ಉತ್ತರ ಪ್ರದೇಶದ ಜಾನ್ಪುರ ಜಿಲ್ಲೆಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದ್ದು, ಈ ಭೀಕರ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಲ್ಲದೆ ತನಿಖೆ ಆರಂಭಿಸಲಾಗಿದೆ.
ಅನೀಶ್ ಶರ್ಮಾ (35), ಗಜಧರ ಶರ್ಮಾ (60), ಜವಾಹರ್ ಶರ್ಮಾ (57), ಗೌತಮ್ ಶರ್ಮಾ (17), ಸೋನಂ (34), ರಿಂಕು (32) ಮೃತ ವ್ಯಕ್ತಿಗಳು. ಇವರೆಲ್ಲರೂ ಸ್ಟೇಷನ್ ರೋಡ್ ರಿಗಾ ಪೊಲೀಸ್ ಠಾಣೆಯ ನಿವಾಸಿಗಳು. ಗಾಯಗೊಂಡವರಲ್ಲಿ ಕಾರು ಚಾಲಕ ಜೀತು ಶರ್ಮಾ (25), ಮೀನಾ ದೇವಿ (40), ಯುಗ್ ಶರ್ಮಾ (7) ಎಂದು ಗುರುತಿಸಲಾಗಿದೆ.
ಶನಿವಾರ ರಾತ್ರಿ 2.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಗೌರಬಾದ್ಶಹಪುರ ಪೊಲೀಸ್ ಠಾಣಾ ವ್ಯಾಪ್ತಿಯ ಜಾನ್ಪುರ-ಅಜಂಗಢ ಹೆದ್ದಾರಿಯ ಪ್ರಸಾದ್ ಕೆರಕಟ್ ಛೇದನದ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಒಂದು ಕುಟುಂಬದ ಒಂಬತ್ತು ಸದಸ್ಯರು ಜುನ್ಸಿ ಹುಡುಗಿಯನ್ನು ನೋಡಲು ಬಿಹಾರದ ಸೀತಾಮರ್ಹಿಯಿಂದ ಪ್ರಯಾಗ್ರಾಜ್ಗೆ ಕಾರಿನಲ್ಲಿ ಹೋಗುತ್ತಿದ್ದರು ಎಂದು ವರದಿಯಾಗಿದೆ. ವೇಗವಾಗಿ ಬಂದ ಟ್ರಕ್ ವೊಂದು ಕಾರಿಗೆ ಡಿಕ್ಕಿ ಹೊಡೆದ ಕಾರಣ ಈ ಅವಘಡ ನಡೆದಿದೆ. ಘಟನಾ ಸ್ಥಳದಲ್ಲಿ ಸೇರಿದ ಜನರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕ್ಕಪಕ್ಕದ ಜನರು ಸ್ಥಳಕ್ಕೆ ಆಗಮಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.
ಪೊಲೀಸರ ಪ್ರಕಾರ, ಬಿಹಾರದ ಸೀತಾಮರ್ಹಿ ನಿವಾಸಿ ಗಜಧರ್ ಶರ್ಮಾ ತನ್ನ ಕುಟುಂಬದ ಒಂಬತ್ತು ಸದಸ್ಯರೊಂದಿಗೆ ತನ್ನ ಮಗ ಚಂದನ್ ಶರ್ಮಾನಿಗೆ ಹುಡುಗಿ ನೋಡಲೆಂದು ಏಳು ಸೀಟಿರುವ ಕಾರಿನಲ್ಲಿ ಪ್ರಯಾಗ್ರಾಜ್ನಲ್ಲಿರುವ ಜುಸಿಗೆ ಹೋಗುತ್ತಿದ್ದರು. ವಾಪಾಸು ಬರುವ ಸಂದರ್ಭದಲ್ಲಿ ಈ ಆಕ್ಸಿಡೆಂಟ್ ನಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸುಮಾರು 10 ಮೀಟರ್ ದೂರದವರೆಗೆ ಹೋಗಿದೆ. ಘಟನೆಯ ನಂತರ ಲಾರಿ ಚಾಲಕ ಮತ್ತು ಸಹಾಯಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಪೊಲೀಸರು ಕ್ರೇನ್ ಮತ್ತು ಜೆಸಿಬಿ ಬಳಸಿ ಹಾನಿಗೊಳಗಾದ ಕಾರು ಮತ್ತು ಟ್ರಕ್ ಅನ್ನು ತೆಗೆದುಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


