ತುಮಕೂರು: ಈಗಾಗಲೇ ಬೆಂಗಳೂರು ಹಾಗೂ ತುಮಕೂರು ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುತ್ತಿದ್ದ ವೇಳೆ ಆದಂತಹ ತೊಂದರೆಗಳನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಬಳಿ ಹೇಳಿದ್ದೆ. ಈ ಕುರಿತು ಸವಿಸ್ತಾರವಾಗಿ ಪತ್ರವನ್ನು ಸಹ ಬರೆದಿದ್ದೆ. ಎಷ್ಟು ಕಾಮಗಾರಿ ಆಗಿದೆ ಎಂಬ ಬಗ್ಗೆ ಎಲ್ಲವನ್ನು ಹೇಳಿದ್ದೆ. ನವೆಂಬರ್ 20ರಂದು ಅಧಿಕಾರಿಗಳನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಹೆದ್ದಾರಿಯ ಬಗ್ಗೆ ಸಂಪೂರ್ಣ ಎಂಟು ಹತ್ತು ಪೇಜ್ ವರದಿಯನ್ನು ನಮ್ಮ ಅಧಿಕಾರಿಗಳು ನೀಡಿದ್ದರು. ಮೂರು ವರ್ಷದಲ್ಲಿ 256 ಜನ ಸಾವನಪ್ಪಿದ್ದರು. ಎಲ್ಲಿ ಅಪಘಾತಗಳು ಆಗುತ್ತಿದ್ದವು ಅದೇ ಸ್ಥಳದಲ್ಲಿ ಪದೇ ಪದೇ ಆಗುತ್ತಿವೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು.
ಎರಡು ದಿನಗಳ ಹಿಂದೆ ನೆಲಮಂಗಲ ಕಾರಿನ ಮೇಲೆ ಟ್ರಕ್ ಉರುಳಿ ಬಿದ್ದ ಪರಿಣಾಮ ಆರು ಮಂದಿ ಮೃತಪಟ್ಟ ಪ್ರಕರಣದ ಹಿನ್ನೆಲೆ ತುಮಕೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಜನವರಿ ಎರಡರಿಂದ ಕಾಮಗಾರಿಯನ್ನು ಪ್ರಾರಂಭ ಮಾಡಲಾಗುವುದು. ಯುದ್ಧೋಪಾದಿಯಲ್ಲಿ ಕಾಮಗಾರಿಯನ್ನು ನಡೆಸಿ, ಮುಂದಿನ ನಾಲ್ಕೈದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಒತ್ತಡ ತಂದಿದ್ದೇನೆ ಎಂದರು.
ನೆಲಮಂಗಲದಿಂದ ತುಮಕೂರು ಜಿಲ್ಲೆಯ ಊರುಕೆರೆ ಅರು ಪಥದ ರಸ್ತೆ ಕಾಮಗಾರಿಗೆ ಅನುಮೋದನೆ ಸಿಕ್ಕಿದೆ. ನೆಲಮಂಗಲದಿಂದ 45 ಕಿ.ಮೀ. ಹೊರಗಿನ ರಸ್ತೆಗೆ 2,046 ಕೋಟಿ ರೂ. ಅನುದಾನ ಸಿಕ್ಕಿದೆ. ಆದ್ರೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಗುತ್ತಿಗೆದಾರ ಬಿಟ್ಟುಹೋಗುವ ಸ್ಥಿತಿಯಲ್ಲಿ ಇದ್ದನು ಎಂದು ಅವರು ಹೇಳಿದರು.
ರಾಷ್ಟ್ರೀಯ ಹೆದ್ದಾರಿಯ ಸ್ಥಿತಿಗತಿಯ ವರದಿಯನ್ನು ಕೇಂದ್ರ ಸಚಿವ ಗಡ್ಕರ್ ಅವರ ಗಮನಕ್ಕೆ ತಂದಿದ್ದೇವೆ. ಅವರು ಗುತ್ತಿಗೆದಾರರನ್ನು ಕರೆಸಿ, ಮಾತನಾಡಿದ್ದಾರೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx