ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಮೂವರನ್ನು ಪಂಜಾಬ್‌ನಲ್ಲಿ ಬಂಧಿಸಲಾಗಿದೆ. ಐಎಸ್ ಐ ಬೆಂಬಲಿತ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದನ್ನು ಬಂಧಿಸಲಾಗಿದೆ. ಇವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
ಪಂಜಾಬ್ ನ ಬಟಿಂಡಾದಿಂದ ಉಗ್ರರನ್ನು ಹಿಡಿಯಲಾಗಿದೆ. ಬಟಿಂಡಾದಲ್ಲಿನ ಕೌಂಟರ್ ಇಂಟಲಿಜೆನ್ಸ್ ತಂಡ ಈ ಕಾರ್ಯಾಚರಣೆಯ ಹಿಂದೆ ಇತ್ತು. ಬಂಧಿತ ಮೂವರು ವ್ಯಕ್ತಿಗಳು ಸಂಗ್ರೂರ್ ಜೈಲಿನಲ್ಲಿರುವ ಯುಎಪಿಎ ಆರೋಪಿಗಳಿಗೆ ಸಂಬಂಧಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಬಂಧಿತರಿಂದ 8 ಪಿಸ್ತೂಲ್ ಗಳು, 9 ಮ್ಯಾಗಜೀನ್ ಗಳು ಮತ್ತು 30 ಬುಲೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಮೂವರ ವಿರುದ್ಧ ಬಟಿಂಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುಂಪಿನಲ್ಲಿ ಉಳಿದವರ ಪತ್ತೆಗಾಗಿ ಪೊಲೀಸರು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಪಂಜಾಬ್ ಪೊಲೀಸರು ಭಯೋತ್ಪಾದನಾ ಘಟಕಗಳ ವಿರುದ್ಧ ನಿಗಾವನ್ನು ತೀವ್ರಗೊಳಿಸಿದ್ದಾರೆ. ದೀಪಾವಳಿಯ ನಂತರ, ಪೊಲೀಸರು ಅಂತಹ 8 ಕ್ಕೂ ಹೆಚ್ಚು ಭಯೋತ್ಪಾದಕ ಘಟಕಗಳನ್ನು ಪತ್ತೆ ಮಾಡಿದರು. ಅವರು ಸೆಲೆಬ್ರಿಟಿಗಳು, ಉದ್ಯಮಿಗಳು ಮತ್ತು ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿಸುತ್ತಾರೆ.


