ಬೆದರಿಕೆ ಹಾಕಿದ ಹಿನ್ನೆಲೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಭಾಪಟ್ಠಾ ಮೂಲದ ಯುವಕನೊಬ್ಬ ವಾಟ್ಸಾಪ್ ನಲ್ಲಿ ಯುವತಿಗೆ ವಿಡಿಯೋ ಕಾಲ್ ಮಾಡಿದ್ದ.
ಸೈಬರ್ ಕ್ರಿಮಿನಲ್ ಗಳು ಇದನ್ನು ನ್ಯೂಡ್ ವೀಡಿಯೋ ಆಗಿ ಪರಿವರ್ತಿಸಿ ಕಾಲ್ ರೆಕಾರ್ಡ್ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಕಿರುಕುಳ ನೀಡಿ ಆ ವಿಡಿಯೋವನ್ನು ಆತನ ಸ್ನೇಹಿತರಿಗೆ ಕಳುಹಿಸಿದ್ದರಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಾರಣಾಂತರಗಳಿಂದ ಆತನ ಹೆಸರನ್ನು ಗೌಪ್ಯವಾಗಿಡಲಾಗಿದೆ.


