nammatumakuru

    Subscribe to Updates

    Get the latest creative news from FooBar about art, design and business.

    What's Hot

    ತಾಳ್ಮೆ ಕಳೆದುಕೊಳ್ಳದೇ ಒರಟು ಸ್ವಭಾವದವರ ಜೊತೆಗೆ ವ್ಯವಹರಿಸುವುದು ಹೇಗೆ?: ಇಲ್ಲಿದೆ 7 ಟಿಪ್ಸ್

    January 11, 2026

    ಬಿಸಿಯೂಟ ತಯಾರಕರ ಫೆಡರೇಷನ್ ತಾಲೂಕು ಅಧ್ಯಕ್ಷರಿಗೆ ಸನ್ಮಾನ

    January 11, 2026

    ಮಾಜಿ ಸಚಿವ ಭೀಮಣ್ಣ ಖಂಡ್ರೆ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

    January 11, 2026
    Facebook Twitter Instagram
    ಟ್ರೆಂಡಿಂಗ್
    • ತಾಳ್ಮೆ ಕಳೆದುಕೊಳ್ಳದೇ ಒರಟು ಸ್ವಭಾವದವರ ಜೊತೆಗೆ ವ್ಯವಹರಿಸುವುದು ಹೇಗೆ?: ಇಲ್ಲಿದೆ 7 ಟಿಪ್ಸ್
    • ಬಿಸಿಯೂಟ ತಯಾರಕರ ಫೆಡರೇಷನ್ ತಾಲೂಕು ಅಧ್ಯಕ್ಷರಿಗೆ ಸನ್ಮಾನ
    • ಮಾಜಿ ಸಚಿವ ಭೀಮಣ್ಣ ಖಂಡ್ರೆ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು
    • ಪಕ್ಷಕ್ಕೆ ಡ್ಯಾಮೇಜ್ ಆಗೋ ಕೆಲಸ ಯಾವತ್ತೂ ಮಾಡಿಲ್ಲ: ಶಾಸಕ ಎಸ್.ಆರ್.ಶ್ರೀನಿವಾಸ್
    • ಕೇರಳದಲ್ಲಿ ಮಲಯಾಳಂ ಕಡ್ಡಾಯ ವಿರೋಧಿಸಿ ಹೋರಾಟದ ಎಚ್ಚರಿಕೆ ನೀಡಿದ ಸಿಎಂ ಸಿದ್ದರಾಮಯ್ಯ
    • ಸದೃಢ ದೇಹ ಮತ್ತು ಮಾಂಸಖಂಡಗಳ ಬೆಳವಣಿಗೆಗೆ ಇಲ್ಲಿವೆ 7 ಅದ್ಭುತ ಆಹಾರಗಳು!
    • ವಿಜಯಪುರ ಸೈನಿಕ ಶಾಲೆಯಲ್ಲಿ ಬೃಹತ್ ನೇಮಕಾತಿ: ಶಿಕ್ಷಕರು ಹಾಗೂ ವಾರ್ಡ್ ಬಾಯ್ ಹುದ್ದೆಗಳಿಗೆ ಅರ್ಜಿ ಆಹ್ವಾನ
    • ಸರಗೂರು: ಅರ್ಜುನ ಯೂತ್ಸ್ ಸ್ಪೋರ್ಟ್ ಕ್ಲಬ್  ಮಾದರಿ: ಪುರಸಭೆ ಸದಸ್ಯ ಎಚ್.ಸಿ.ನರಸಿಂಹಮೂರ್ತಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ನಿಜವಾದ ದಾನಿ
    ಲೇಖನ April 4, 2025

