ಹೃದಯದ ಆರೋಗ್ಯಕ್ಕೆ ಸೂಕ್ತ ಈ ಎಣ್ಣೆಗಳು:
ಮಾರುಕಟ್ಟೆಯಲ್ಲಿ ಹಲವು ರೀತಿಯ ಎಣ್ಣೆಗಳು ಲಭ್ಯವಿದ್ದು ಉತ್ತಮ ಆರೋಗ್ಯಕ್ಕಾಗಿ ಯಾವ ಎಣ್ಣೆಯನ್ನು ಬಳಸಬೇಕು ಎಂದು ಹಲವಾರು ಜನರು ಗೊಂದಲದಲ್ಲಿದ್ದಾರೆ. ಆರೋಗ್ಯ ತಜ್ಞರ ಪ್ರಕಾರ ಆಲಿವ್ ಎಣ್ಣೆ, ಅವಕ್ಯಾಡೋ ಎಣ್ಣೆ, ಕಡಲೆಕಾಯಿ ಎಣ್ಣೆ(ಶೇಂಗಾ ಎಣ್ಣೆ), ಎಳ್ಳಿನ ಎಣ್ಣೆ, ದ್ರಾಕ್ಷಿ ಬೀಜದ ಎಣ್ಣೆ ಹಾಗೂ ಸೋಯಾಬಿನ್ ಎಣ್ಣೆಯನ್ನು ಬಳಸಬಹುದು ಎಂದು ಹೇಳಲಾಗಿದೆ. ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಮತ್ತು ವೈದ್ಯರು ಸೂಚಿಸುವ ಔಷಧಿಗಳ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.
ತುಳಸಿಯಿಂದ ಇಷ್ಟು ಕೆಲಸ ಮಾಡಿ ಸಾಕು.. ಮತ್ತೆ ನೀವೇ ಬ್ಯೂಟಿಫುಲ್..
ತುಳಸಿ ಎಲೆಗಳನ್ನು ರುಬ್ಬಿಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪ, ನಿಂಬೆ ರಸ ಬೆರಸಿ ಮುಖಕ್ಕೆ ತೆಳುವಾಗಿ ಪ್ಯಾಕ್ ಹಾಕಿಕೊಳ್ಳಿ. ಒಣಗಿದ ಮೇಲೆ ಮಸಾಜ್ ಮಾಡುತ್ತಾ ಮುಖ ತೊಳೆಯಿರಿ. ಇದರಿಂದ ಮೊಡವೆ ಮತ್ತು ಮೊಡವೆ ಕಲೆಗಳು ನಿವಾರಣೆಯಾಗುತ್ತವೆ. ತುಳಸಿ ಪೇಸ್ಟ್ ಜೊತೆ ಸ್ವಲ್ಪ ಕೇಸರಿಯನ್ನು ಬರೆಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಬಹುದು. ಇದರಲ್ಲಿ ಬ್ಯಾಕ್ಟಿರಿಯಾ ಗುಣಗಳಿದ್ದು ಮುಖದ ಚರ್ಮವನ್ನು ಸೋಂಕಿನಿಂದ ರಕ್ಷಣೆ ಮಾಡುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296