ತಿಪಟೂರು: ಆರ್ಥಿಕ ಸಂಕಷ್ಟದಲ್ಲಿರುವ ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳ ಕಿಟ್ ವಿತರಣೆ ತಾಲೂಕು ಪಂಚಾಯಿತಿ ಆವರಣದಲ್ಲಿ ನಡೆಯಿತು.
ತಾಲೂಕಿನ ನೊಣವಿನಕೆರೆ ಹೋಬಳಿ ನಾಗರಘಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳಗರಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ, ವರುಣ್, ಕಿಶೋರ್, ಉದಯ್ ಹರ್ಷಿಲ್ ತರುಣ್ ಕುಮಾರ್, ಇವರು ಬೆಳಗರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕಡು ಬಡತನದಿಂದ ಕೂಡಿದವರಾಗಿದ್ದು, ಕೆಲವರು ತಂದೆಯನ್ನು ಕಳೆದುಕೊಂಡಿದ್ದು ಕೆಲವರು ತಾಯಿ ತಂದೆ ಇಬ್ಬರನ್ನು ಕಳೆದುಕೊಂಡಿರುತ್ತಾರೆ. ಹೀಗಾಗಿ ಇವರ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಂಕಷ್ಟ ಎದುರಾಗಿತ್ತು.
ಇವರ ವಿದ್ಯಾಭ್ಯಾಸಕ್ಕಾಗಿ ನೋಟ್ ಬುಕ್ ಬ್ಯಾಗ್ ಪೆನ್ ಪೆನ್ಸಿಲ್ ರಬ್ಬರ್ ಚಾಮೆಟ್ರಿ ಇತ್ಯಾದಿ ಪರಿಕರಗಳು ಅವಶ್ಯಕತೆ ಇದ್ದು, ಈ ವಿಚಾರವನ್ನು ಅಂಬೇಡ್ಕರ್ ಸೇವಾ ಸಮಿತಿಯ ತಿಪಟೂರು ತಾಲೂಕು ಅಧ್ಯಕ್ಷರಾದ ಶಿವಕುಮಾರ್ ಮತಿಘಟ್ಟ ಹಾಗೂ ರಾಘು ಯಗಚಿಕಟ್ಟೆ, ರಮೇಶ್ ಮಾರನಗೆರೆ ಅವರು ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳಿಗೆ ತಿಳಿಸಿ, ವಿದ್ಯಾಭ್ಯಾಸಕ್ಕೆ ನೆರವು ನೀಡುವಂತೆ ಮನವಿಯನ್ನು ಸಲ್ಲಿಸಿದ್ದರು.
ಈ ಮನವಿಗೆ ಸ್ಪಂದಿಸಿ ಈ ದಿನ ವಿದ್ಯಾರ್ಥಿಗಳಿಗೆ ಕಲಿಕಾ ಪರಿಕರಗಳ ಕಿಟ್ಟನ್ನು ತಾಲೂಕು ಕಾರ್ಯ ನಿರ್ವಹಣಾ ಅಧಿಕಾರಿಗಳಾದ ಸುದರ್ಶನ್ ತಾಲೂಕು ಪಂಚಾಯಿತಿ ಆವರಣದಲ್ಲಿ ವಿತರಿಸಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇವಾ ಸಮಿತಿಯ ಅಧ್ಯಕ್ಷರಾದ ಶಿವಕುಮಾರ್ ಮತ್ತಿಘಟ್ಟ ರಾಘು ಯಗಚಿಕಟ್ಟೆ, ಎ ಎಸ್ ಎಸ್ ನಗರ ಅಧ್ಯಕ್ಷರಾದ ರಮೇಶ್ ಮಾರನಗೆರೆ ಗ್ರಾಮ ಪಂಚಾಯತಿ ಸದಸ್ಯರಾದ ಗೌಡನ ಕಟ್ಟೆ ಬಸವರಾಜು ಬೆಳಗರಹಳ್ಳಿ , ಮನು, ಮಂಜು, ದರ್ಶನ್, ಗಂಗಾಧರ್, ಪ್ರಕಾಶ್, ತಾಲೂಕು ಪಂಚಾಯಿತಿ ವ್ಯವಸ್ಥಾಪಕರಾದ ಕೆ. ಭಾಗ್ಯಮ್ಮ ಹೇಮಣ್ಣ ರಘು ಹಾಗೂ ಇನ್ನೂ ಮುಂತಾದ ದಲಿತ ಮುಖಂಡರು ಹಾಜರಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC