ಬೀಜಿಂಗ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ವಿಧಿಸಿರುವ ಪ್ರತಿಸುಂಕ ಸಂಬಂಧ ಚೀನಾ ದೇಶ ಅಚ್ಚರಿಯ ಪ್ರತಿಕ್ರಿಯೆಯನ್ನು ನೀಡಿದೆ.
ಭಾರತದ ಸರಕುಗಳ ಮೇಲೆ ಶೇ. 25+25 = 50 ರಷ್ಟು ಸುಂಕ ವಿಧಿಸುವ ಆದೇಶ ಹೊರಡಿಸಿರುವ ಟ್ರಂಪ್ ಅವರದು ‘ಪುಂಡ’ ವ್ಯಾಪಾರ ನೀತಿಯಾಗಿದೆ ಎಂದು ಭಾರತದಲ್ಲಿರುವ ಚೀನಾ ರಾಯಭಾರಿ ಕ್ಸು ಫೀಹಾಂಗ್ ವಾಗ್ದಾಳಿ ನಡೆಸಿದ್ದಾರೆ.
ಟ್ರಂಪ್ ಸುಂಕ ನೀತಿಗೆ ಪ್ರತಿಕ್ರಿಯೆ ನೀಡಿರುವ ಫೀಹಾಂಗ್, ಬೆದರಿಕೆ ಹಾಕುವವರಿಗೆ ಮುಟ್ಟಿ ಕೊಳ್ಳುವಂತೆ ತಿರುಗೇಟು ನೀಡಿದರೆ ಒಂದು ಮೈಲಿ ದೂರ ಓಡಿ ಹೋಗಿ ನಿಲ್ಲುತ್ತಾರೆ. ಇಂಥ ಪುಂಡ ನೀತಿಗಳನ್ನು ಧೈರ್ಯವಾಗಿ ಎದುರಿಸಿದರೆ ತೆಪ್ಪಗಾಗುತ್ತಾರೆ, ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಟ್ರಂಪ್ ಪ್ರತಿಸುಂಕ ಕ್ರಮಗಳು ವಿಶ್ವ ವ್ಯಾಪಾರ ಒಕ್ಕೂಟವನ್ನು ದುರ್ಬಲಗೊಳಿಸಲಿವೆ. ವಿಶ್ವಸಂಸ್ಥೆಯ ನಿಮಯಗಳಿಗೆ ವಿರುದ್ಧವಾಗಿದೆ ಎಂದು ಫೀಹಾಂಗ್ ಹೇಳಿದ್ದಾರೆ.
ಟ್ರಂಪ್ ಸುಂಕ ಬೆದರಿಕೆ ನಡುವೆ ಭಾರತ–ಚೀನಾ ಪರಸ್ಪರ ಹತ್ತಿರವಾಗುತ್ತಿವೆ. ತಿಂಗಳ ಅಂತ್ಯದಲ್ಲಿ ಚೀನಾ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಹೆಚ್ಚುವರಿ ಸುಂಕದ ಕ್ರಮಗಳ ಬಗ್ಗೆ ಸಮಾಲೋಚಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC