ತುಮಕೂರು: ಜಿಲ್ಲೆಯ ಕುಣಿಗಲ್ ತಾಲ್ಲೂಕು ಬಿದನಗೆರೆ ಶನೇಶ್ವರ ಸ್ವಾಮಿ ಅರ್ಚಕ ಧನಂಜಯ ಗುರೂಜಿ ಬಿದನಗೆರೆ ಕೊರಳಿನಲ್ಲಿ ಹುಲಿಯ ಉಗುರು ಧರಿಸಿರುವ ಬಗ್ಗೆ ಪರಿಶೀಲನೆ ನಡೆಸಿ ವನ್ಯಜೀವಿ ಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಾಮಾಜಿಕ ಹೋರಾಟಗಾರ ಹಾಗೂ ಪತ್ರಕರ್ತ ಜೆಟ್ಟಿ ಅಗ್ರಹಾರ ನಾಗರಾಜು ಒತ್ತಾಯಿಸಿದ್ದಾರೆ.
ರಾಜ್ಯದ್ಯಂತ ಹುಲಿ ಉಗಿರಿನ ಬಗ್ಗೆ ಚರ್ಚೆ ಆಗುತ್ತಿದ್ದು, ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಒಬ್ಬ ಆರೋಪಿಯನ್ನ ಬಂಧಿಸಿ ರಾಜ್ಯದ ಅರಣ್ಯ ಅಧಿಕಾರಿಗಳು ಸಾರ್ವಜನಿಕರ ಮನೆಗೆದ್ದು ಉತ್ತಮ ಸೇವೆ ಮಾಡಿದ್ದಾರೆ. ಇದು ಸಂತಸ ವಿಷಯವಾಗಿದೆ. ಹಾಗೆಯೇ, ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಬಿದನಗೆರೆ ಶನೇಶ್ವರ ಸ್ವಾಮಿ ಅರ್ಚಕ ಧನಂಜಯ ಗುರೂಜಿ ಬಿದನಗೆರೆ ಕೊರಳಿನಲ್ಲಿ ಕೂಡ ಹುಲಿ ಉಗುರನ್ನು ಧರಿಸಿದ್ದು, ಅವರ ಕೊರಳಿನಲ್ಲಿ ಹಾಕಿರುವ ಚಿನ್ನಾಭರಣಗಳ ಜೊತೆ ಸಾರ್ವಜನಿಕರ ಮುಂದೆ ತೋರ್ಪಡಿಸಿರುತ್ತಾರೆ ಅದು ಅಸಲಿಯೋ ? ನಕಲಿಯೋ ? ಪರಿಶೀಲಿಸಿ ವನ್ಯಜೀವಿ ಕಾಯ್ದೆ ಇಡಿ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇನೆ ಎಂದು ಅವರು ಒತ್ತಾಯಿಸಿದ್ದಾರೆ.