    ನಿಜವಾದ ದಾನಿ

    By adminApril 4, 2025No Comments3 Mins Read
    beggar

    ಒಂದು ಊರಿನಲ್ಲಿ ಒಬ್ಬ ರಾಜನು, ಮಂತ್ರಿಯನ್ನು ಕರೆದು ರಾಜ್ಯದಲ್ಲಿ ನಿಜವಾದ ದಾನಿ ಯಾರೆಂದು ಗುರುತಿಸಿ ಅವರಿಗೆ ಬಹು ಮೌಲ್ಯದ ಬಹುಮಾನ ಕೊಡಲಾಗುವುದೆಂದು ಡಂಗುರ ಸಾರಿಸಿದನು. ಅದಕ್ಕಾಗಿ ಒಂದು ದಿನ ನಿಗದಿ ಮಾಡಿ ಹಲವು ರಾಜ ಭಟರನ್ನು ರಾಜ್ಯದಲ್ಲೆಲ್ಲಾ ಗಸ್ತು ತಿರುಗುತ್ತಾ ನಿಜವಾದ ದಾನಿಯನ್ನು ಪತ್ತೆ ಮಾಡುವ ಕಾರ್ಯ ವಹಿಸಿದನು. ಇದರ ಮುಂದಾಳತ್ವ ಮತ್ತು ಜವಾಬ್ದಾರಿಯನ್ನು ಮಂತ್ರಿಗೆ ವಹಿಸಿದನು. ಹಲವು ಶ್ರೀಮಂತರು ಅತಿ ಶ್ರೀಮಂತರು ಚಿನ್ನ, ಬೆಳ್ಳಿ, ವಜ್ರ ವೈಡೂರ್ಯಗಳನ್ನು ಯಥೇಚ್ಛವಾಗಿ ದಾನ ಮಾಡಿದರೆ, ಮತ್ತೆ ಕೆಲವು ಶ್ರೀಮಂತರು ಸಾರ್ವಜನಿಕ ಭೋಜನ ವಿತರಣೆಯಂತಹ ದೊಡ್ಡ ದೊಡ್ಡ ಕಾರ್ಯಗಳನ್ನು ಮಾಡತೊಡಗಿದರು, ಮತ್ತೆ ಕೆಲವರು ಭೂದಾನಗಳನ್ನೂ ಮಾಡಿದರು. ಅಂದು ರಾಜ್ಯದಲ್ಲೆಲ್ಲಾ ದಾನ ಧರ್ಮಗಳದೇ ಕಾರುಬಾರು. ಇವೆಲ್ಲವನ್ನು ಯಾರು  ಹೆಚ್ಚು ಯಾರು ಕಡಿಮೆ ಎಂಬ ಲೆಕ್ಕಾಚಾರವನ್ನೆಲ್ಲಾ ರಾಜಭಟರು ಬರೆದುಕೊಳ್ಳುತ್ತಿದ್ದರು.

    ಅಂದು ಸಾಯಂಕಾಲ ಕಾರ್ಯಕ್ರಮದ ಅವಧಿ ಮುಗಿಯುತು. ಮಂತ್ರಿ, ರಾಜಭಟರು ಮತ್ತು ದಾನ ಮಾಡಿದ ಎಲ್ಲ ಶ್ರೀಮಂತರು ನಿಯೋಜಿಸಿದ್ದ ಅರಮನೆಯ ಮೈದಾನಕ್ಕೆ ಬಂದರು. ಎಲ್ಲರಿಗೂ ಒಂದೇ ಕುತೂಹಲ ಯಾರು ಮಹಾ ದಾನಿ ಎಂದು ಮತ್ತು ಯಾರಿಗೆ ಬಹುಮೌಲ್ಯದ ಬಹುಮಾನ ಸಿಗುವುದು ಎಂದು. ರಾಜನು ಮಂತ್ರಿಯನ್ನು ಕರೆದು ಈಗ ಹೇಳಿಬಿಡಿ ಮಂತ್ರಿಗಳೇ ನಿಜವಾದ ದಾನಿ ಯಾರೆಂದು ಎಂದಾಗ ಮಂತ್ರಿಯು ಒಬ್ಬ ವ್ಯಕ್ತಿಯನ್ನು ಸಭಾಂಗಣದ ಮುಂದೆ ತಂದು ಅವನಿಗೆ ಮುಚ್ಚಿದ್ದ ಬಿಳಿಯ ವಸ್ತ್ರವನ್ನು ತೆಗೆದಾಗ ಅವನೊಬ್ಬ ಹರಕಲು ಬಟ್ಟೆ ಹಾಕಿಕೊಂಡಿದ್ದ ಭಿಕ್ಷುಕ ಮತ್ತು ನಿರ್ಗತಿಕನಾಗಿದ್ದನು. ಎಲ್ಲರೂ ಅವನನ್ನು ನೋಡುತ್ತಲೇ ಈ ಮಂತ್ರಿಗೆ ತಲೆ ಕೆಟ್ಟಿದೆ ಇದು ಹೇಗೆ ಸಾಧ್ಯ ನಾವೆಲ್ಲ ಅಷ್ಟೊಂದು ದಾನ ಮಾಡಿದ್ದೇವೆ ಎಂದು ಅಂದುಕೊಳ್ಳುತ್ತಿರುವಾಗಲೇ ರಾಜನು ಇದೇನು ಮಂತ್ರಿಗಳೇ ಈ ವ್ಯಕ್ತಿಯೇ ನಿಜವಾದ ದಾನಿ ವಿವರಣೆ ಕೊಡಿ ಎಂದಾಗ, ಮಂತ್ರಿಯು ಹೌದು ಪ್ರಭು ಇವನ ಹೆಸರು ಗುಣಸಾಗರ ಇವನು ನಿರ್ಗತಿಕ ಸೋಮನಾಥಪುರದಲ್ಲಿ ಶ್ರೀಮಂತರು ಅನ್ನ ದಾಸೋಹವನ್ನೇ ನಡೆಸುತ್ತಿದ್ದರು. ಆದರೆ ಈತ ಅಲ್ಲಿಗೆ ಹೋಗದೆ ಅಲ್ಲಿಯ ಒಬ್ಬ ಶ್ರೀಮಂತನ ಮನೆಗೆ ಹೋಗಿ ನೋಡಿ ಸ್ವಾಮಿ ನನಗೆ ಪುಕ್ಕಟೆ ಊಟ ಬೇಡ ನನಗೊಂದು ಈ ದಿನದ ಮಟ್ಟಿಗೆ ಕೆಲಸ ಕೊಡಿ ವೇತನಕ್ಕೆ ಬದಲಾಗಿ ಊಟ ಕೊಡಿ ಎಂದು ಕೇಳಿಕೊಂಡ ಅದರಂತೆ ಶ್ರೀಮಂತ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಹೊಲದಲ್ಲಿ ಕೆಲಸ ಕೊಟ್ಟು ಊಟದ ಸಮಯದಲ್ಲಿ ಒಂದು ಬುತ್ತಿಯ ತುಂಬ ಊಟ ಕೊಟ್ಟರು. ಈತ ಅದನ್ನು ತೆಗೆದುಕೊಂಡು ಒಂದು ಮರದ ನೆರಳಿನಲ್ಲಿ ಕುಳಿತು ಬುತ್ತಿ ತೆಗೆದು ಇನ್ನೇನು ಊಟ ಶುರುಮಾಡುವಷ್ಟರಲ್ಲಿ ಮತ್ತೊಬ್ಬ ಭಿಕ್ಷುಕ ಮುದುಕ ಇವನ ಹತ್ತಿ ಬಂದು ನನಗೂ ಸ್ವಲ್ಪ ಊಟ ಕೊಡುವೆಯಾ ಅಲ್ಲಿ ದಾಸೋಹ ಮುಗಿದಿದೆ ಎಂದಾಗ ಹಿಂದು ಮುಂದು ಯೋಚಿಸದೇ ತೆಗೆದುಕೊಳ್ಳಿ, ನನಗೆ ಇನ್ನೂ ಕೆಲಸ ಮಾಡುವ ಚೈತನ್ಯವಿದೆ ನೀವು ಹೊಟ್ಟೆ ತುಂಬ ಊಟ ಮಾಡಿ ಎಂದು ತನ್ನ ಕೈಲಿದ್ದ ಬುತ್ತಿಯನ್ನು ಆ ಮುದುಕನಿಗೆ ಕೊಟ್ಟು ಮತ್ತೆ ಕೆಲಸಕ್ಕೆ ಸಿದ್ಧನಾದನು. ಈಗ ಹೇಳಿ ಪ್ರಭು ಎಷ್ಟೇ ದಾನ ನೀಡಿದರೂ ಕರಗದ ಈ ಶ್ರೀಮಂತರು ದಾನಿಗಳೋ ಅಥವಾ ಒಂದು ಹೊತ್ತಿನ ಊಟಕ್ಕಾಗಿ ಉಚಿತವಾಗಿ ಏನನ್ನು ಬಯಸದೆ ಸ್ವಾಭಿಮಾನದಿಂದ ದುಡಿದು, ಬಂದಿದ್ದರಲ್ಲಿ ತನಗೆ ಸ್ವಲ್ಪವೂ ಇಟ್ಟುಕೊಳ್ಳದೇ ಎಲ್ಲವನ್ನೂ ದಾನ ನೀಡಿದ ಈ ಗುಣಸಾಗರನು ನಿಜವಾದ ದಾನಿಯೋ ಎಂದಾಗ ರಾಜನಿಂದ ಹಿಡಿದು ಎಲ್ಲರೂ ಚಪ್ಪಾಳೆ ತಟ್ಟಿ ಹರ್ಷೋದ್ಗಾರ ಮಾಡಿದರು, ಗುಣಸಾಗರನಿಗೆ ಅರಮನೆಯಲ್ಲಿಯೇ ಒಂದು ಕೆಲಸ ಕೊಟ್ಟು ರಾಜನು ಸನ್ಮಾನ ಮಾಡಿದನು.


    Provided by
    Provided by

    ನೀತಿ: ಒಂದು ಉತ್ತಮ ಸಂಸ್ಕಾರ ನಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ.

    venugopal
    ವೇಣುಗೋಪಾಲ್, ತುಮಕೂರು

    ಸಂಪಾದಕರ ನುಡಿ

    ಸತ್ಯ, ಪರೋಪಕಾರ, ಮತ್ತು ಮಾನವೀಯತೆ ಎಂಬುವುವ ಸಮಾಜವನ್ನು ಮಾರ್ಗದರ್ಶನ ಮಾಡಬಲ್ಲ ಅಮೂಲ್ಯ ಗುಣಗಳಾಗಿವೆ. ನಮ್ಮ “ನಿಜವಾದ ದಾನಿ” ಎಂಬ ಈ ದಿನದ ಕಥೆ ದಾನವು ಕೇವಲ ಸಂಪತ್ತನ್ನು ಹಂಚಿಕೊಳ್ಳುವುದಲ್ಲ, ಆದರೆ ಅದು ನಿಸ್ವಾರ್ಥತೆ ಮತ್ತು ಹೃದಯಪೂರ್ವಕ ಬಲಿದಾನದ ಸಂಕೇತವೆಂಬುದನ್ನು ತೋರಿಸುತ್ತದೆ.

    ಸಮಾಜದಲ್ಲಿ ಹಲವರು ದೊಡ್ಡ ಮೊತ್ತದ ಹಣ, ಭೂಮಿ, ಮತ್ತು ಧನ್ಯಾವಾಲಿಗಳನ್ನು ದಾನವಾಗಿ ನೀಡುವ ಮೂಲಕ ತಮ್ಮ ಧಾರ್ಮಿಕ ಅಥವಾ ಸಾಮಾಜಿಕ ಕರ್ತವ್ಯವನ್ನು ನೆರವೇರಿಸುತ್ತಾರೆ. ಆದರೆ, ಹೃದಯದಿಂದ ಮಾಡಿದ ತ್ಯಾಗ ಮತ್ತು ಸತ್ಯದ ಚಿಂತನೆಯೇ ನಿಜವಾದ ದಾನ. ಈ ಕಥೆಯ ನಾಯಕ ಗುಣಸಾಗರ, ತನ್ನ ಒಬ್ಬನೇ ಹೊತ್ತಿನ ಊಟವನ್ನು ಬೇರೊಬ್ಬ ಹಸಿದಾತಿಗೆ ನೀಡುವ ಮೂಲಕ ನಿಜವಾದ ಪರೋಪಕಾರವನ್ನು ತೋರಿಸುತ್ತಾನೆ. ಇದು ನಮಗೆ ಸಿಕ್ಕಿದನ್ನು ಇತರರೊಂದಿಗೆ ಹಂಚಿಕೊಳ್ಳುವ ದೊಡ್ಡ ಪಾಠವನ್ನು ಕಲಿಸುತ್ತದೆ.

