ತುಮಕೂರು: ಭಾನುವಾರ ರಾತ್ರಿ ತುಮಕೂರಿನಲ್ಲಿ ಭಾರೀ ಪ್ರಮಾಣದ ಆಲಿಕಲ್ಲು ಮಳೆಯಾಗಿದ್ದು, ಭಾರೀ ಗಾತ್ರದ ಆಲಿಕಲ್ಲುಗಳನ್ನು ಕಂಡು ಜನರು ಬೆಚ್ಚಿಬಿದ್ದಿದ್ದಾರೆ.
ನಿನ್ನೆ ಜೋರಾಗಿ ಮಳೆ ಸುರಿದಿದ್ದು, ಮಳೆಯ ಜೊತೆಗೆ ಆಲಿಕಲ್ಲುಗಳು ಕೂಡ ಬಿದ್ದಿವೆ. ಸತತ ಎರಡು ಗಂಟೆಗಳಿಂದ ಆಲಿಕಲ್ಲು ಮಳೆಯಾಗಿದ್ದು ಸಾರ್ವಜನಿಕರು ಆತಂಕ್ಕೀಡಾಗಿದ್ದಾರೆ.
ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಬಿದ್ದ ಭಾರೀ ಗಾತ್ರ ಆಲಿಕಲ್ಲಿನ ಮಳೆಯಾಗಿದೆ. ಜಲ್ಲಿಕಲ್ಲುಗಳ ಗಾತ್ರದ ಆಲಿಕಲ್ಲುಗಳು ಧಾರಾಕಾರವಾಗಿ ಸುರಿದಿದ್ದು, ಕೆಲವೆಡೆ ಜನರು ಆಲಿಕಲ್ಲುಗಳನ್ನು ಹೆಕ್ಕುತ್ತಿರುವ ದೃಶ್ಯಗಳು ಕೂಡ ಕಂಡು ಬಂತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy