nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ: ಚಲನಚಿತ್ರ ನಟ ಹರೀಶ್ ಸ್ಥಳದಲ್ಲೇ ಸಾವು

    April 12, 2026

    ಬೆಳಗಾವಿ: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಹತ್ಯೆ ಮಾಡಿದ ಪತ್ನಿ; ಸಿನಿಮೀಯ ಮಾದರಿಯಲ್ಲಿ ಕೊಲೆ

    April 12, 2026
    Facebook Twitter Instagram
    ಟ್ರೆಂಡಿಂಗ್
    • ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ
    • ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ: ಚಲನಚಿತ್ರ ನಟ ಹರೀಶ್ ಸ್ಥಳದಲ್ಲೇ ಸಾವು
    • ಬೆಳಗಾವಿ: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಹತ್ಯೆ ಮಾಡಿದ ಪತ್ನಿ; ಸಿನಿಮೀಯ ಮಾದರಿಯಲ್ಲಿ ಕೊಲೆ
    • ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ
    • ತಿಪಟೂರಿನ ಟೈಮ್ ಕಾಲೇಜಿಗೆ ನೂರಕ್ಕೆ ನೂರು ಫಲಿತಾಂಶ: ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದ ವಿದ್ಯಾರ್ಥಿನಿ ರಶ್ಮಿಗೆ 1 ಲಕ್ಷ ರೂ. ಬಹುಮಾನ ಘೋಷಣೆ
    • ಊಹಾ ಪತ್ರಿಕೋದ್ಯಮ ಅತ್ಯಂತ ಅಪಾಯಕಾರಿ: ಸಿಎಂ ಸಿದ್ದರಾಮಯ್ಯ
    • ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಕಾರು, ಬೈಕ್ ಗಳು ಸುಟ್ಟು ಭಸ್ಮ
    • ಎನ್‌ ಎಸ್‌ ಎಸ್ ವಿದ್ಯಾರ್ಥಿಗಳು ನಾಯಕತ್ವ ಮನೋಭಾವ ಬೆಳೆಸಿಕೊಳ್ಳಿ: ಈರಪ್ಪ ನಾಯಕ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಇತಿಹಾಸ ಪ್ರಸಿದ್ಧ ವಡ್ಡಗೆರೆ ಶ್ರೀ ವೀರನಾಗಮ್ಮ ದೇವಾಲಯದ ಟ್ರಸ್ಟ್ ಸೀಜ್! | ಕೋಟ್ಯಾಂತರ ಹಣ ಗೋಲ್‌ ಮಾಲ್, ತನಿಖೆಗೆ ಆದೇಶ
    ಕೊರಟಗೆರೆ May 11, 2025

    ಇತಿಹಾಸ ಪ್ರಸಿದ್ಧ ವಡ್ಡಗೆರೆ ಶ್ರೀ ವೀರನಾಗಮ್ಮ ದೇವಾಲಯದ ಟ್ರಸ್ಟ್ ಸೀಜ್! | ಕೋಟ್ಯಾಂತರ ಹಣ ಗೋಲ್‌ ಮಾಲ್, ತನಿಖೆಗೆ ಆದೇಶ

    By adminMay 11, 2025No Comments3 Mins Read
    trust koratagere

    ವರದಿ: ಮಂಜುಸ್ವಾಮಿ ಎಂ.ಎನ್.

    ಕೊರಟಗೆರೆ : ಶ್ರೀ ವೀರನಾಗಮ್ಮ ದೇವಾಲಯ ಟ್ರಸ್ಟ್ ಸದಸ್ಯರು ಬಂಗಾರ, ಬೆಳ್ಳಿ, ಅಕ್ಕಿ ಮತ್ತು ಹಣದ ವಹಿವಾಟಿನಲ್ಲಿ ಭಾರೀ ಗೋಲ್‌ ಮಾಲ್ ನಡೆಸಿರುವ ಆರೋಪ ಕೇಳಿ ಬಂದಿದ್ದು, ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳ ಪ್ರಶ್ನೆಗಳಿಗೆ ಟ್ರಸ್ಟಿಗಳ ಮೌನವೇ ಉತ್ತರವಾಯಿತು.


    Provided by
    Provided by

    ಬೆಳ್ಳಿ, ಬಂಗಾರ, ಬ್ಯಾಂಕ್ ಪುಸ್ತಕ ಮತ್ತು ದಾಖಲೆಗಳೆಲ್ಲ ಸೀಜ್ ಮಾಡಲಾಗಿದ್ದು, ಟ್ರಸ್ಟ್ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಖಡಕ್ ಆದೇಶ ಮಾಡಿದ್ದಾರೆ.

    ಕೊರಟಗೆರೆ ತಾಲೂಕು ಕಸಬಾ ಹೋಬಳಿ ವಡ್ಡಗೆರೆಯ ಇತಿಹಾಸ ಪ್ರಸಿದ್ಧ ಶ್ರೀವೀರನಾಗಮ್ಮ ದೇವಾಲಯದ ಕಥೆ ಇದು. ಮುಜರಾಯಿ ಇಲಾಖೆ ಆದೇಶದಂತೆ 2006 ರಲ್ಲಿ ಆರಂಭ ಶ್ರೀ ವೀರನಾಗಮ್ಮ ದೇವಾಲಯ ಸಮಿತಿ ಕಾಲಕ್ರಮೇಣ ಟ್ರಸ್ಟ್ ಆಗಿ ಬದಲಾಗಿದೆ. 19 ವರ್ಷಗಳ ದಾಖಲೆಗಳೇ ಮಾಯವಾಗಿವೆ. ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಕೇಳುವ 20ಕ್ಕೂ ಅಧಿಕ ಪ್ರಶ್ನೆಗಳಿಗೆ ಮೌನವೇ ಉತ್ತರವಾಗಿ ಅಕ್ರಮ ನಡೆದಿರೋದು ಸಾಬೀತಾಗಿದೆ.

    ಶ್ರೀ ವೀರನಾಗಮ್ಮ ದೇವಾಲಯದ ಟ್ರಸ್ಟ್ ಮಾಹಿತಿ ಮುಜರಾಯಿ ಇಲಾಖೆಗೆ ನೀಡಿದ್ದೀರಾ? ಟ್ರಸ್ಟ್ ರಚನೆಗೆ ಎಲ್ಲಾ ವರ್ಗದ ಜನತೆ ಇರಬೇಕಾದ ಕಾನೂನು ಗೊತ್ತಿಲ್ಲವೇ? ಭಕ್ತರಿಂದ ಕಾಣಕೆ ರೂಪದಲ್ಲಿ ಪಡೆಯುವ ಹಣ, ಅಕ್ಕಿ, ಬಂಗಾರ, ಬೆಳ್ಳಿ, ವಸ್ತುಗಳಿಗೆ ಪ್ರತ್ಯೇಕ ರಸೀದಿ ಪುಸ್ತಕ ಏಕಿಲ್ಲ? ಬಂಗಾರ, ಬೆಳ್ಳಿ ಮತ್ತು ನಗದು ಹಣದ ಮಾಹಿತಿ ಮುಜರಾಯಿಗೆ ಏಕೆ ನೀಡಿಲ್ಲ? ಎಂಬ 20ಕ್ಕೂ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರವೇ ನೀಡದೇ ಟ್ರಸ್ಟಿಗಳು ಮೌನಕ್ಕೆ ಶರಣಾಗಿದ್ದರು.

    ಧಾರ್ಮಿಕ ದತ್ತಿ ಇಲಾಖೆಯ ಕೆ.ಪದ್ಮಾ ನೇತೃತ್ವದಲ್ಲಿ ಕೊರಟಗೆರೆ ತಹಶೀಲ್ದಾರ್ ಮಂಜುನಾಥ, ಪಿಎಸೈ ತಿರ್ಥೇಶ್ ತಂಡ ಪರಿಶೀಲನೆ ನಡೆಸಿದ ನಂತರ ಟ್ರಸ್ಟಿಗಳ ಬಳಿಯಿದ್ದ ಚಿನ್ನಾಭರಣ, ಬೆಳ್ಳಿ, ಟ್ರಸ್ಟ್ ಮತ್ತು ದೇವಾಲಯದ ದಾಖಲೆ, ಬ್ಯಾಂಕು ಪುಸ್ತಕ ಸೇರಿದಂತೆ ವಿವಿಧ ದಾಖಲೆಗಳನ್ನು ವಶಕ್ಕೆ ಪಡೆದು ಟ್ರಸ್ಟ್ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ ಗೆ ಸೂಚಿಸಿದರು.

    8 ಬ್ಯಾಂಕಿನಲ್ಲಿ ಟ್ರಸ್ಟ್ ನ ಚಾಲ್ತಿ ಖಾತೆ..

    ಬೆಂಗಳೂರಿನ ಶ್ರೀಗಂಧ, ರಾಜಾಜಿನಗರದ ಜನಹಿತ ಬ್ಯಾಂಕು, ತುಮಕೂರು ಕೆಂಪೇಗೌಡ ಪತ್ತಿನ ಸಹಕಾರ ಬ್ಯಾಂಕು, ಕೊರಟಗೆರೆಯ ಕೆನರಾ, ಕುಂಚಶ್ರೀ, ಕರ್ನಾಟಕ, ಎಸ್‌ ಬಿಎಂ ಬ್ಯಾಂಕು, ವಡ್ಡಗೆರೆಯ ವಿಎಸ್‌ ಎಸ್‌ ಎಲ್ ಬ್ಯಾಂಕು ಸೇರಿದಂತೆ 8 ಬ್ಯಾಂಕಿನಲ್ಲಿ ವಡ್ಡಗೆರೆ ಶ್ರೀವೀರನಾಗಮ್ಮ ದೇವಾಲಯ ಟ್ರಸ್ಟ್ ನಲ್ಲಿ ಚಾಲ್ತಿ ಖಾತೆಗಳಿದ್ದು, ಮುಜರಾಯಿ ಇಲಾಖೆಗೆ ಗೊತ್ತಿಲ್ಲದೇ ಅನಧಿಕೃತವಾಗಿ ಕೋಟ್ಯಾಂತರ ರೂ ವಹಿವಾಟು ನಡೆದಿದೆ.

    ಧಾರ್ಮಿಕ ದತ್ತಿ ಇಲಾಖೆಗೆ ದೂರು :

    ಮುಜರಾಯಿ ಇಲಾಖೆಗೆ ಮಾಹಿತಿಯೇ ನೀಡದೇ ಟ್ರಸ್ಟ್ ಮಾಡಿರುವುದೇ ಅಕ್ರಮ. ಟ್ರಸ್ಟ್ ನಲ್ಲಿ ಒಂದೇ ಸಮುದಾಯದ 14 ಜನ ಟ್ರಸ್ಟಿ ಇರುವುದೇ ಕಾನೂನು ಬಾಹಿರ. ಭಕ್ತರ ನೀಡಿರುವ ಬೆಳ್ಳಿ ಬಂಗಾರ ಟ್ರಸ್ಟಿಗಳ ಮನೆಯಲ್ಲಿದೆ. ಭಕ್ತರು ನೀಡುವ ಕಾಣಿಕೆಯ ಹಣ ಟ್ರಸ್ಟಿಗಳ ಪೋನ್‌ ಪೇ, ಗೋಗಲ್‌ ಪೇಗೆ ಹಾಕಿಸಿಕೊಳ್ತಾರೇ. ಬಂಗಾರ–ಬೆಳ್ಳಿ ಕಳ್ಳತನದ ದೂರೇ ದಾಖಲಾಗಿಲ್ಲ. ಕಾಮಗಾರಿಯ ಬೀಲ್‌ ಗೆ 70 ಲಕ್ಷ ಬಿಲ್ ಮಾಡಿದ್ದಾರೆ. ಪ್ರತಿವರ್ಷ ಆಡಿಲ್ ಮತ್ತು ಸಭಾ ನಡವಳಿಕೆಯೇ ಮಾಡಿಸಿಲ್ಲ ಎಂಬ 15ಕ್ಕೂ ಅಧಿಕ ಅಕ್ರಮದ ಬಗ್ಗೆ ದಾಖಲೆ ಸಮೇತ ಬೆಂಗಳೂರು ಧಾರ್ಮಿಕ ದತ್ತಿ ಇಲಾಖೆಗೆ ನೌಕರರ ಸಂಘದ ಮಾಜಿ ಅಧ್ಯಕ್ಷ ವಿ.ಕೆ.ವೀರಕ್ಯಾತರಾಯ ದೂರು ಸಲ್ಲಿಸಿದ್ದಾರೆ.

     ಶ್ರೀ ವೀರನಾಗಮ್ಮ ಟ್ರಸ್ಟ್ ಅಧ್ಯಕ್ಷ ರಾಜೀನಾಮೆ:

    ವಡ್ಡಗೆರೆಯ ಶ್ರೀ ವೀರನಾಗಮ್ಮ ದೇವಾಲಯ ಟ್ರಸ್ಟ್ ಸೇರಿದ ಸದಸ್ಯರಾದ ವಿ.ನಾಗೇಶ್, ಶಿವಕುಮಾರ್ ಮತ್ತು ಮಾರುತೀಶ್ ಸೇರಿಕೊಂಡು ಲಕ್ಷಾಂತರ ರೂ ದುರುಪಯೋಗ ಮಾಡಿದ್ದಾರೆ. ಸಮಿತಿಯ ಲೆಕ್ಕಕ್ಕೆ ನೀಡದೇ ವಂಚನೆ ಮಾಡಿರುವ ಪರಿಣಾಮ ಮನನೊಂದು ತನ್ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು 2025 ರ ಏ. 25 ರಂದು ಮುಜರಾಯಿ ಇಲಾಖೆಗೆ ನೀಡಿರುವ ಪತ್ರ ದೊರೆತಿದೆ.

