ವಾಷಿಂಗ್ಟನ್: ಮಹಿಳೆಯರ ಬಗ್ಗೆ ಅಮೆರಿಕ ಅಧ್ಯಕ್ಷ ಬಳಸುವ ಪದಗಳು ಪದೇ ಪದೇ ಟೀಕೆಗೊಳಪಡುತ್ತಿವೆ. ಇದೀಗ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೊಲಿನ್ ಲೀವಿಟ್ ಅವರನ್ನು ಹೋಲಿಸಿರುವ ರೀತಿ ವ್ಯಾಪಕ ಟೀಕೆಗೆ ಕಾರಣವಾಗಿದೆ.
ಸಂದರ್ಶನವೊಂದರಲ್ಲಿ ಲೀವಿಟ್ ಬಗ್ಗೆ ಮಾತನಾಡಿರುವ ಟ್ರಂಪ್ ಆಕೆ ಸ್ಟಾರ್ ಆಗಿಬಿಟ್ಟಿದ್ದಾಳೆ. ಆ ಮುಖ, ಬುದ್ಧಿವಂತಿಕೆ, ತುಟಿಗಳು, ಅವು ಚಲಿಸುವ ರೀತಿ.. ಅವುಗಳು ಚಲಿಸುವಾಗ ಮಷಿನ್ ಗನ್ ರೀತಿ ಕಾಣುತ್ತದೆ ಎಂದು ವರ್ಣಿಸಿದ್ದಾರೆ.
ಅಲ್ಲದೇ ಇಂತಹ ಪತ್ರಿಕಾ ಕಾರ್ಯದರ್ಶಿ ಬೇರೆ ಅಧ್ಯಕ್ಷರಿಗೆ ಸಿಕ್ಕಿರಲಿಕ್ಕಿಲ್ಲ. ಆಕೆಯೊಂದು ಅದ್ಭುತ ಎಂದು ಬಣ್ಣಿಸಿದ್ದಾರೆ. ಟ್ರಂಪ್ ಹೀಗೆ ಮಾತಾಡುತ್ತಿರುವುದು ಇದೇ ಮೊದಲಲ್ಲ. ಈ ಮುಂಚೆ ತಮ್ಮ ಮಗಳು ಸೇರಿದಂತೆ ಹೆಂಗಳೆಯರ ಬಗ್ಗೆ ಕೀಳುಪದಗಳನ್ನು ಬಳಸಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC