ತುರುವೇಕೆರೆ: ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 150 ಎ ನಲ್ಲಿ ಪೊಲೀಸ್ ಠಾಣೆಯ ಎದುರಿನಲ್ಲಿರುವ ಸಿಟಿ ಎಲೆಕ್ಟ್ರಾನಿಕ್ಸ್ ಎಂಬ ಗೃಹ ಉಪಯೋಗಿ ವಸ್ತುಗಳ ಮಳಿಗೆಗೆ ಕಳ್ಳರು ನುಗ್ಗಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ನಗದು ಕಳವು ಮಾಡಲಾಗಿದೆ.
ಸುಮಾರು ರಾತ್ರಿ 1:10 ಸಮಯದಲ್ಲಿ ಕಳ್ಳರು ಅಂಗಡಿಯ ಹಿಂಬದಿಯ ಶೀಟ್ ಮುರಿದು ಒಳಗೆ ನುಗ್ಗಿ ಸುಮಾರು ಏಳರಿಂದ ಎಂಟು ಲಕ್ಷ ರೂ.ಗಳ ಮೌಲ್ಯದ ಮೊಬೈಲ್ ಗಳು ಹಾಗೂ 12 ರಿಂದ 13 ದೊಡ್ಡ ಪರದೆಯ ಪ್ರತಿಷ್ಠಿತ ಕಂಪನಿಗಳ ಎಲ್ ಇಡಿ ಟಿವಿಗಳು ಮತ್ತು ಸುಮಾರು 12 ಸಾವಿರ ಬೆಲೆಬಾಳುವ ಎರಡು ಗ್ಲಾಸ್ ಸ್ಟೌಗಳನ್ನು ಅಂಗಡಿಯ ಕ್ಯಾಷ ಟೇಬಲ್ ನಲ್ಲಿದ್ದ 3000 ನಗದು ಮತ್ತು ಬ್ಯಾಂಕುಗಳ ಕಾರ್ಡುಗಳನ್ನು ನ ಕಳವು ಮಾಡಿದ್ದಾರೆ..
ಎಂದಿನಂತೆ ಬೆಳಗ್ಗೆ ಕೆಲಸಗಾರರು ಅಂಗಡಿಯ ಬಾಗಿಲು ತೆರೆದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಳ್ಳತನದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಪ್ರಕರಣ ಸಂಬಂಧ ಸ್ಥಳಕ್ಕೆ ಪಟ್ಟಣದ ಪಿಎಸ್ ಐ ಗಣೇಶ್. ಮತ್ತು ಪೊಲೀಸ್ ಪೇದೆ ಪ್ರಮೋದ್ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ವರದಿ: ಸುರೇಶ್ ಬಾಬು ಎಂ ತುರುವೇಕೆರೆ