ಕುಂಬಳಕಾಯಿ ಹೂವಿನಿಂದ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?:
ಕುಂಬಳಕಾಯಿ ಮತ್ತು ಅದರ ಬೀಜಗಳು ಮಾತ್ರವಲ್ಲದೆ ಅವುಗಳ ಹೂವುಗಳೂ ಔಷಧೀಯ ಗುಣಗಳನ್ನು ಹೊಂದಿವೆ. ಕುಂಬಳಕಾಯಿ ಹೂವು ತಿನ್ನಲು ಸಹ ರುಚಿಕರವಾಗಿರುತ್ತದೆ. ಕುಂಬಳಕಾಯಿ ಹೂವುಗಳು ಸಾಕಷ್ಟು ಕ್ಯಾಲ್ಸಿಯಂ, ರಂಜಕ, ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ. ಹೀಗಾಗಿ ಈ ಹೂವು ಅನೇಕ ರೋಗಗಳ ವಿರುದ್ಧ ಹೋರಾಡಲು ನಮಗೆ ಸಹಾಯ ಮಾಡುತ್ತದೆ. ಕುಂಬಳಕಾಯಿ ಹೂಗಳನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಾಗಲಿವೆ. ಕುಂಬಳಕಾಯಿ ಹೂವುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಬಾಳೆಹಣ್ಣಿನ ಜೊತೆ ಹಾಲು ಕುಡಿಯುವುದು ಆರೋಗ್ಯಕ್ಕೆ ಅಪಾಯ?:
ಬಾಳೆಹಣ್ಣು ಹಾಗೂ ಹಾಲು ಕುಡಿಯುವುದರಿಂದ ನಿಮ್ಮ ದೇಹದ ತೂಕ ಹೆಚ್ಚಾಗುತ್ತದೆ. ಆದರೆ, ಅಸ್ತಮಾದಂತ ಸಮಸ್ಯೆ ಇರುವವರು ಬಾಳೆಹಣ್ಣಿನ ಮಿಲ್ಕ್ ಶೇಕ್ ಕುಡಿಯುವುದು ಒಳ್ಳೆಯದಲ್ಲ. ಬಾಳೆಹಣ್ಣನ್ನು ಹಾಲಿನೊಂದಿಗೆ ಸೇವಿಸುವುದರಿಂದ ದೇಹದಲ್ಲಿ ಜೀರ್ಣಶಕ್ತಿ ದುರ್ಬಲಗೊಳ್ಳುತ್ತದೆ. ಇದರಿಂದ ಶೀತ, ಉಸಿರಾಟದ ತೊಂದರೆ, ಕಫದ ಸಮಸ್ಯೆ ಉಂಟಾಗಬಹುದು. ತಜ್ಞರ ಪ್ರಕಾರ, ಬಾಳೆಹಣ್ಣು ಹಾಗೂ ಹಾಲನ್ನು ಒಟ್ಟಿಗೆ ಸೇವಿಸದಿರುವುದು ಆರೋಗ್ಯಕ್ಕೆ ಒಳ್ಳೆಯದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296