ಮುಸುಕಿನ ಜೋಳದ ಜುಟ್ಟಿನಲ್ಲಿವೆ ಹಲವಾರು ಆರೋಗ್ಯ ಪ್ರಯೋಜನಗಳು:
ಜೋಳ ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ, ಅದರ ರೇಷ್ಮೆಯಂತಹ ಕೂದಲು ಸಹ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ. ಆದ್ರೆ ಇದು ನಿಜ, ಈ ಕಾರ್ನ್ ಸಿಲ್ಕ್ ನಿಂದ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತದೆ. ಮಧುಮೇಹ ನಿಯಂತ್ರಣ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಗರ್ಭಿಣಿಯರಿಗೆ ತುಂಬಾನೇ ಉಪಯುಕ್ತ. ಕಿಡ್ನಿಗಳಿಗೆ ಸೂಪರ್ ಮೆಡಿಸಿನ್ ಆಗಿದೆ.
ಊಟವಾದ ಕೂಡಲೇ ಈ ಪದಾರ್ಥ ಸೇವಿಸಿದರೆ ಜೀರ್ಣಕ್ರಿಯೆ ಉತ್ತಮವಾಗುತ್ತದೆ:
ರಾತ್ರಿಯಿಡೀ ನೀರಿನಲ್ಲಿ ಓಂಕಾಳನ್ನು ನೆನೆಸಿ ತಯಾರಿಸಿದ ಅಜೈನ್ ನೀರು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಊಟದ ನಂತರ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಆಹಾರವನ್ನು ತಿಂದ ನಂತರ ಒಂದು ಲೋಟ ಓಂಕಾಳಿನ ನೀರನ್ನು ಕುಡಿಯುವುದರಿಂದ ಉಬ್ಬುವುದು, ಅಜೀರ್ಣ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಓಂಕಾಳಿನ ಜೀರ್ಣಕಾರಿ ಗುಣಲಕ್ಷಣಗಳು ಜೀರ್ಣಕಾರಿ ಕಿಣ್ವಗಳ ಬಿಡುಗಡೆಯನ್ನು ಉತ್ತೇಜಿಸುತ್ತದೆ, ಸಮರ್ಥ ಪೋಷಕಾಂಶಗಳ ಹೀರಿಕೊಳ್ಳುವಿಕೆ ಮತ್ತು ಚಯಾಪಚಯವನ್ನು ಉತ್ತೇಜಿಸುತ್ತದೆ.
ಕಲ್ಲಂಗಡಿ ಕೊಳ್ಳುವ ಮುನ್ನ ಇದನ್ನು ಗಮನಿಸಿ:
ಕಲ್ಲಂಗಡಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಶೇ95 ರಷ್ಟು ನೀರನ್ನು ಒಳಗೊಂಡಿರುವ ಈ ಹಣ್ಣನ್ನು ಸೇವಿಸುವುದರಿಂದ ನಿರ್ಜಲೀಕರಣ ಸಮಸ್ಯೆ ನಮ್ಮಿಂದ ದೂರವಾಗುತ್ತದೆ. ಕಲ್ಲಂಗಡಿ ಹೆಣ್ಣು ಮತ್ತು ಗಂಡು ಜಾತಿಗಳನ್ನು ಹೊಂದಿದೆ. ಹೆಣ್ಣು ಕಲ್ಲಂಗಡಿಗಳು ಚಿಕ್ಕದಾಗಿರುತ್ತವೆ, ದುಂಡಾಗಿರುತ್ತವೆ ಮತ್ತು ಸಿಹಿಯಾಗಿರುತ್ತವೆ. ಗಂಡು ಕಲ್ಲಂಗಡಿಗಳು ಹೆಚ್ಚಿನ ನೀರಿನ ಅಂಶ ಮತ್ತು ತಿರುಳಿನೊಂದಿಗೆ ಮೊಟ್ಟೆಯ ಆಕಾರದಲ್ಲಿರುತ್ತವೆ. ಕಲ್ಲಂಗಡಿ ಭಾರವಾಗಿದ್ದರೆ, ಅದರೊಳಗೆ ಹೆಚ್ಚು ನೀರು ಮತ್ತು ತಿರುಳು ಇದೆ ಎಂದು ಅರ್ಥ.
ಮೊಡವೆಗಳಿಗೆ ಮನೆಮದ್ದು ಮಾಗಿದ ಪಪ್ಪಾಯಿ:
ಮುಖದ ಮೇಲಿನ ಮೊಡವೆಗಳನ್ನು ಹೋಗಲಾಡಿಸಲು ಕನಿಷ್ಠ ಒಂದು ವಾರ ಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ರಾತ್ರೋರಾತ್ರಿ ಇವುಗಳಿಂದ ಪರಿಹಾರ ಪಡೆಯಬಹುದು. ಹೌದು ರಾತ್ರಿ ಮಲಗುವ ಮುನ್ನ ಸ್ವಲ್ಪ ಮಾಗಿದ ಪಪ್ಪಾಯಿಯನ್ನು, ಮೊಡವೆಗಳ ಮೇಲೆ ಹಚ್ಚಿದರೆ ಬೆಳಗ್ಗೆ ಮೊಡವೆ ಮಾಯವಾಗುತ್ತದೆ. ಇದನ್ನು ವಾರಕ್ಕೆ 3 ಬಾರಿ ಮಾಡಿದರೆ ನೈಸರ್ಗಿಕವಾಗಿ ಉತ್ತಮ ಫಲಿತಾಂಶ ದೊರೆಯುತ್ತದೆ.
ಸ್ಟ್ರಾಬೆರಿ ತಿಂದರೆ ಲಾಭಗಳು ಹಲವು!:
ಕೆಂಬಣ್ಣದ ರಸಭರಿತ ಸ್ಟ್ರಾಬೆರಿಗಳಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ಹಾಗಾಗಿ ಹೃದಯವನ್ನು ಕಾಪಿಡುವ ಕೆಲಸವನ್ನಿದು ಚೆನ್ನಾಗಿ ಮಾಡಬಲ್ಲದು. ದೇಹದಲ್ಲಿ ಒಳ್ಳೆಯ ಕೊಬ್ಬನ್ನು ಹೆಚ್ಚಿಸುವುದು, ರಕ್ತದಲ್ಲಿನ ಪ್ಲೇಟ್ಲೆಟ್ ಸಂಖ್ಯೆಯನ್ನು ವೃದ್ಧಿಸುವುದು, ರಕ್ತದೊತ್ತಡ ನಿಯಂತ್ರಣದಲ್ಲಿ ಇರಿಸುವುದು- ಇಂಥ ಉಪಕಾರಿ ಕೆಲಸಗಳನ್ನು ಸ್ಟ್ರಾಬೆರಿ ಮಾಡಬಲ್ಲದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296