ಬೆಂಗಳೂರು : ಮೀಟರ್ ಗಿಂತ ಅಧಿಕ ಬಾಡಿಗೆ ಕೇಳಿದ, ನೋ ಪಾರ್ಕಿಂಗ್, ಸಮವಸ್ತ್ರ ಧರಿಸದ ಕಾರಣ ನಿಯಮ ಉಲ್ಲಂಘಿಸಿದ್ದ ವಿವಿಧ ಆಟೋ ಚಾಲಕರಿಗೆ ಸಂಚಾರ ಪೂರ್ವ ವಿಭಾಗದ ಪೊಲೀಸರು ದಂಡ ಹಾಕಿದ್ದಾರೆ.
ಮೀಟರ್ ಗಿಂತ ಹೆಚ್ಚು ಬಾಡಿಗೆ ಕೇಳಿದ ಆರೋಪದಡಿ 50 ಪ್ರಕರಣಗಳು, ಸಮವಸ್ತ್ರ ಧರಿಸದಿದ್ದಕ್ಕೆ 165, ನೋ ಪಾರ್ಕಿಂಗ್ ಮಾಡಿದ್ದಕ್ಕೆ 35 ಹಾಗೂ ಕರೆದಲ್ಲಿಗೆ ಬಾರದಿರುವ ಕಾರಣಕ್ಕೆ ಆಟೋ ಚಾಲಕರ ವಿರುದ್ಧ 55 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಂಚಾರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾಲತಾಣಗಳ ಮೂಲಕ ಸಾರ್ವಜನಿಕರಿಂದ ದೂರು ಬಂದ ನಿಮಿತ್ತ ಜು.4ರಂದು ಸಂಚಾರಿ ಪೊಲೀಸರು ವಿಶೇಷ ಕಾರ್ಯಚರಣೆ ನಡೆಸಿದ್ದಾರೆ. ಅಂದು 300ಕ್ಕೂ ಹೆಚ್ಚು ಪ್ರಕರಣ ದಾಖಲಿಸಿ 1,52,000 ರೂಪಾಯಿ ದಂಡವನ್ನು ವಿಧಿಸಿ ಈ ಕ್ರಮಕೈಗೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


