ತರುಣ್ ಸುಧೀರ್ ಸೋನಲ್ ಮಾಂಥೋರೊ ಮದುವೆ ಸುದ್ದಿ ಇಡೀ ಚಿತ್ರರಂಗಕ್ಕೆ ಬ್ರೇಕಿಂಗ್ ನ್ಯೂಸ್ ಆಗಿತ್ತು.
ಸ್ಯಾಂಡಲ್‌ವುಡ್ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಆಗಸ್ಟ್ 10 ಮತ್ತು 11ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆ ತಯಾರಿ ಅದ್ಧೂರಿಯಾಗಿ ನಡೆಯುತ್ತಿದೆ.
ಮದುವೆ ಆಮಂತ್ರಣ ಪತ್ರಿಕೆಯನ್ನು ಹಂಚುವುದಕ್ಕೆ ಶುರು ಮಾಡಿದ್ದಾರೆ. ಶಾಪಿಂಗ್ ಕೂಡ ಶುರು ಮಾಡಿದ್ದಾರೆ. ಇತ್ತೀಚಿಗೆ ಚಿಕ್ಕಪೇಟೆಯಲ್ಲಿ ಇರುವ ಯೋಗಲಕ್ಷ್ಮಿ ಸಿಲ್ಕ್ ಸೀರೆ ಅಂಗಡಿಯಲ್ಲಿ ಮದುವೆ ಸೀರೆಯನ್ನು ಶಾಪಿಂಗ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿದೆ.ಮೂರ್ನಾಲ್ಕು ಸೀರೆಯನ್ನು ಸೋನಲ್ ಕುಟುಂಬದವರು ಖರೀದಿಸಿದ್ದಾರೆ. ಅಂಗಡಿ ಮಾಲೀಕರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ.
ತರುಣ್ ಸುಧೀರ್ ಹಾಗೂ ಸೋನಲ್ ಸ್ನೇಹಿತರ ಬಳಗವನ್ನು ವಿವಾಹಕ್ಕೆ ಆಮಂತ್ರಿಸಲು ಪರಿಸರ ಸ್ನೇಹಿ ಲಗ್ನ ಪತ್ರಿಕೆ ಮುದ್ರಿಸಿದ್ದಾರೆ. ಸಾಮಾನ್ಯವಾಗಿ ಬೇಡವಾದ ಕಾಗದಗಳನ್ನು ಬಿಸಾಕುವವರೇ ಜಾಸ್ತಿ. ಇದೇ ನಿಟ್ಟಿನಲ್ಲಿ ತರುಣ್ ಮತ್ತು ಸೋನಲ್ ಪರಿಸರ ಸ್ನೇಹಿ ವಿವಾಹದ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿದ್ದಾರೆ. ಇದನ್ನು ನೆಲದ ಮೇಲೆ ಬಿಸಾಡಿದ್ರೆ ಗಿಡವಾಗಿ ಬೆಳೆಯುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


