ಕಾಮಕಸ್ತೂರಿ ಬೀಜ ಹಾಗೂ ದಾಲ್ಟಿನ್ನಿ ನೀರು ಸೇವಿಸೋದ್ರಿಂದ ತೂಕ ಇಳಿಕೆ ಸಾಧ್ಯ!
ದಾಲ್ಟಿನ್ನಿ ನೀರಿನಲ್ಲಿ ಸಬ್ಬಾ ಬೀಜಗಳು ಅಥವಾ ಕಾಮಕಸ್ತೂರಿ ಬೀಜಗಳನ್ನು ನೆನೆಸಿಟ್ಟು ಸೇವಿಸುವುದರಿಂದ ತೂಕ ಇಳಿಕೆಯ ಪ್ರಯತ್ನಗಳು ಶೀಘ್ರವೇ ಫಲಕೊಡುತ್ತವೆ.
ಇವು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಜೊತೆಗೇ ದೇಹಕ್ಕೆ ನೀರಿನಂಶ, ಆಂಟಿ ಆಕ್ಸಿಡೆಂಟುಗಳು, ಖನಿಜಗಳು ಹಾಗೂ ಇತರ ಪೋಷಕಾಂಶಗಳನ್ನೂ ನೀಡುತ್ತವೆ. ಈ ನೀರನ್ನು ಮುಂಜಾನೆಯ ಪ್ರಥಮ ಆಹಾರವಾಗಿ ಸೇವಿಸುವ ಮೂಲಕ ತೂಕ ಇಳಿಕೆಯ ಪ್ರಯತ್ನಗಳಿಗೆ ಗರಿಷ್ಟ ಪ್ರಯೋಜನ ಲಭಿಸುತ್ತದೆ.
ಮಾನಸಿಕ ಆರೋಗ್ಯಕ್ಕೂ ಬಾಳೆಹಣ್ಣು ಮದ್ದು.!
ಬಾಳೆಹಣ್ಣು ಮಾನಸಿಕ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ಪೊಟ್ಯಾಶಿಯಂ ಮತ್ತು ಡೋಪಮೈನ್ ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಪ್ರತಿ ದಿನ ನಿಯಮಿತವಾಗಿ ಸೇವಿಸಿದರೆ ರಕ್ತದೊತ್ತಡವನ್ನು ನಿಯಂತ್ರಿಸಬಹುದು.
ಮುಟ್ಟಿನ ಸಮಯದಲ್ಲಿ ಮಹಿಳೆಯರು ಎದುರಿಸುವ ನೋವಿಗೆ ಬಾಳೆಹಣ್ಣು ಕೂಡ ಪರಿಣಾಮಕಾರಿಯಾಗಿದೆ. ಇದು ಹೊಟ್ಟೆ ನೋವನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಮಲಗುವ ಮುನ್ನ ಪ್ರತಿದಿನ ಬಾಳೆಹಣ್ಣು ತಿನ್ನುವುದು ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೂ ಪರಿಹಾರವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296