ತುಮಕೂರು: ಚಿತ್ರಕಲೆ ಅತ್ಯಂತ ಬೇಡಿಕೆಯ ಕ್ಷೇತ್ರವಾಗಿದೆ. ಚಿತ್ರಕಲೆಯನ್ನು ಆಯ್ಕೆ ಮಾಡಿಕೊಂಡ ಶೇ.80ರಷ್ಟು ವಿದ್ಯಾರ್ಥಿಗಳು ಉದ್ಯೋಗವನ್ನು ಪಡೆಯುತ್ತಿದ್ದಾರೆ. ತುಮಕೂರಿನಲ್ಲಿ ಅತ್ಯುತ್ತಮ ಚಿತ್ರಕಲಾ ತರಬೇತಿಗೆ ಹೆಸರುವಾಸಿಯಾಗಿರುವ ತುಮಕೂರು ಸರ್ಕಾರಿ ಚಿತ್ರಕಲಾ ಮಹಾ ವಿದ್ಯಾಲಯದಲ್ಲಿ ದಾಖಲಾತಿ ಆರಂಭಗೊಂಡಿದೆ.
ಹೌದು..! ತುಮಕೂರಿನ ಬಿ.ಹೆಚ್.ರಸ್ತೆಯಲ್ಲಿರುವ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿರುವ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ 2023—24ನೇ ಸಾಲಿನ ಅಡ್ಮೀಷನ್ ಓಪನ್ ಆಗಿದ್ದು, ಕೆಲವೇ ಸೀಟುಗಳು ಬಾಕಿ ಉಳಿದಿವೆ.
ಕೋರ್ಸ್ ಹೆಸರು: ಬ್ಯಾಚುಲರ್ ಆಫ್ ವಿಜುವಲ್ ಆರ್ಟ್(BVA) ಇದರಲ್ಲಿ ಚಿತ್ರಕಲೆ, ಆ್ಯನಿಮೇಷನ್, ಗ್ರಾಫಿಕ್ ವಿನ್ಯಾಸ.
ಪ್ರವೇಶಾರ್ಹತೆ: ದ್ವಿತೀಯ ಪಿಯುಸಿ, ಐಟಿಐ/ಡಿಪ್ಲೋಮಾ/10+2/ ಅಥವಾ ತತ್ಸಮಾನ ತೇರ್ಗಡೆ.
ಕೋರ್ಸ್ ವಿವರಗಳು: ನಾಲ್ಕು ವರ್ಷ ಸ್ನಾತಕ ಪದವಿ(8 ಸೆಮಿಸ್ಟರ್ ಗಳು) ಸೈದ್ಧಾಂತಿಕ, ತಾಂತ್ರಿಕ, ವಿವಿಧ ವೃತ್ತಿ ಕೌಶಲ್ಯ ಆಧಾರಿತ (ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನ್ವಯ).
ಬಿವಿಎ ಪದವಿಯಿಂದ ಪಡೆಯಬಹುದಾದ ಉದ್ಯೋಗಾವಕಾಶ:
ಶಿಕ್ಷಣ ಕ್ಷೇತ್ರ: ಸರ್ಕಾರಿ /ಖಾಸಗಿ ಶಾಲೆ, ಕಾಲೇಜುಗಳಲ್ಲಿ ಚಿತ್ರಕಲಾ ಶಿಕ್ಷಕರು, ದೃಶ್ಯ ಕಲಾ ಕಾಲೇಜುಗಳಲ್ಲಿ ಉಪನ್ಯಾಸಕರು, ಪ್ರೊಫೆಸರ್.
ಕೈಗಾರಿಕೆಗಳು/ ಕಂಪೆನಿಗಳು: ಚಲನ ಚಿತ್ರ ಇಂಡಸ್ಟ್ರೀಸ್, ಜವಳಿ ಇಂಡಸ್ಟ್ರೀಸ್, ದೂರದರ್ಶನ ಇಂಡಸ್ಟ್ರೀಸ್, ಗ್ರಾಫಿಕ್ ವಿನ್ಯಾಸಕರು, ಐಡಿ ವಿನ್ಯಾಸಕರು.
ಸ್ವಯಂ ಸಬಲೀಕರಣ: ವೃತ್ತಿ ಕಲಾವಿದ, ವಿನ್ಯಾಸ ಕಲಾವಿದ, ಆಂತರಿಕ ಮತ್ತು ಬಾಹ್ಯ ವಿನ್ಯಾಸಕರು, ಮ್ಯೂರಲ್ ಕಲಾವಿದ ಕಲಾ ತರಗತಿಗಳು ಸೇರಿದಂತೆ ಹಲವು ಉದ್ಯೋಗಾವಕಾಶಗಳು.
ಉತ್ತಮ ವೃತ್ತಿ ಕೌಶಲ್ಯ ರೂಪಿಸಿಕೊಳ್ಳಲು ಬಿವಿಎ ಅತ್ಯುತ್ತಮ ಆಯ್ಕೆಯಾಗಿದೆ. ಜೊತೆಗೆ ಭರವಸೆಯ ಉದ್ಯೋಗಕ್ಕಾಗಿ ಬಿವಿಎ ಕಲಿಯಬಹುದು. ಹೆಚ್ಚಿನ ಮಾಹಿತಿಗಳಿಗಾಗಿ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸಿ.ಸಿ.ಬಾರಕೇರ -8147870998 ಅವರನ್ನು ಸಂಪರ್ಕಿಸಬಹುದು.
ವರದಿ: ಯತೀಶ್ ಕುಮಾರ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy