ಮಲಬದ್ಧತೆಯಿಂದ ತಕ್ಷಣ ಪರಿಹಾರ ಬೇಕಾದರೆ ಈ ಜ್ಯೂಸ್ ಗಳನ್ನು ಸೇವಿಸಿ:
ಮಲಬದ್ಧತೆ ಬಹಳ ಹಿಂಸೆ ನೀಡುವ ಸಮಸ್ಯೆಯಾಗಿದೆ. ನಮ್ಮ ದೇಹದಲ್ಲಿ ಸಾಕಷ್ಟು ನೀರಿನಂಶ ಇಲ್ಲದಿದ್ದಾಗ, ಸೇವಿಸುವ ಆಹಾರದಲ್ಲಿ ಫೈಬರ್ ಅಂಶ ಕಡಿಮೆಯಾದಾಗ ಮಲ ವಿಸರ್ಜನೆ ಕಷ್ಟವಾಗುತ್ತದೆ. ಈ ಸಮಸ್ಯೆಯನ್ನು ಮಲಬದ್ಧತೆ ಎಂದು ಕರೆಯಲಾಗುತ್ತದೆ. ಈ ಸಮಸ್ಯೆಗೆ ಪರಿಹಾರಕ್ಕಾಗಿ ಕೆಲವು ಜ್ಯೂಸ್ಗಳನ್ನು ಸೇವಿಸಬಹುದು. ಅಲೋವೆರಾ ಜ್ಯೂಸ್, ಸೇಬಿನ ಜ್ಯೂಸ್, ಕಿತ್ತಳೆ ಜ್ಯೂಸ್, ಪಾಲಕ್ ಜ್ಯೂಸ್, ಪಿಯರ್ ಜ್ಯೂಸ್, ನಿಂಬೆ ಜ್ಯೂಸ್ ಇವುಗಳು ಮಲಬದ್ಧತೆಯ ಸಮಸ್ಯೆಯಿಂದ ತಕ್ಷಣದ ಪರಿಹಾರವನ್ನು ನೀಡುತ್ತದೆ.
ನಿಮಗೆ ಹುಷಾರಿಲ್ಲದಿರುವಾಗ ಈ 8 ಆಹಾರಗಳನ್ನು ಸೇವಿಸಿ, ಬೇಗ ಗುಣಮುಖರಾಗುತ್ತೀರಿ..!
ಶುಂಠಿ ಚಹಾವು ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುತ್ತದೆ. ಇದು ವಾಕರಿಕೆ ಕಡಿಮೆ ಮಾಡಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಜೇನುತುಪ್ಪವು ಆಂಟಿಆಕ್ಸಿಡೆಂಟ್ ಗಳನ್ನು ಹೊಂದಿದ್ದು ಅದು ರೋಗ ನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅನ್ನವು ಸುಲಭವಾಗಿ ಜೀರ್ಣವಾಗುತ್ತದೆ. ಹೊಟ್ಟೆನೋವು ಇದ್ದಾಗ ಅನ್ನ ತಿನ್ನುವುದು ಒಳ್ಳೆಯದು. ಕ್ಯಾರೆಟ್ ಸೂಪ್ ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ದೇಹವನ್ನು ಬೆಚ್ಚಗಾಗಿಸುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296