ಪ್ರತಿದಿನ ಬೆಳಗ್ಗೆ ಮೆಂತ್ಯೆ ನೀರನ್ನು ಕುಡಿದರೆ ಇಷ್ಟೆಲ್ಲಾ ಸಮಸ್ಯೆ ದೂರವಿಡಬಹುದು:
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವುದರಿಂದ ಅಧಿಕ ತೂಕ ಮತ್ತು ಬೊಜ್ಜು ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಮ್ಯಾಜಿಕ್ ಡ್ರಿಂಕ್ ಎಂದು ಕರೆಯಲ್ಪಡುವ ಮೆಂತ್ಯೆ ನೀರನ್ನು ಬೆಳಿಗ್ಗೆ ಕುಡಿಯುವುದರಿಂದ ಬೊಜ್ಜು ತ್ವರಿತವಾಗಿ ಕಡಿಮೆಯಾಗುತ್ತದೆ. ಇಂಗು ಫೈಬರ್, ಕಾರ್ಬೋಹೈಡ್ರೆಟ್, ಪ್ರೋಟೀನ್, ಕಬ್ಬಿಣ & ಕ್ಯಾಲ್ಸಿಯಂ ಅಂಶ ಒಳಗೊಂಡಿದ್ದು ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ & ತೂಕ ಇಳಿಸಲು ಈ ನೀರು ಸಹಕಾರಿ.
ಕೊಲೆಸ್ಟ್ರಾಲ್ ಕಡಿಮೆ ಮಾಡಲು ಬಾರ್ಲಿ ನೀರು:
ರಾತ್ರಿ ನೀರಿಗೆ ಹಾಕಿದ ಬಾರ್ಲಿಯನ್ನು ಸೋಸಿ, ನೀರನ್ನು ಬೆಳಗಿನ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಆರೋಗ್ಯಕ್ಕೆ ಹಲವು ರೀತಿಯ ಲಾಭಗಳುಂಟು. ಬಾರ್ಲಿ ನೀರು ದೇಹದಲ್ಲಿ ಜಮೆಯಾಗಿರುವ ಕೊಲೆಸ್ಟ್ರಾಲ್ ಕಡಿಮೆ ಮಾಡುವುದಕ್ಕೆ ಮಾತ್ರವಲ್ಲ, ಇನ್ನೂ ಹಲವು ಅನುಕೂಲಗಳನ್ನು ಕಲ್ಪಿಸಿಕೊಡುತ್ತದೆ. ಬಾರ್ಲಿ ನೀರಲ್ಲಿರುವುದು ಹೇರಳವಾದ ಕರಗಬಲ್ಲ ನಾರಿನಂಶ. ಹಾಗಾಗಿ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಬಾರ್ಲಿ ನೀರನ್ನು ಸೇವಿಸುವುದರಿಂದ ಬೇಡದ್ದನ್ನು ದೇಹದಿಂದ ಹೊರಗೆಸೆಯಲು ಅನುಕೂಲವಾಗುತ್ತದೆ.
ನಿಮ್ಮ ಕಣ್ಣಿನ ಆರೋಗ್ಯಕ್ಕೆ ಇಲ್ಲಿವೆ ಉತ್ತಮ ಆಹಾರ:
ನಮ್ಮ ಕಣ್ಣುಗಳ ಆರೋಗ್ಯ ಚೆನ್ನಾಗಿರಬೇಕೆಂದರೆ ನಾವು ಸೇವಿಸುವ ಆಹಾರ ಕೂಡ ಮುಖ್ಯವಾಗುತ್ತದೆ. ಕೆಲವು ತರಕಾರಿ, ಹಣ್ಣುಗಳನ್ನು ದಿನವೂ ಸೇವನೆ ಮಾಡುವುದರಿಂದ ಕಣ್ಣಿನ ಆರೋಗ್ಯ ಸುಧಾರಿಸುತ್ತವೆ. ಅಂತಹ ಕೆಲವು ಆಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ. ಹೌದು, ಕ್ಯಾರೆಟ್, ಪಾಲಕ್ ಸೊಪ್ಪು, ಕೇಲ್, ಸಾಲ್ಮನ್ ಮೀನು, ವಾಲ್ನಟ್ಸ್, ಬೆರಿ ಹಣ್ಣುಗಳು, ಕಿತ್ತಳೆ ಹಣ್ಣು, ಮೊಟ್ಟೆಗಳು, ಕ್ಯಾಪ್ತಿಕಂ ಇವೆಲ್ಲವನ್ನೂ ನಮ್ಮ ಆಹಾರದ ಭಾಗವಾಗಿ ಸೇವನೆ ಮಾಡುತ್ತಾ ಹೋದ್ರೆ ನಮ್ಮ ಕಣ್ಣಿನ ಅರೋಗ್ಯ ತುಂಬಾನೇ ಚನ್ನಾಗಿ ಇರುತ್ತದೆ.