ತುಮಕೂರಿನ ನೊಣವಿನಕೆರೆ ಅಜ್ಜಯ್ಯನ ಮಠಕ್ಕೆ ಭೇಟಿ ಡಿಸಿಎಂ ಡಿ.ಕೆ. ಶಿವಕುಮಾರ್ ಮಾಧ್ಯಮಗಳ ಜೊತೆಗೆ ಮಾತನಾಡಿದರು.
ಅಜ್ಜಯ್ಯನ ಮಠಕ್ಕೆ ಮಠಕ್ಕೆ ಬಂದಾಗ ನನಗೆ ಯಾವಾಗಲೂ ಎನರ್ಜಿ ಜಾಸ್ತಿ ಆಗುತ್ತೆ. ನಾನು ಅತೀ ಹೆಚ್ಚು ಪ್ರೀತಿ ಮಾಡುವ ಸ್ಥಳ ಇದು. ಶ್ರೀಗಳು ಯಾವತ್ತೂ ಆಶೀರ್ವಾದ ಮಾಡ್ತಾರೆ. ಅಜ್ಜಯ್ಯನ ಮೇಲೆ ಪ್ರಮಾಣ ಮಾಡು ಅಂದವರೆಲ್ಲ ಏನಾದ್ರೂ ಈಗ? ನಮ್ಮ ಅಜ್ಜಯ್ಯನ ಹೆಸರು ತೆಗೆದುಕೊಂಡವರು ಈಗ ಉಲ್ಟಾ ಹೊಡೆದ್ರು. ಯಾಕೆ ಉಲ್ಟಾ ಹೊಡೆದ್ರು ಅವರು. ಅದೇ ಅಜ್ಜನ ಶಕ್ತಿ ಎಂದರು.
ನಾನೇನಾದ್ರೂ ಮಾಡಿದ್ರೆ ತಾನೇ ಯೋಚನೆ ಮಾಡ್ಬೇಕು. ಅಜ್ಜಯ್ಯನ ಪ್ರಮಾಣದ ಬಗ್ಗೆ ಮಾತನಾಡಿದವರೆಲ್ಲ ಈಗ ರಿವರ್ಸ್ ಹೊಡೆದಿದ್ದಾರೆ. ಪಾಪಾ ಕಾಂಟ್ರಾಕ್ಟರ್ ಗಳದ್ದೇನು ತಪ್ಪಿಲ್ಲ ಕೆಲ ರಾಜಕೀಯದವ್ರು ಮಾಡಿದ್ದು ಅದು. ರಾಜಕೀಯದವರು ಮಿಸ್ ಗೈಡ್ ಮಾಡಿ ಗುತ್ತಿಗೆದಾರರ ದಿಕ್ಕು ತಪ್ಪಿಸಿದ್ರು ಎಂದರು.
ಮಾಜಿ ಸಚಿವ ರೇಣುಕಾಚಾರ್ಯ ಕಾಂಗ್ರೆಸ್ ಗೆ ಬರ್ತಾರಾ ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಅವೆಲ್ಲ ಪಟ್ಟಿ ಇಲ್ಲಿ ಹೇಳೋಕಾಗಲ್ಲ ಎಂದರು.