ಈ ಎಣ್ಣೆ ಹಾಕಿ.. ನಿಮ್ಮ ಆರೋಗ್ಯಕ್ಕೂ ಬೆಸ್ಟ್:
ಸ್ನಾನ ಮಾಡಿ ಬಂದು ತಲೆ ಒಣಗಿಸಿಕೊಂಡ ಬಳಿಕ ನೆತ್ತಿಗೆ ಒಂದು ಚಮಚ ಎಳ್ಳು ಎಣ್ಣೆ ಹಾಕಿಕೊಂಡರೆ ದೇಹ ತಂಪಾಗಿರುತ್ತದೆ ಹಾಗೂ ಕಣ್ಣಿನ ಬದಿಯಲ್ಲಿ ಬರುವ ಮಡ್ಡಿ ದೂರವಾಗುತ್ತದೆ. ಚಳಿಗಾಲದಲ್ಲಿ ಕೈ, ಕಾಲು ಸೆಳೆತ ಎನ್ನುವವರು ಒಂದು ಚಮಚ ಎಳ್ಳೆಣ್ಣೆಯನ್ನು ಎರಡೂ ಕೈಗಳಿಂದ ಚೆನ್ನಾಗಿ ಉಜ್ಜಿ ಕೈ ಕಾಲಿಗೆ ಮಸಾಜು ಮಾಡಬೇಕು. ಇದರಿಂದ ದಿನವಿಡೀ ತ್ವಚೆ ಮೃದುವಾಗಿರುತ್ತದೆ. ಬೇರೆ ಎಣ್ಣೆಗಳಿಗೆ ಹೋಲಿಸಿದರೆ ಎಳ್ಳೆಣ್ಣೆ ಅಂಟು ಜಾಸ್ತಿ.. ಹಿಂಸೆ ಅನ್ನಸಿದ್ರೂ ಆರೋಗ್ಯದ ದೃಷ್ಟಿಯಿಂದ ಇದು ಬೆಸ್ಟ್.
ಚಕೋತ ಹಣ್ಣು ತಿನ್ನುವುದರಿಂದ ಇವೆ ಹಲವಾರು ಆರೋಗ್ಯ ಪ್ರಯೋಜನಗಳು:
ಚಕೋತ ಹಣ್ಣಿನಲ್ಲಿರುವ ಪೋಷಕಾಂಶಗಳು ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಹೌದು, ಇದು ತೂಕ ಇಳಿಸುವ ಆಹಾರದ ಭಾಗವಾಗಿ ಬಳಕೆಯಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚಕೋತ ಹಣ್ಣುಗಳು ಮಧುಮೇಹವನ್ನು ತಡೆಯುತ್ತದೆ. ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಮೂತ್ರಪಿಂಡದ ಆರೋಗ್ಯವನ್ನು ಉತ್ತೇಜಿಸುತ್ತದೆ. ದೇಹವನ್ನು ಹೈಡೇಟ್ ಮಾಡುತ್ತದೆ. ಮುಖದಲ್ಲಿನ ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296