ಬೆಂಗಳೂರು/ತುಮಕೂರು: ವಿಧಿ ಪ್ರಜ್ಞ ಕರ್ನಾಟಕ ಕಾನೂನು ಸ್ವಯಂ ಸೇವಾ ಸಂಸ್ಥೆ, ಬೆಂಗಳೂರು ಇದರ ವತಿಯಿಂದ ಪ್ರತೀ ಭಾನುವಾರ “ಕಾನೂನು ಸಮಸ್ಯೆಗಳಿಗೆ ಉಚಿತ ಆನ್ಲೈನ್ ಕಾನೂನು ಸಮಾಲೋಚನೆ” ಕಾರ್ಯಕ್ರಮ ನಡೆಯುತ್ತಿದೆ. ಇಂದು(ಫೆ.23) ರಾತ್ರಿ 8ರಿಂದ 9 ಗಂಟೆಯವರೆಗೆ ಕಾನೂನು ಸಮಾಲೋಚನಾ ಕಾರ್ಯಕ್ರಮ ನಡೆಯಲಿದೆ.
ಝೂಮ್ ಮೀಟಿಂಗ್ ನಲ್ಲಿ ಈ ಉಚಿತ ಕಾನೂನು ಆನ್ಲೈನ್ ಕಾನೂನು ಸಮಾಲೋಚನಾ ಕಾರ್ಯಕ್ರಮ ನಡೆಯಲಿದ್ದು, ಡಾ. ಬಾಬಾಸಾಹೇಬ್ ಜಿನ್ನರಾಳಕರ್, ವಿಶ್ರಾಂತ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಮತ್ತು ಕಾನೂನು ಸಲಹೆಗಾರರು, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಬೆಂಗಳೂರು ಇವರು ಸಾರ್ವಜನಿಕರೊಂದಿಗೆ ನೇರವಾಗಿ ಸಂವಾದ ನಡೆಸಲಿದ್ದಾರೆ.
ವಿಧಿ ಪ್ರಜ್ಞ ಕರ್ನಾಟಕ ಕಾನೂನು ಸ್ವಯಂ ಸೇವಾ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಡಾ.ಪುರುಷೋತ್ತಮ್ ಜಿ. ಅವರು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಇಂದು ರಾತ್ರಿ 8ಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಗಲಿದೆ. ಮೊಬೈಲ್ ನಲ್ಲಿ ಕಾರ್ಯಕ್ರಮ ವೀಕ್ಷಿಸುವವರು Zoom Meeting ಡೌನ್ ಲೋಡ್ ಮಾಡಿಕೊಂಡು ಲಾಗಿನ್ ಆಗಿ ಈ ಕೆಳಗೆ ನೀಡಿರುವ ಲಿಂಕ್ ಗೆ ಕ್ಲಿಕ್ ಮಾಡಿ, ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಕಾನೂನಿನ ಕುರಿತಾಗಿ ನಿಮಗೆ ಇರುವ ಅನುಮಾನಗಳನ್ನು, ಸಮಸ್ಯೆಗಳ ಪರಿಹಾರ ಮಾರ್ಗೋಪಾಯಗಳ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
Zoom Meeting ಲಿಂಕ್:
https://us02web.zoom.us/j/89435063398?pwd=gv9jHSGWW3rxE8qJra8fm7LglPhLIf.1
Meeting ID: 894 3506 3398
Passcode: 1234
ಈ ಉಚಿತ ಕಾನೂನು ಆನ್ಲೈನ್ ಕಾನೂನು ಸಮಾಲೋಚನಾ ಕಾರ್ಯಕ್ರಮ ಸಂಪೂರ್ಣವಾಗಿ ನಮ್ಮತುಮಕೂರು ವಾಹಿನಿಯಲ್ಲಿ ಮರು ಪ್ರಸಾರವಾಗಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4