ: ಡಿಡಿಪಿಐ ರಘುಚಂದ್ರ
    • ಜೆಫ್ರಿ ಎಫ್ಟೀನ್ ಫೈಲ್‌ ನಲ್ಲಿ ಮೋದಿ ಹೆಸರು:  ಯುವ ಕಾಂಗ್ರೆಸ್ ಪ್ರತಿಭಟನೆ
    • SSLC:  ತುಮಕೂರು ಜಿಲ್ಲೆಗೆ ಉತ್ತಮ ಫಲಿತಾಂಶ ತರಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ
    • ನೀರು ಸರಬರಾಜು: ಅಧಿಕಾರಿಗಳ ವಿರುದ್ಧ ಸಚಿವ ಪರಮೇಶ್ವರ್ ಅಸಮಾಧಾನ: ನಿಮ್ಮನ್ನೇ ಜವಾಬ್ದಾರಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ
    • ತುಮಕೂರು:  ಫೆಬ್ರವರಿ 16ಕ್ಕೆ ಹೆತ್ತೇನಹಳ್ಳಿ ಅಮ್ಮನವರ ರಥೋತ್ಸವ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಡ್ರಾಪ್ ಕೊಡುವ ನೆಪದಲ್ಲಿ ಚಿನ್ನದ ಆಭರಣ ದೋಚುತ್ತಿದ್ದ ಕಳ್ಳನ ಬಂಧನ
    Uncategorized January 1, 2026

    ಡ್ರಾಪ್ ಕೊಡುವ ನೆಪದಲ್ಲಿ ಚಿನ್ನದ ಆಭರಣ ದೋಚುತ್ತಿದ್ದ ಕಳ್ಳನ ಬಂಧನ

    By adminJanuary 1, 2026No Comments1 Min Read
    arrest

    ತುಮಕೂರು: ಬೈಕ್‌ ನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯರನ್ನು ಕುಳ್ಳಿರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅವರ ಬಳಿ ಇದ್ದ ಚಿನ್ನಾಭರಣಗಳನ್ನು ದೋಚುತ್ತಿದ್ದ ಅಂತರರಾಜ್ಯ ಕಳ್ಳನನ್ನು ವೈ.ಎನ್. ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ.

    ಆಂಧ್ರದ ಅನಂತಪುರ ಜಿಲ್ಲೆ ರಾಯದುರ್ಗ ಮಂಡಲದ ಸೋಮಲದೊಡ್ಡಿ ಗ್ರಾಮದ ಬಂಡಿಸುಬ್ರಹ್ಮಣ್ಯಂ (30) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ 3.20 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ, ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.


    Provided by
    Provided by

    ತಾಲ್ಲೂಕಿನ ಸೂಲನಾಯಕನಹಳ್ಳಿ ಗೇಟ್‌ನಿಂದ ನವೆಂಬರ್ 23 ರಂದು ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದ ದುರ್ಗಮ್ಮ ಹಾಗೂ ಡಿಸೆಂಬರ್ 8 ರಂದು ಪಳವಳ್ಳಿ ಕಟ್ಟೆಯ ಬಳಿ ಬಸ್‌ಗಾಗಿ ಕಾಯುತ್ತಿದ್ದ ದೊಡ್ಡಹಳ್ಳಿಯ ಗುಂಡಮ್ಮ ಎಂಬುವವರನ್ನು ಅಪರಿಚಿತ ವ್ಯಕ್ತಿಯೊಬ್ಬ ಬೈಕ್‌ನಲ್ಲಿ ಡ್ರಾಪ್ ಕೊಡುವುದಾಗಿ ನಂಬಿಸಿ, ಜಮೀನೊಂದರ ಬಳಿ ಆಕೆಯನ್ನು ಕರೆದುಕೊಂಡು ಹೋಗಿ, ಚಿನ್ನದ ಒಡವೆ ಬಿಚ್ಚಿಸಿಕೊಂಡು, ಕಿವಿಯಲ್ಲಿನ ಓಲೆ ಕಿತ್ತಿದ್ದನು. ಗುಂಡಮ್ಮ ಅವರ ಕೊರಳಿನಲ್ಲಿದ್ದ ಮಾಂಗಲ್ಯ ಸರದಲ್ಲಿ ಅರ್ಧ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದನು. ಈ ಬಗ್ಗೆ ವೈ.ಎನ್. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಪಟ್ಟಣದ ಕಲ್ಯಾಣದುರ್ಗ ರಸ್ತೆಯ ಪಕ್ಕ ನೆಲೆದಿಗಲ ಬಂಡೆ ಕ್ರಾಸ್ ಬಳಿಯ ಬಸ್ ಶೆಲ್ಟರ್ ಬಳಿ ನಿಂತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಸದರಿ ಆರೋಪಿ ಕದ್ದಿದ್ದ ಚಿನ್ನಾಭರಣಗಳನ್ನು ಕಲ್ಯಾಣ ದುರ್ಗದ ಮುತ್ತೂಟ್ ಫೈನಾನ್ಸ್ ನಲ್ಲಿ ಅಡವಿಟ್ಟಿದ್ದ. ಕಳ್ಳತನಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ದೊಡ್ಡಬಳ್ಳಾಪುರದಲ್ಲಿ ಕಳ್ಳತನ ಮಾಡಿದ್ದ. ಪಟ್ಟಣ ಠಾಣಾ ವ್ಯಾಪ್ತಿಯ ವೀರಮ್ಮ ನಹಳ್ಳಿ ಗೇಟ್ ಬಳಿ ಮಹಿಳೆಯೊಬ್ಬರ ಕೊರಳಿನಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದ ಎಂದು ಆರೋಪಿ ಬಾಯ್ಬಿಟ್ಟಿದ್ದಾನೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಸಿದ್ಧರಾಮಯ್ಯ ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

    February 8, 2026

    ಗುಬ್ಬಿ: ಎಂ.ಎನ್.ಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂತರಾಜು ಆಯ್ಕೆ

    January 29, 2026

    ಕೊರಟಗೆರೆ ಇತಿಹಾಸದಲ್ಲೇ ಮೊದಲ ಬಾರಿಗೆ ಲೋಕ ಕಲ್ಯಾಣಕ್ಕಾಗಿ ಶ್ರೀನಿವಾಸ ಕಲ್ಯಾಣೋತ್ಸವ

    December 21, 2025

    Leave A Reply Cancel Reply

    Our Picks

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026

    ದೈಹಿಕ ಸಂಬಂಧದಲ್ಲಿ ತೃಪ್ತಿಯಿಲ್ಲ: ಮದುವೆಯಾದ ಒಂದೇ ತಿಂಗಳಲ್ಲಿ ಗಂಡನನ್ನು ತೊರೆದ ಪತ್ನಿ!

    February 3, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತಿಪಟೂರು

    ತಿಪಟೂರು: ತೋಟದ ಬಾವಿಗೆ ಬಿದ್ದಿದ್ದ ಚಿರತೆ ರಕ್ಷಣೆ

    February 15, 2026

    ತಿಪಟೂರು: ನಗರದ ಗಾಂಧಿನಗರದ ಸಮೀಪವಿರುವ ಮಾರನಗೆರೆಯಲ್ಲಿ ತೋಟದ ಬಾವಿಯೊಂದಕ್ಕೆ ಬಿದ್ದಿದ್ದ ಚಿರತೆಯನ್ನು ಶನಿವಾರ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಮಸ್ಥರು…

    ವೈದ್ಯಕೀಯ ಕ್ಷೇತ್ರ ಸದಾ ಬದಲಾಗುತ್ತಿರುತ್ತದೆ, ನಿತ್ಯವೂ ಅಪ್ಡೇಟ್ ಆಗುತ್ತಿರಬೇಕು: ಸಿದ್ದಲಿಂಗ ಮಹಾಸ್ವಾಮೀಜಿ

    February 15, 2026

    ಖಾದಿ ಬಟ್ಟೆ ಧರಿಸಿ, ನೇಕಾರ ಸಮುದಾಯಕ್ಕೆ ಉತ್ತೇಜನ ನೀಡಿ: ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ

    February 15, 2026

    ಉರ್ದು ಮಾಧ್ಯಮ ಶಾಲೆಗಳಲ್ಲಿ ಮಕ್ಕಳನ್ನು ಶಾಲೆಗೆ ಕರೆ ತರುವುದು ಸವಾಲಿನ ಕೆಲಸ: ಡಿಡಿಪಿಐ ರಘುಚಂದ್ರ

    February 15, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.