ನೀವು ಪ್ರತಿದಿನ ಪುದೀನಾ ತಿಂದರೆ ಈ ಅದ್ಭುತ ಪ್ರಯೋಜನಗಳು ನಿಮ್ಮದಾಗುತ್ತದೆ..!:
ಪುದೀನಾ ಖಾದ್ಯಗಳ ರುಚಿಯನ್ನು ಹೆಚ್ಚಿಸುವುದಷ್ಟೇ ಅಲ್ಲ. ನಮ್ಮ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಪುದೀನಾದಲ್ಲಿರುವ ಉತ್ಕರ್ಷಣ ನಿರೋಧಕ ಗುಣಗಳು ಚರ್ಮವನ್ನು ರಕ್ಷಿಸುತ್ತದೆ. ಪುದೀನಾ ಚರ್ಮವನ್ನು ತಾಜಾಗೊಳಿಸುತ್ತದೆ ಮತ್ತು ಪುನಃ ಸಕ್ರಿಯಗೊಳಿಸುತ್ತದೆ. ಪುದೀನಾದಲ್ಲಿ ವಿಟಮಿನ್ ಎ ಸಮೃದ್ಧವಾಗಿದ್ದು ಇದು ಕಣ್ಣಿನ ಆರೋಗ್ಯವನ್ನು ಸುಧಾರಿಸಿ, ದೃಷ್ಟಿಯನ್ನು ಸುಧಾರಿಸುತ್ತದೆ.
ಬೆಳಿಗ್ಗೆ ಈ ಪಾನೀಯವನ್ನು ಬಳಸುವುದರಿಂದ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ..!:
ಹಲ್ಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದು, ವಸಡುಗಳಲ್ಲಿ ಕೀವು ಮತ್ತು ಹಲ್ಲುಗಳ ನಡುವಿನ ಕೊಳೆಯಿಂದ ಬಾಯಿಯ ದುರ್ವಾಸನೆ ಉಂಟಾಗುತ್ತದೆ. ಇದನ್ನು ತಪ್ಪಿಸಲು ನೀರಿನಲ್ಲಿ ಲವಂಗವನ್ನು ಕುದಿಸಿ ಆರಿಸಿ ಕುಡಿಯಬಹುದು. 1 ಗ್ಲಾಸ್ ಬೆಚ್ಚಗಿನ ನೀರಿನಲ್ಲಿ 1 ಚಮಚ ನಿಂಬೆ ರಸವನ್ನು ಬೆರೆಸಿ ಬಾಯಿ ಮುಕ್ಕಳಿಸಿದರೆ ಬಾಯಿಯ ದುರ್ವಾಸನೆ ತಡೆಯುತ್ತದೆ. ನೀರಿನಲ್ಲಿ ತುಳಸಿಯನ್ನು ಕುದಿಸಿ ಬಾಯಿ ಮುಕ್ಕಳಿಸಿದರೆ ತುಳಸಿಯಲ್ಲಿರುವ ಬ್ಯಾಕ್ಟಿರಿಯಾ ವಿರೋಧಿ ಗುಣಗಳು ಬಾಯಿಯಿಂದ ಬ್ಯಾಕ್ಟಿರಿಯಾವನ್ನು ತೆಗೆದುಹಾಕುತ್ತದೆ.
ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಾಗಬೇಕಂದ್ರೆ ಇವುಗಳನ್ನು ಸೇವಿಸಿ:
ನಮ್ಮ ದೇಹ ಸರಿಯಾಗಿ ಕಾರ್ಯ ನಿರ್ವಹಿಸಬೇಕಾದರೆ ದೇಹದಲ್ಲಿ ರಕ್ತ ಸರಿಯಾದ ಪ್ರಮಾಣದಲ್ಲಿ ಇರುವುದು ಮುಖ್ಯ. ದೇಹದಲ್ಲಿ ರಕ್ತದ ಕೊರತೆ ಉಂಟಾದರೆ ಅದನ್ನು ರಕ್ತಹೀನತೆ ಎನ್ನುತ್ತಾರೆ. ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆಯಾದರೆ, ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುವಂತಹ ಆಹಾರವನ್ನು ಸೇವಿಸಬೇಕು. ದಾಳಿಂಬೆ, ಬೀಟ್ ರೂಟ್ ಮುಂತಾದ ಹಣ್ಣುಗಳನ್ನು ಸೇವಿಸಬೇಕು.
ಅತಿಯಾಗಿ ಉಪ್ಪನ್ನು ಸೇವಿಸುವುದರಿಂದ ಆಗುವ ದುಷ್ಪರಿಣಾಮಗಳಿವು..?:
ಉಪ್ಪಿಲ್ಲದೆ ಆಹಾರಕ್ಕೆ ರುಚಿಯಿಲ್ಲ. ಆದರೆ ಹೆಚ್ಚು ಉಪ್ಪು ಸೇವನೆ ಕೂಡ ಅಪಾಯಕಾರಿ ಎನ್ನುತ್ತಾರೆ ತಜ್ಞರು. ಒಬ್ಬ ವ್ಯಕ್ತಿಯು ಅಗತ್ಯಕ್ಕಿಂತ ಹೆಚ್ಚು ಉಪ್ಪನ್ನು ಸೇವಿಸಿದರೆ, ಅದು ಆತನ ದೇಹದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೃದ್ರೋಗ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಬೊಜ್ಜಿನ ಸಮಸ್ಯೆಯೂ ಉದ್ಭವಿಸುತ್ತದೆ. ಇದು ಹೃದಯಾಘಾತದ ಅಪಾಯವನ್ನೂ ಹೆಚ್ಚಿಸುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಹೀಗಾಗಿ ಉಪ್ಪನ್ನು ಮಿತವಾಗಿ ಸೇವಿಸಿ.
ಈ ಜಾತಿಯ ಅಲೋವೆರಾ ಬಳಸಿದ್ರೆ ಒಳ್ಳೆಯದು:
ನೀವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಅಲೋವೆರಾ ಜ್ಯೂಸ್ ಕುಡಿಯುತ್ತಿದ್ದರೆ ಈ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಿ. ಬಾರ್ಬಂಡೆನ್ಸಿಸ್ ಜಾತಿಯ ಅಲೋವೆರಾದಿಂದ ತಯಾರಿಸಲಾದ ಜ್ಯೂಸ್ ಓಳ್ಳೆಯದು ಎಂದು ಹೇಳುತ್ತಾರೆ. ಈ ಜಾತಿಯ ಅಲೋವೆರಾ ಸೇವನೆಯಿಂದ ಹಲವಾರು ಪ್ರಯೋಜನಗಳಿವೆ. ಇದನ್ನು ಸೇವಿಸಿದರೆ ಮುಖದ ಕಾಂತಿ ಹೆಚ್ಚುವುದಲ್ಲದೆ, ಕೂದಲಿಗೆ ಕೂಡ ಪ್ರಯೋಜನಕಾರಿ.