ಉಡುಪಿಯಿಂದ ಬೆಂಗಳೂರಿಗೆ ಐರಾವತ ಬಸ್ ನಲ್ಲಿ ಬರುತ್ತಿದ್ದ ಪ್ರಯಾಣಿಕನ ಬಳಿ ಇದ್ದ 3 ಲಕ್ಷ ಮೌಲ್ಯದ 60 ಗ್ರಾಂ ಬಂಗಾರದ ಕಂಠಿಹಾರ ಹಾಗೂ ಎರಡು ಉಂಗುರಗಳನ್ನು ಕಳ್ಳತನ ಮಾಡಿದ ಕುರಿತು ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ಎಂಬುವರಿಗೆ ಸೇರಿದ ಚಿನ್ನಾಭರಣ ಇದಾಗಿದ್ದು, ಜಾಲಹಳ್ಳಿ ಕ್ರಾಸ್ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.


