ಮಾಂಸ ತಿನ್ನುವವರೇ ಎಚ್ಚರ.. ಹೀಗೆ ಮಾಡ್ಲೇಬೇಡಿ..!!
ಮಾಂಸಗಳನ್ನು ಹಲವು ದಿನಗಳ ಕಾಲವಿಟ್ಟು ಸೇವಿಸಬೇಡಿ. ಇದರಲ್ಲಿ ಬ್ಯಾಕ್ಟೀರಿಯಾಗಳು ಬಹಳ ಬೇಗನೆ ಬೆಳಯುತ್ತದೆ. ಇದನ್ನು ಸೇವಿಸಿದರೆ ನಿಮ್ಮ ದೇಹ ಅನಾರೋಗ್ಯಕ್ಕೀಡಾಗುತ್ತದೆ.
ಕಲ್ಲಂಗಡಿ ಹಣ್ಣನ್ನು ಕತ್ತರಿಸಿದ ತಕ್ಷಣ ತಿನ್ನಿ. ಇದನ್ನು ಹೆಚ್ಚು ಕಾಲ ಇಡಬೇಡಿ. ಯಾಕೆಂದರೆ ಇದರಲ್ಲಿ ಸಾಲ್ಮನೆಲ್ಲಾ ಮತ್ತು ಲಿಸ್ಟೇರಿಯಾದಂತಹ ರೋಗಕಾರಕ ಬ್ಯಾಕ್ಟೀರಿಯಾಗಳು ಹರಡುತ್ತದೆ. ಮೊಟ್ಟೆಯ ಸಿಪ್ಪೆ ಅದನ್ನು ಬ್ಯಾಕ್ಟಿರಿಯಾಗಳಿಂದ ರಕ್ಷಿಸುತ್ತದೆ. ಹಾಗಾಗಿ ಸಿಪ್ಪೆ ತೆಗೆದ ಮೊಟ್ಟೆಗಳನ್ನು ಹೆಚ್ಚು ಹೊತ್ತು ಇಟ್ಟು ತಿನ್ನಬೇಡಿ.
ಬಿರಿಯಾನಿ ಎಲೆಯಲ್ಲಿದೆ ಆರೋಗ್ಯದ ಗುಟ್ಟು:
ಬಿರಿಯಾನಿ ಎಲೆಯು ಅಸಂಖ್ಯಾತ ಆರೋಗ್ಯ ಪ್ರಯೋಜನಗಳನ್ನ ಹೊಂದಿರುವ ಸಸ್ಯವಾಗಿದೆ. ಈ ಎಲೆಗಳು ಆಹಾರದ ರುಚಿಯನ್ನ ಹೆಚ್ಚಿಸುವುದಲ್ಲದೆ ಪೋಷಕಾಂಶಗಳನ್ನ ಹೆಚ್ಚಿಸುತ್ತವೆ. ಬಿರಿಯಾನಿ ಎಲೆಯಲ್ಲಿ ಹಲವು ಪ್ರಯೋಜನಗಳಿವೆ. ಇದನ್ನ ತಿಳಿಯದೆ ಅನೇಕರು ಇದನ್ನ ಮಸಾಲೆ ಎಂದು ಪರಿಗಣಿಸುತ್ತಾರೆ. ಈ ಗಿಡದ ಎಲೆಗಳನ್ನ ಎಣ್ಣೆ ಮತ್ತು ಔಷಧ ತಯಾರಿಕೆಗೂ ಬಳಸುತ್ತಾರೆ.
ಆಯುರ್ವೇದದ ಪ್ರಕಾರ ಬಿರಿಯಾನಿ ಎಲೆಗಳು ಶಾಖವನ್ನ ಉಂಟು ಮಾಡುತ್ತವೆ. ಆದ್ದರಿಂದ ಇದು ಕಫ ಮತ್ತು ವಾತ ದೋಷಗಳನ್ನ ತೆಗೆದು ಹಾಕುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


