ಕುಣಿಗಲ್: ಬೈಕ್ ಗೆ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ವೃದ್ಧೆಯೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಸುಗ್ಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಅಮೃತ್ತೂರು ಹೋಬಳಿ ಉಂಗ್ರ ಗ್ರಾಮದ ಹುಚ್ಚೇಗೌಡ( 55) ಹಾಗೂ ಅವರ ಮೊಮ್ಮಗ ಪ್ರೀತಮ್ ಗೌಡ (10) ಸ್ಥಳದಲ್ಲೇ ಮೃತಪಟ್ಟ ದುರ್ದೈವಿಗಳು. ಇದೇ ಗ್ರಾಮದ ಲಿಂಗಮ್ಮ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಹುಚ್ಚೇಗೌಡ ಹಾಗೂ ಆತನ ಮಗಳ ಮಗ ಪ್ರೀತಮ್ ಗೌಡ, ಇದೇ ಗ್ರಾಮದ ಲಿಂಗಮ್ಮ ಬೈಕ್ ನಲ್ಲಿ ಉಂಗ್ರ ಗ್ರಾಮದಿಂದ ಹುಲಿಯೂರುದುರ್ಗಕ್ಕೆ ಹೋಗುತ್ತಿದ್ದ ವೇಳೆ, ಹುಲಿಯೂರುದುರ್ಗ ಕಡೆಯಿಂದ ಯಡವಾಣಿ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಲಾರಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ಘಟನೆ ಸಂಬಂಧ ಹುಲಿಯೂರುದುರ್ಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC