ತಿಪಟೂರು: ಮೂರು ಚಿರತೆ ಪ್ರತ್ಯಕ್ಷವಾಗಿದ್ದು, ಈ ಪೈಕಿ ಒಂದು ಬಾವಿಗೆ ಬಿದ್ದಿರುವ ಘಟನೆ ತಿಪಟೂರು ನಗರದ ಮಾರನ್ಗೆರೆ ಬಡಾವಣೆಯಲ್ಲಿ ನಡೆದಿದೆ.
ಸಂಗಮೇಶ್ವರ ತೋಟದ ಬಾವಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎಂದು ತೋಟದ ಮಾಲಿಕ ಸಂಗಮೇಶ್ ಅವರು ತಿಳಿಸಿದ್ದಾರೆ. ಒಟ್ಟು ಮೂರು ಚಿರತೆಗಳು ಪತ್ತೆಯಾಗಿವೆ. ಈ ಪೈಕಿ ಒಂದು ಬಾವಿಗೆ ಬಿದ್ದಿದೆ ಎಂದು ತಿಳಿಸಿದ್ದಾರೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಬಾವಿಗೆ ಬಿದ್ದ ಚಿರತೆಯನ್ನು ರಕ್ಷಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ವರದಿ: ಆನಂದ್ ತಿಪ್ಟೂರ್


