ಶೇಂಗಾ ಚಿಕ್ಕಿಯಲ್ಲಿದೆ ರೋಗ ನಿರೋಧಕ ಶಕ್ತಿ..!
ಋತುಮಾನ ಬದಲಾದಾಗ ಎದುರಾಗುವ ಸವಾಲುಗಳನ್ನು ಎದುರಿಸಲು ಆರೋಗ್ಯಕರ ಆಹಾರಗಳನ್ನು ಆರಿಸಿಕೊಳ್ಳುವುದು ಸೂಕ್ತ ಎನ್ನುತ್ತಾರೆ ಪೌಷ್ಟಿಕತಜ್ಞರು. ಶೇಂಗಾ, ಬೆಲ್ಲ, ಎಳ್ಳು ಮತ್ತು ಒಣ ಹಣ್ಣುಗಳೊಂದಿಗೆ ಮಾಡಿದ ಚಿಕ್ಕಿಯು ಚಳಿಗಾಲದಲ್ಲಿ ಆರೋಗ್ಯಕ್ಕೆ ಒಳ್ಳೆಯದು ಎಂದು ಪೌಷ್ಟಿಕತಜ್ಞರು ಸೂಚಿಸುತ್ತಾರೆ. ಶೇಂಗಾ ಚಿಕ್ಕಿಯಲ್ಲಿರುವ ಬೆಲ್ಲವು ದೇಹಕ್ಕೆ ಅಗತ್ಯವಿರುವ ಕಬ್ಬಿಣದ ಅಂಶವನ್ನು ಒದಗಿಸುತ್ತದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ಗಳಿಂದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ.
ತುಪ್ಪದ ಕಾಫಿಯಲ್ಲಿವೆ ಅನೇಕ ಅರೋಗ್ಯ ಪ್ರಯೋಜನಗಳು:
ಆರೋಗ್ಯಕರ ಕೊಬ್ಬಿನಿಂದ ಸಮೃದ್ಧವಾಗಿರುವ ತುಪ್ಪವು ಚಳಿಗಾಲದಲ್ಲಿ ಆಹಾರದ ಭಾಗವಾಗಿದೆ ಮತ್ತು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ತಜ್ಞರು ಹೇಳುತ್ತಾರೆ. ಚಳಿಗಾಲದಲ್ಲಿ ತುಪ್ಪದ ಕಾಫಿ ಸೇವಿಸುವುದು ಉತ್ತಮ ಎಂದು ಪೌಷ್ಟಿಕತಜ್ಞರು ಸಲಹೆ ನೀಡುತ್ತಾರೆ. ತುಪ್ಪದಲ್ಲಿರುವ ಆರೋಗ್ಯಕರ ಕೊಬ್ಬುಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಉತ್ತಮವಾಗಿ ನಿರ್ವಹಿಸುತ್ತದೆ. ಹೆಚ್ಚು ಕಾಲ ನಿಮ್ಮನ್ನು ಉತ್ಸುಕರನ್ನಾಗಿಸಿರಿಸುತ್ತದೆ.