    ಅಭಿವೃದ್ದಿಯ ಜವಾಬ್ದಾರಿ ನಮ್ಮದೇ ಆಗಿದೆ. ಅಭಿವೃದ್ದಿಯ ಹಿತದೃಷ್ಟಿಯಿಂದ ಅಭಿವೃದ್ದಿ ಸಮಿತಿಯನ್ನೇ ಟ್ರಸ್ಟ್ ಮಾಡಿಕೊಂಡ ಹಿರಿಯರ ಆದೇಶದಂತೆ ನಾವು ಕೆಲಸ ಮಾಡಿದ್ದೀವಿ. ಮುಜರಾಯಿ ದೇವಾಲಯ ಎಂಬ ವಿಚಾರ ನಮಗೆ  ಗೊತ್ತು. ಟ್ರಸ್ಟ್ ನ ದಾಖಲೆ, ಬಂಗಾರ ಮತ್ತು ಬೆಳ್ಳಿ ಇಲಾಖೆಗೆ ಒಪ್ಪಿಸಿದ್ದೇವೆ. ನಮ್ಮ ದೃಷ್ಟಿಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ತನಿಖೆ ಆಗಲಿ ನಮ್ಮದೇನು ತಕರಾರು ಇಲ್ಲ.

    — ಶಿವಕುಮಾರ್, ಟ್ರಸ್ಟಿ. ಶ್ರೀ ವೀರನಾಗಮ್ಮ ಟ್ರಸ್ಟ್. ವಡ್ಡಗೆರೆ


    ಶ್ರೀ ವೀರನಾಗಮ್ಮ ದೇವಾಲಯ ಟ್ರಸ್ಟ್ ಕಾನೂನು ಪ್ರಕಾರ ಯಾವ ಕೆಲಸವನ್ನು ಮಾಡಿಲ್ಲ. ಕಾಣಿಕೆಯ ಹಣದಲ್ಲಿ ಅವ್ಯವಹಾರ ಆಗಿರೋದು ಸಾಬೀತಾಗಿದೆ. ಶ್ರೀ ವೀರನಾಗಮ್ಮ ಟ್ರಸ್ಟ್ ಕಚೇರಿ ಸೀಜ್ ಮಾಡಿ ಬಂಗಾರ, ಬೆಳ್ಳಿ ಮತ್ತು ದಾಖಲೆ ವಶಕ್ಕೆ ಪಡೆಯಲಾಗಿದೆ. ಟ್ರಸ್ಟ್ ಗೆ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಸೂಚಿಸಲಾಗಿದೆ. ದೇವಾಲಯದ ದೈನಂದಿನ ಪೂಜಾ ಕಾರ್ಯಕ್ರಮದ ಜವಾಬ್ದಾರಿ ತಹಶೀಲ್ದಾರ್‌ ಗೆ ವಹಿಸಲಾಗಿದೆ.

    — ಕೆ.ಪದ್ಮಾ. ಕೇಂದ್ರ ಸ್ಥಾನಿಕ ಸಹಾಯಕಿ. ಧಾರ್ಮಿಕ ದತ್ತಿ ಇಲಾಖೆ. ಬೆಂಗಳೂರು


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

    admin
    • Website

    Related Posts

    ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಕಾರು, ಬೈಕ್ ಗಳು ಸುಟ್ಟು ಭಸ್ಮ

    April 12, 2026

    ಎನ್‌ ಎಸ್‌ ಎಸ್ ವಿದ್ಯಾರ್ಥಿಗಳು ನಾಯಕತ್ವ ಮನೋಭಾವ ಬೆಳೆಸಿಕೊಳ್ಳಿ: ಈರಪ್ಪ ನಾಯಕ

    April 12, 2026

    ಏ.15ರ ನಂತರ ಮನೆ ಮನೆಗೆ ಜನ ಗಣತಿ ಕಾರ್ಯಕರ್ತರು ಭೇಟಿ | ನಾಗರಿಕರು ಸ್ವಯಂ ಗಣತಿಯಲ್ಲಿ ಭಾಗವಹಿಸಿ: ತಹಶೀಲ್ದಾರ್ ಮಂಜುನಾಥ್ ಕೆ. ಕರೆ

    April 6, 2026

    Comments are closed.

    Our Picks

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ನವದೆಹಲಿ: ಭಾರತದಲ್ಲಿ ಸಮಾನತೆಯನ್ನು ಹೋಗಲಾಡಿಸಿ, ಸಂವಿಧಾನವನ್ನು ನಾಶಪಡಿಸುವುದೇ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಮುಖ್ಯ ಉದ್ದೇಶವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್…

    ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ: ಚಲನಚಿತ್ರ ನಟ ಹರೀಶ್ ಸ್ಥಳದಲ್ಲೇ ಸಾವು

    April 12, 2026

    ಬೆಳಗಾವಿ: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಹತ್ಯೆ ಮಾಡಿದ ಪತ್ನಿ; ಸಿನಿಮೀಯ ಮಾದರಿಯಲ್ಲಿ ಕೊಲೆ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.