ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ ಗೌಡ ಭರ್ಜರಿ ಗೆಲುವು.
ತುಮಕೂರು ನಗರದಲ್ಲಿ ಬಿಜೆಪಿ ಜಯಭೇರಿ. ಸತತ ಎರಡನೇ ಬಾರಿ ಬಿಜೆಪಿಯ ಜ್ಯೋತಿ ಗಣೇಶ್ ಗೆಲುವು. 3500 ಮತಗಳ ಅಂತರದಲ್ಲಿ ಗೆಲುವು.
ಕೊರಟಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಪರಮೇಶ್ವರ್ ಗೆಲುವು. ಜೆಡಿಎಸ್ ಅಭ್ಯರ್ಥಿ ಸುಧಾಕರ್ ಲಾಲ್ ವಿರುದ್ಧ ಗೆಲುವು.
ಶಿರಾದಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಗೆಲುವು, 7 ನೇ ಬಾರಿ ಗೆದ್ದು ಬೀಗಿದ ಜಯಚಂದ್ರ. 20 ಸಾವಿರ ಮತಗಳ ಅಂತರಿಂದ ಜಯಭೇರಿ.
ತುರುವೇಕೆರೆಯಲ್ಲಿ ಜೆಡಿಎಡ್ ಮುನ್ನಡೆ -7718: ಜೆಡಿಎಸ್ ಎಮ್.ಟಿ.ಕೃಷ್ಣಪ್ಪ-48474, ಬಿಜೆಪಿ ಮಸಾಲಾ ಜಯರಾಮ್-40756
ಮಧುಗಿರಿ: 2023ರ ಮಧುಗಿರಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ 12ನೇ ಸುತ್ತು ನಡೆಯುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಯಾದ ಕೆ ಎನ್ ರಾಜಣ್ಣ ರವರು ಸುಮಾರು 35,100 ಮತಗಳಿಂದ ಮುಂದಿರುವುದು ಕಾಣಬಹುದು, 40 ರಿಂದ 45 ಸಾವಿರ ಲೀಡ ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಕೆ ರಾಜಣ್ಣರವರ ಅಭಿಮಾನಿಗಳು ಸಂಭ್ರಮದಿಂದ ಘೋಷಣೆಗಳನ್ನು ಕೂಗುತ್ತಾ ಕುಪ್ಪಳಿಸುತ್ತಿರುವುದು ನೋಡಬಹುದು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy