ಬಿಗ್ ಬಾಸ್ ಮನೆಯಲ್ಲಿ ಈ ವಾರ ರಕ್ಕಸ ಹಾಗೂ ಗಂಧರ್ವರು ಎಂಬ ಟಾಸ್ಕ್ ನಡೆಯುತ್ತಿದೆ. ನಿನ್ನೆ ಹಾಗೂ ಮೊನ್ನೆ ಟೆಲಿಕಾಸ್ಟ್ ಆದ ಎಪಿಸೋಡ್ ನಲ್ಲಿ ಸಂಗೀತಾ ಅಂಡ್ ಟೀಂ ರಾಕ್ಷಸರಾಗಿ ಕಾಣಿಸಿಕೊಂಡಿದ್ದರು. ವರ್ತೂರ್ ಸಂತೋಷ್ ಅಂಡ್ ಟೀಂ ಗಂಧರ್ವರಾಗಿ ಇದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಈ ಟಾಸ್ಕ್ ಆಡುವಾಗ ತೊಂದರೆಯಾಗಿ ಬಿಗ್ ಬಾಸ್ ಮನೆಯಿಂದ ಸಂಗೀತಾ ಹಾಗೂ ಡೋನ್ ಪ್ರತಾಪ್ ಆಸ್ಪತ್ರೆಗೆ ದಾಖಲಾಗಿದ್ದಾರಂತೆ.
ನಿಜಕ್ಕೂ ಇವರಿಗೆ ಏನಾದರೂ ಆಗಿದೆಯಾ ಎಂಬುದನ್ನು ತಿಳಿಯಲು ಇಂದಿನ ಎಪಿಸೋಡ್ ವರೆಗೂ ಕಾದು ನೋಡಬೇಕಿದೆ.