ತಿಪಟೂರು: ತುಮಕೂರು ಜಿಲ್ಲೆಯಲ್ಲಿ ಅತ್ಯಂತ ಸುಸಜ್ಜಿತವಾದ ಮಲ್ಟಿ ಸ್ಪೆಷಾಲಿಟಿ ‘ವೈಭವಿ ಹಾಸ್ಪಿಟಲ್’ ಅನ್ನು ತಿಪಟೂರು ಜನತೆಗೆ ಒದಗಿಸುವುದು ಹಾಗೂ ಅನೇಕ ಮಕ್ಕಳ ಜೀವ ಉಳಿಸಲು ಕಾರಣವಾಗಿರುವುದು ನಮಗೆ ತೃಪ್ತಿ ತಂದಿದೆ ಎಂದು ವೈಭವಿ ಆಸ್ಪತ್ರೆಯ ಡಾಕ್ಟರ್ ಮಧುಸೂಧನ್ ತಿಳಿಸಿದರು.
ನಾವು ತಿಪಟೂರಿಗೆ ಬರುವ ಮುಂಚೆ ನಾನು ಕೇರಳದಲ್ಲಿದ್ದೆ, ಅಲ್ಲಿ ಮಕ್ಕಳಿಗೆ ದೊರಕುವ ವಿಶೇಷ ಚಿಕಿತ್ಸಾ ಸೌಲಭ್ಯಗಳನ್ನು ನಾನು ಹುಟ್ಟಿ ಬೆಳೆದ ಕಲ್ಪತರುನಾಡಿಗೆ ನೀಡಬೇಕೆದು ನಿಶ್ಚಯಿಸಿ ತಿಪಟೂರಿಗೆ ಬಂದು, ತಿಪಟೂರಿನಲ್ಲಿ ಹೆರಿಗೆ ಸರ್ಜರಿ ಎನ್.ಐ.ಸಿ.ಯು. ವೆಂಟಿಲೇಟರ್ ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭಿಸಿದ್ದು ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳ ಸಹಭಾಗಿತ್ವ ಹೊಂದಿದ್ದು, ಇದರಿಂದಾಗಿ ವಿಶೇಷ ಕೇಸ್ ಗಳು ಬಂದಾಗ ಪರಿಣಿತಿ ವೈದ್ಯರಿಂದ ಸಲಹೆ ಪಡೆದು ಸೂಕ್ತ ಚಿಕಿತ್ಸೆಯನ್ನು ಇಲ್ಲಿಯೇ ನೀಡಲಾಗುತ್ತದೆ ಎಂದು ತಿಳಿಸಿದರು.
ಇದೇ ಚಿಕಿತ್ಸೆಗೆ ಪಕ್ಕದ ಊರುಗಳ ಹಾಸನ್ ತುಮಕೂರು ಹೋಗಬೇಕಾಗಿತ್ತು. ಆದರಿಂದ ಸಮಯ ಉಳಿತಾಯ ಹಣ ಉಳಿತಾಯ ಎಲ್ಲಾ ಸೌಲಭ್ಯವು ನಮ್ಮಲ್ಲಿ ಸಿಗುತ್ತದೆ. ಈ ಸಂದರ್ಭದಲ್ಲಿ ಪ್ರಸೂತಿ ತಜ್ಞೆ ಡಾಕ್ಟರ್ ಹರ್ಷಿತ ಆಯುರ್ವೇದ ತಜ್ಞ ಡಾಕ್ಟರ್ ಕೃತಿಕ ಆಸ್ಪತ್ರೆ ಸಿಬ್ಬಂದಿ ವರ್ಗದವರು ಇದ್ದರು.
ವರದಿ: ಆನಂದ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4