ನಿಮ್ಮ ದೇಹದ ಕೊಬ್ಬಿನಾಂಶ ಕರಗಿಸಲು ಈ ಜ್ಯೂಸ್ ಸೇವಿಸಿ:
ಇತ್ತೀಚಿನ ದಿನದಲ್ಲಿ ತೂಕ ಕಳೆದುಕೊಳ್ಳುವುದು ಅತೀ ಸಾಹಸದ ಕೆಲಸ. ಆದರೆ ಕೆಲ ಆಹಾರದ ಮೂಲಕ ನಾವು ಸುಲಭವಾಗಿ ತೂಕ ಕಳೆದುಕೊಳ್ಳಬಹುದು. ಅದಕ್ಕೆ ಈ ಜ್ಯೂಸ್ ಗಳು ಸಹಾಯ ಮಾಡುತ್ತದೆ. ಬೀಟ್ರೂಟ್ ಜ್ಯೂಸ್ ಸೇವನೆಯಿಂದ ಪೌಷ್ಟಿಕಾಂಶ ಸಿಗುತ್ತದೆ. ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಕ್ಯಾರೆಟ್ ಜ್ಯೂಸ್ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಹೊಟ್ಟೆ ಸಮಸ್ಯೆ ನಿವಾರಣೆಗೆ ಎಲೆಕೋಸು, ಪಾಲಕ್ ಜ್ಯೂಸ್ ಕುಡಿಯಬಹುದು. ಸೌತೇಕಾಯಿ ಜ್ಯೂಸ್, ಅಲೋವೆರಾ ಜ್ಯೂಸ್ ಸೇವನೆಯಿಂದ ಕೊಬ್ಬು ಕರಗಿಸಬಹುದು.
ಉಪವಾಸ ಇರುವಾಗ ಇವುಗಳನ್ನು ತಿಂದರೆ ದಿನವಿಡೀ ಸುಸ್ತಾಗುವುದಿಲ್ಲ..!:
ಖರ್ಜೂರವು ನೈಸರ್ಗಿಕ ಸಕ್ಕರೆಗಳಾದ ಗ್ಲೋಕೋಸ್ & ಸುಕ್ರೋಸ್ ಹೊಂದಿರುತ್ತದೆ. ಉಪವಾಸದ ವೇಳೆ ದೇಹಕ್ಕೆ ಶಕ್ತಿ ನೀಡುತ್ತವೆ. ಗೆಣಸು ಕರಗದ ಫೈಬರ್, ವಿಟಮಿನ್ & ಸಂಕೀರ್ಣ ಕಾರ್ಬೋಹೈಡ್ರೆಟ್ ಹೊಂದಿರುತ್ತದೆ. ಇವು ಕಡಿಮೆ ಗೈಸೆಮಿಕ್ ಸೂಚಿ ಹೊಂದಿದ್ದು ತಿಂದ ನಂತರ ರಕ್ತದಲ್ಲಿನ ಸಕ್ಕರೆ ನಿಧಾನವಾಗಿ ಹೆಚ್ಚಾಗಿ ದಿನವಿಡೀ ಶಕ್ತಿ ನೀಡುತ್ತದೆ. ಓಟ್ಸ್ ಪ್ರೋಟೀನ್, ಕರಗದ ಫೈಬರ್, ಸಂಕೀರ್ಣ ಕಾರ್ಬೋಹೈಡ್ರೆಟ್ ಗಳಲ್ಲಿ ಸಮೃದ್ಧವಾಗಿದ್ದು ಬಹಳ ಸಮಯದವರೆಗೆ ಹೊಟ್ಟೆ ತುಂಬಿದ ಭಾವನೆ ಜತೆಗೆ ದೇಹಕ್ಕೆ ಶಕ್ತಿ ನೀಡುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296