    ನಮ್ಮ ಜೀವನದಲ್ಲೂ ನಾವು ಸಮಾಜದ ಒಳಿತು ಮತ್ತು ಬೇರೆಯವರ ಸಮೃದ್ಧಿಗಾಗಿ ಕೆಲಸ ಮಾಡುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ಏಕೆಂದರೆ ನಿಜವಾದ ಸಂತೃಪ್ತಿಯು ಕೇವಲ ಪಡೆಯುವುದರಿಂದ ಅಲ್ಲ, ಆದರೆ ಕೊಡುವುದರಿಂದ ಲಭಿಸುತ್ತದೆ.

    — ಜಿ.ಎಲ್. ನಟರಾಜು

    ಸಂಪಾದಕರು, ನಮ್ಮ ತುಮಕೂರು


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

    admin
    • Website

    Related Posts

    ತಾಳ್ಮೆ ಕಳೆದುಕೊಳ್ಳದೇ ಒರಟು ಸ್ವಭಾವದವರ ಜೊತೆಗೆ ವ್ಯವಹರಿಸುವುದು ಹೇಗೆ?: ಇಲ್ಲಿದೆ 7 ಟಿಪ್ಸ್

    January 11, 2026

    ದಾಖಲೆ ಬರೆದ ಯಶ್ ‘ಟಾಕ್ಸಿಕ್’ ಟೀಸರ್; ಹಸಿಬಿಸಿ ದೃಶ್ಯ ಕಂಡು ಪ್ರೇಕ್ಷಕ ಶಾಕ್!

    January 9, 2026

    ಉದ್ಧಟತನ ಕಲಿಸಿದ ಪಾಠ

    January 7, 2026

    Comments are closed.

    Our Picks

    ಆರ್‌ ಸಿಬಿ ತಂಡದ ಆಟಗಾರನಿಗೆ ಪೋಕ್ಸೋ ಸಂಕಷ್ಟ: ನಿರೀಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಭೀತಿ

    December 25, 2025

    ಇಸ್ರೊ ಮೈಲಿಗಲ್ಲು: ಅತ್ಯಂತ ಭಾರವಾದ ಎಲ್‌ ವಿಎಂ3 ರಾಕೆಟ್ ಮೂಲಕ ‘ಬ್ಲೂಬರ್ಡ್’ ಉಪಗ್ರಹ ಉಡಾವಣೆ

    December 24, 2025

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಲೇಖನ

    ತಾಳ್ಮೆ ಕಳೆದುಕೊಳ್ಳದೇ ಒರಟು ಸ್ವಭಾವದವರ ಜೊತೆಗೆ ವ್ಯವಹರಿಸುವುದು ಹೇಗೆ?: ಇಲ್ಲಿದೆ 7 ಟಿಪ್ಸ್

    January 11, 2026

    ನಮ್ಮ ಜೀವನದಲ್ಲಿ ನಾನಾ ರೀತಿಯ ವ್ಯಕ್ತಿಗಳು ಎದುರಾಗುತ್ತಾರೆ. ಕೆಲವರು ಸೌಮ್ಯ ಸ್ವಭಾವದವರಾಗಿದ್ದರೆ, ಇನ್ನು ಕೆಲವರು ನಮ್ಮ ತಾಳ್ಮೆಯನ್ನು ಪರೀಕ್ಷಿಸುವಂತಿರುತ್ತಾರೆ. ಕಚೇರಿಯಲ್ಲಿ…

    ಬಿಸಿಯೂಟ ತಯಾರಕರ ಫೆಡರೇಷನ್ ತಾಲೂಕು ಅಧ್ಯಕ್ಷರಿಗೆ ಸನ್ಮಾನ

    January 11, 2026

    ಮಾಜಿ ಸಚಿವ ಭೀಮಣ್ಣ ಖಂಡ್ರೆ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

    January 11, 2026

    ಪಕ್ಷಕ್ಕೆ ಡ್ಯಾಮೇಜ್ ಆಗೋ ಕೆಲಸ ಯಾವತ್ತೂ ಮಾಡಿಲ್ಲ: ಶಾಸಕ ಎಸ್.ಆರ್.ಶ್ರೀನಿವಾಸ್

    January 11, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.