ಮೊಳಕೆಯೊಡೆದ ಕಡಲೆ ಆರೋಗ್ಯಕರ:
ಮೊಳಕೆಯೊಡೆದ ಕಡಲೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಮೆಗ್ನಿಷಿಯಂ, ಪೊಟ್ಯಾಶಿಯಂ, ವಿಟಮಿನ್ ಎ, ಬಿ6, ಸತು, ಮ್ಯಾಂಗನೀಸ್ ನಂತಹ ಪ್ರಮುಖ ವಿಟಮಿನ್ ಗಳಿವೆ. ಇದರಲ್ಲಿ ಪ್ರೊಟೀನ್ ಮತ್ತು ಫೈಬರ್ ಅಧಿಕವಾಗಿದ್ದು ಇದರಲ್ಲಿರುವ ಫೈಬರ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ದರಲ್ಲಿರುವ ಮ್ಯಾಂಗನೀಸ್ ವಯಸ್ಸಾದ ಸಮಸ್ಯೆಗಳನ್ನು ತಡೆಯುತ್ತದೆ. ಸುಕ್ಕುಗಳನ್ನು ಉಂಟುಮಾಡುವ ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಪೂರಕವಾಗಿದೆ.
ಹಸಿ ಈರುಳ್ಳಿ ತಿನ್ನುವುದರಿಂದ ಸಿಗುತ್ತೆ ಹಲವು ಪ್ರಯೋಜನಗಳು:
ಈರುಳ್ಳಿ ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಪ್ರತಿದಿನ ಈರುಳ್ಳಿ ಸೇವಿಸುವುದರಿಂದ ಮಧುಮೇಹ ಟೈಪ್-2 ರೋಗಿಗಳಿಗೆ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ. ದೇಹದಲ್ಲಿ ಕಂಡುಬರುವ ಊತ ಕಡಿಮೆ ಮಾಡಲು ಈರುಳ್ಳಿ ಪ್ರಯೋಜನಕಾರಿ. ಕಬ್ಬಿಣದ ಕೊರತೆ ಹೊಂದಿರುವವರು ನಿಮ್ಮ ಆಹಾರದಲ್ಲಿ ಈರುಳ್ಳಿ ಸೇರಿಸಿಕೊಳ್ಳಿ. ಈರುಳ್ಳಿ ಸೇವನೆಯಿಂದ ಸೋಂಕಿನಿಂದ ರಕ್ಷಿಸಿಕೊಳ್ಳಬಹುದು. ಪ್ರತಿದಿನ ಈರುಳ್ಳಿ ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆ ನಿವಾರಣೆಯಾಗುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


