ಭೂಮಿಯ ಮೇಲಿನ ಅತ್ಯಂತ ನಿಶ್ಯಬ್ದ ಸ್ಥಳವನ್ನ USA ನಲ್ಲಿ ಸೃಷ್ಟಿಸಲಾಗಿದ್ದು, ಇಲ್ಲಿನ ಅನುಭವದಿಂದ ಜನ ಅಚ್ಚರಿಯ ಜೊತೆಗೆ ವಿಶಿಷ್ಟ ಅನುಭವಕ್ಕೆ ಒಳಗಾಗಿದ್ದಾರೆ. ಈ ಸ್ಥಳ ತುಂಬಾ ಮೌನವಾಗಿದ್ದು, ಮನುಷ್ಯ ಇದುವರೆಗೂ ಕೇಳಿರಲು ಸಾಧ್ಯವಿರದ ಅತಿ ಸಣ್ಣ ಶಬ್ಧವೂ ಇಲ್ಲಿ ಕೇಳಿಸುತ್ತದೆ.
ಮಿನ್ನಿಯಾ ಪೋಲಿಸ್ — ಮಿನ್ನೇಸೋಟ ಎಂಬ USA ನಲ್ಲಿರುವ ಆರ್ಫೀಲ್ಡ್ ಲ್ಯಾಬೊರೇಟರೀಸ್‌ನಲ್ಲಿರುವ ಅನಿಕೋಯಿಕ್ ಟೆಸ್ಟ್ ಚೇಂಬರ್ ಈ ಅನುಭವ ನೀಡುತ್ತದೆ. ಇಲ್ಲಿ ಹೊರ ಜಗತ್ತಿನ ಸಂಪೂರ್ಣ ಶಬ್ದವನ್ನು ನಿಗ್ರಹಿಸಲು ವಿಶೇಷವಾಗಿ ಕೋಣೆಯನ್ನ ವಿನ್ಯಾಸಗೊಳಿಸಲಾಗಿದೆ.
ಹೀಗಾಗಿ ಈ ಕೋಣೆಗೆ ಭೇಟಿ ನೀಡುವವರು, ಎಷ್ಟು ಸಣ್ಣ ಶಬ್ದವನ್ನು ಆಲಿಸಬಹುದು ಅಂದ್ರೆ, ತಮ್ಮ ರಕ್ತನಾಳಗಳ ಮೂಲಕ ರಕ್ತ ಹರಿಯುವ ಶಬ್ಧವನ್ನು ಕೇಳಲು ಸಾಧ್ಯವಾಗುತ್ತದೆ ಎಂದು ವರದಿ ಮಾಡಲಾಗಿದೆ. ಅಷ್ಟು ಮಾತ್ರವಲ್ಲದೇ ತಾವು ಮಿಟುಕಿಸುವ ಕಣ್ಣ ರೆಪ್ಪೆಗಳ ಸದ್ದನ್ನೂ ಕೇಳಬಹುದಂತೆ.
ಹೀಗೆ ಈ ಕೋಣೆಯಲ್ಲಿ ಸಮಯ ಕಳೆದು ಬಂದವರು ತಮ್ಮ ವಿಚಿತ್ರ ಅನುಭವಗಳನ್ನು ಹೇಳಿಕೊಂಡಿದ್ದಾರೆ. ತಮಗೆ ಧಿಡೀರ್ ಅನಾರೋಗ್ಯವಾದಂತೆ, ವಿಚಿತ್ರ ಹಿಂಸೆಯದಂತೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ಕೋಣೆಯೊಳಗೆ 30 ನಿಮಿಷಗಳ ಕಾಲ ಕಳೆದ ನಂತರ, ಕೆಲವರಿಗೆ ತಮ್ಮ ಹೃದಯ ಅತೀ ವೇಗದಲ್ಲಿ ಬಡಿದುಕೊಳ್ಳುತ್ತಿದೆ ಎಂದೆನಿಸಿ ಗಾಬರಿಯಾಗಿದ್ದೂ ಇದೆ.
ಈ ರೀತಿಯ ವಿಚಿತ್ರ ಮತ್ತು ಇಷ್ಟು ಮೌನವನ್ನ ಅನುಭವಿಸಬಹುದಾದ ಭೂಮಿಯ ಮೇಲಿರುವ ಏಕೈಕ ಸ್ಥಳ ಇದಾಗಿದ್ದು, ಕೆಲವರು ಈ ಅನುಭವ ಪಡೆಯಲು ಹಾತೊರೆದರೆ, ಇನ್ನು ಕೆಲವರು ಬೇಡಪ್ಪ ಈ ಕೋಣೆಯ ಸಹವಾಸ ಅಂತ ಹೆದರುವುದೂ ಉಂಟು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q