ದಿನದಿಂದ ದಿನಕ್ಕೆ ಏರುತ್ತಿದ್ದ ಬಿಸಿಲಿನ ತಾಪಮಾನಕ್ಕೆ ಜನ ರೋಸಿ ಹೋಗಿದ್ದರು. ಈ ಬಿರುಬಿಸಿಲಿನ ಶಾಖಕ್ಕೆ ಜನ ಹೈರಾಣಾಗಿರಬೇಕಾದ್ರೇನೇ ವರುಣ ಎರಡು ದಿನಗಳ ಗ್ಯಾಪ್ ನಂತ್ರ ಮತ್ತೆ ಬೆಂಗಳೂರಿನಲ್ಲಿ ಮಳೆರಾಯನ ಅಬ್ಬರ ಶುರುವಾಗಿದೆ. ರಾಜ್ಯಲ್ಲೂ ಮಳೆರಾಯನ ಅಬ್ಬರ ಕಮ್ಮಿ ಏನ್ ಇಲ್ಲ. ರಾಜ್ಯದಲ್ಲಿ ಎಲ್ಲೆಲ್ಲಿ ಏನೇನು ಆಗಿದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು:
ಎರಡು ದಿನಗಳ ಗ್ಯಾಪ್ ನಂತರ ಮತ್ತೆ ಬೆಂಗಳೂರಿನಲ್ಲಿ ಮಳೆರಾಯನ ಅಬ್ಬರ ಶುರುವಾಗಿದೆ. ಟೌನ್ ಹಾಲ್, ವಿಲ್ಸನ್ ಗಾರ್ಡನ್, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಮಳೆಯಾಗಿದ್ದು, ಬೆಂಗಳೂರಿನ ಹೊರ ವಲಯದಲ್ಲೂ ಕೂಡ ಭಾರೀ ಮಳೆಯಾಗಿದೆ. ಪದ್ಮನಾಭನಗರ ಸುತ್ತ-ಮುತ್ತ, ವೈಟ್ ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ, ಚಂದಾಪುರ, ಜೆಪಿನಗರ, ನೈಸ್ ರಸ್ತೆ ಸೇರಿದಂತೆ ಹಲವೆಡೆ ಮಳೆಯಾಗಿದೆ. ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಯ ಅಬ್ಬರಕ್ಕೆ ಗಿಡಗಂಟಿಗಳು ನೆಲಸಮವಾಗಿವೆ. ರಾಜ್ಯದ 13 ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಜಿಲ್ಲೆಯ ಜನ ಎಚ್ಚರದಿಂದ ಇರುವಂತೆ ತಿಳಿಸಿದೆ.
ದಕ್ಷಿಣ ಕನ್ನಡ:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಗಾಳಿ ಸಹಿತ ಮಳೆಗೆ ಹಲವೆಡೆ ಹಾನಿಗಳಾಗಿದೆ. ಪುತ್ತೂರಿನ ಉರ್ಲಾಂಡಿಯಲ್ಲಿ ಮರ ಬಿದ್ದು ಬಪ್ಪಳಿಗೆಯ ಸಿಂಗಾಣಿ ಎಂಬಲ್ಲಿ ಶೋಭ ಹೆಗ್ಡೆ ಎಂಬವರ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದ್ರೆ. ಇತ್ತ ಬಪ್ಪಳಿಗೆಯ ಸಿಂಗಾಣಿ ನಿವಾಸಿ ಕಮಲ ಮನೆಯ ಮೇಲಿನ ಶೀಟು ಗಾಳಿಗೆ ಹಾರಿ ಹಾನಿಯಾಗಿದೆ. ಘಟನಾ ಸ್ಥಳಗಳಿಗೆ ಶಾಸಕ ಅಶೋಕ್ ರೈ ಭೇಟಿ ನೀಡಿ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಳೆಗಾವಿ:
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಹುಕ್ಕೇರಿ, ರಾಯಬಾಗ, ನಿಪ್ಪಾಣಿ ತಾಲೂಕಿನ ವಿವಿಧೆಡೆ ಮಳೆರಾಯನ ಅಬ್ಬರ ಜೋರಾಗಿದ್ದು, ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಮಳೆಯ ಸಿಂಚನದಿಂದ ತಂಪಾದ ವಾತಾವರಣವಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಬೀದರ್:
ಬೀದರ್ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಜಿಟಿಜಿಟಿ ಮಳೆಯಾಗ್ತಿದೆ. ಔರಾದ್ ತಾಲೂಕಿನ ಕೊಳ್ಳೂರ ಗ್ರಾಮದಲ್ಲಿ ಬಿರುಗಾಳಿ ಸಹಿತ ಮಳೆಗೆ ಬೇವಿನ ಮರ, ಮಾವಿನ ಮರ ಸೇರಿದಂತೆ 15ಕ್ಕೂ ಹೆಚ್ಚು ಮರಗಳು ಧರಾಶಾಹಿಯಾಗಿದೆ.
ಬಾಗಲಕೋಟೆ:
ಬಾಗಲಕೋಟೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅಲ್ಲಲ್ಲಿ ಗುಡುಗು ಸಹಿತ ಬಿರುಸಿನ ಮಳೆಯಾಗಿದೆ. ಜೋರಾದ ಗಾಳಿಯಿಂದ ಕೆಲವಡೆ ಬೃಹತ್ ಕಟೌಟ್ ಮೂಲಕ ಹಾಕಿದ್ದ ಬ್ಯಾನರ್ಗಳು ಸಹ ಹಾರಿ ಹೋಗಿದ್ದು, ಇತ್ತ ಜಿಲ್ಲೆಯ ಭಗವತಿ, ಕೆರೂರ, ಬಾದಾಮಿ ಸೇರಿದಂತೆ ವಿವಿಧೆಡೆ ಬಿರುಸಿನ ಮಳೆಯಾಗಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಬಾಗಲಕೋಟೆ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಇನ್ನು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಮಂಡ್ಯ, ರಾಮನಗರ, ಶಿವಮೊಗ್ಗಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ತಂಪಾದ ವಾತಾವರಣಕ್ಕೆ ಜನ ಫುಲ್ ಖುಷ್ ಆಗಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


