ವರ್ಷದ ಅಮೆಜಾನ್ ಪ್ರೈಮ್ ಡೇ ಸೇಲ್ಸ್ (Amazon Prime Day Sale) ಜುಲೈ 20 ಮತ್ತು ಜುಲೈ 21ರಂದು ನಡೆಯಲಿದೆ. ಬಿಗ್ ಸೇಲ್ ಆಫರ್ ಜುಲೈ 20ರ ಮಧ್ಯರಾತ್ರಿ 12 ಗಂಟೆಯಿಂದಲೇ ಆರಂಭವಾಗಲಿದೆ. ಈ ಬಾರಿ ಪ್ರೈಮ್ ಡೇ ಸೇಲ್ನಲ್ಲಿ ಹಲವು ರಿಯಾಯ್ತಿ ಲಭ್ಯವಾಗಲಿದೆ.
ಎಲೆಕ್ಟ್ರಾನಿಕ್ ವಸ್ತುಗಳು, ಪೀಠೋಪಕರಣ, ಬಟ್ಟೆ ಸೇರಿದಂತೆ ಎಲ್ಲಾ ವಿಧದ ವಸ್ತುಗಳ ಮೇಲೆ ದೊಡ್ಡಮಟ್ಟದ ರಿಯಾಯ್ತಿ, ಇಎಂಐ ಸೌಲಭ್ಯ ಹಾಗೂ ಆಕರ್ಷಕ ಕೊಡುಗೆಗಳು ಗ್ರಾಹಕರಿಗೆ ಸಿಗಲಿವೆ ಎಂದು ಅಮೆಜಾನ್ ಹೇಳಿಕೊಂಡಿದೆ.
Amazon ICICI ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಸ್ವಾಗತ ಬಹುಮಾನವಾಗಿ ರೂ.2500 ಸಿಗುತ್ತದೆ. ಪ್ರೈಮ್ ಗ್ರಾಹಕರು 300 ರೂಪಾಯಿ ಕ್ಯಾಶ್ಬ್ಯಾಕ್ ಮತ್ತು 2,200 ರೂಪಾಯಿ ಮೌಲ್ಯದ ಬಹುಮಾನಗಳನ್ನು ಪಡೆಯಬಹುದು. ಇದರ ಜೊತೆಗೆ 30 ದಿನದ ಮೆಂಬರ್ಶಿಪ್ ತೆಗೆದುಕೊಳ್ಳುವ ಗ್ರಾಹಕರಿಗೆ ಕೊಡುಗೆಗಳು ಸಿಗುವ ಸಾಧ್ಯತೆಗಳಿರುತ್ತವೆ.
Intel, Samsung, OnePlus, Iqoo, Honor, Sony, Asus ನಂತಹ ಭಾರತೀಯ ಮತ್ತು ವಿದೇಶಿ ಬ್ರ್ಯಾಂಡ್ಗಳು ಸೇರಿದಂತೆ 450 ಕ್ಕೂ ಹೆಚ್ಚು ಬ್ರಾಂಡ್ ಗಳ ಉತ್ಪನ್ನಗಳು ಅಮೆಜಾನ್ ಪ್ರೈಮ್ ಡೇನಲ್ಲಿ ಮಾರಾಟಕ್ಕೆ ಇರಲಿವೆ. ನಿಮ್ಮ ನೆಚ್ಚಿನ ಬ್ರ್ಯಾಂಡ್ ಗಳ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ಖರೀದಿಸುವ ಅವಕಾಶವನ್ನು ಅಮೆಜಾನ್ ನೀಡುತ್ತಿದೆ. ಈ ಸೇಲ್ನಲ್ಲಿ, SBI, ICICI ಬ್ಯಾಂಕ್ ಕಾರ್ಡ್ಗಳು ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರ EMI ವಹಿವಾಟುಗಳ ಮೇಲೆ 10% ರಿಯಾಯಿತಿ ಸಿಗಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA