ತುಮಕೂರು ಜಿಲ್ಲೆಯ 11 ಕ್ಷೇತ್ರಗಳ ಪೈಕಿ 11 ಕ್ಷೇತ್ರದಲ್ಲೂ ಜೆಡಿಎಸ್ ಗೆಲ್ಲುತ್ತೆ ಎಂಬ ವಿಶ್ವಾಸ ಇದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೌರಿಶಂಕರ್ ಪರವಾಗಿ ಮತ ಪ್ರಚಾರ ನಡೆಸಿದ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಚುನಾವಣಾ ಪ್ರಚಾರಕ್ಕಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಿಂದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಹಾಗೂ ನಾಯಕರ ದಂಡು ಕರ್ನಾಟಕದಲ್ಲಿ ಬಿಡುಬಿಟ್ಟಿದ್ದಾರೆ.
ಆದರೆ ಜೆಡಿಎಸ್ ಪಕ್ಷ ನಿಮ್ಮಿಂದ ಕಟ್ಟಿರೋದು. ರೈತರ,ಬಡವರ ಪರವಾಗಿ ನಿಂತಿರೋದು. ನಿಮ್ಮಗಳ ಶ್ರಮ, ಅಶಿರ್ವಾದಗಳಿಂದ ಪಂಚರತ್ನ ಯೋಜನೆ ಮೂಲಕ ರಾಜ್ಯದ ಜನರಿಗೆ ನೆಮ್ಮದಿ ಬದುಕು ಕಟ್ಟಿಕೊಡಲು. ನಮ್ಮ ಪಕ್ಷ ಮುಂದಾಗಿದೆ ಎಂದರು.
ಇದನ್ನ ಈಗಾಗಲೇ ಜನತೆ ಮುಂದೆ ಮಂಡನೆ ಮಾಡಿದ್ದೇನೆ. ಎರಡು ರಾಷ್ಟ್ರೀಯ ಪಕ್ಷಗಳು ನಮ್ಮ ಜೆಡಿಎಸ್ ಬಗ್ಗೆ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ. ಈ ಎರಡು ರಾಷ್ಟ್ರೀಯ ಪಕ್ಷಗಳು ಭ್ರಷ್ಟಾಚಾರದ ಪಕ್ಷಗಳು, ಪ್ರಧಾನ ಮಂತ್ರಿಗಳು ಹೇಳ್ತಾರೆ ಜೆಡಿಎಸ್ ಗೆ ಮತ ಕೊಟ್ರೆ. ಅದು ಕಾಂಗ್ರೆಸ್ ಗೆ ಕೊಟ್ಟ ಹಾಗೆ ಅಂತಾರೆ ಎಂದರು.
ಅದೇ ಕಾಂಗ್ರೆಸ್ ನವರು ಹೇಳ್ತಾರೆ. ಜೆಡಿಎಸ್ ಪಕ್ಷಕ್ಕೆ ಮತ ಕೊಡಬೇಡಿ. ಬಿಜೆಪಿಗೆ ಕೊಟ್ಟ ಹಾಗೆ ಅಂತಾರೆ. ನಾನು ಆ ಮಹಾನುಭವರಿಗೆ ಹೇಳೋದು ಇಷ್ಟೆ, ಇದು ಬಡವರ, ರೈತರ ಪರ ನಿಂತಿರೋ ಪಕ್ಷ ಯಾರ ಪರ ಅಲ್ಲ ಎಂದರು.
ದರ್ಪ, ದುರಾಡಾಳಿತ, ದುರಾಹಂಕಾರಿ ವ್ಯಕ್ತಿ ಬಿಜೆಪಿ ಅಭ್ಯರ್ಥಿ. ಆ ವ್ಯಕ್ತಿಯನ್ನ ತುಮಕೂರು ಗ್ರಾಮಾಂತರ ಕ್ಷೇತ್ರದ ಜನತೆ ಶಾಶ್ವತವಾಗಿ ಮನೆಗೆ ಕಳುಹಿಸಬೇಕು ಎಂದು ಹೆಸರು ಹೇಳದೇ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ್ ಗೌಡ ಗೆ ವಿರುದ್ಧ ವಾಗ್ದಾಳಿ ನಡೆಸಿದರು.
ಎಲ್ಲಾ ಭಾಗದಲ್ಲೂ ಈ ಬಾರಿ ನಿಮ್ಮ ಪಕ್ಷಕ್ಕೆ ಮತ ಕೊಡ್ತಿನಿ ಅಂತ ಹೇಳಿ ಆಶೀರ್ವಾದ ಮಾಡ್ತಿದ್ದಾರೆ. ಇವಾಗ ಬರ್ತಿರುವ ಸಮೀಕ್ಷೆಗಳಿಗೆ ಗಾಬರಿಯಾಗ್ಬೇಡಿ. ಈ ಬಾರಿ ನಮ್ಮ ಪಕ್ಷ ಅಧಿಕಾರಕ್ಕೆ ಬರೋದು ಗ್ಯಾರಂಟಿ ಎಂದರಲ್ಲದೇ ಅದನ್ನ ತಪ್ಪಿಸೋಕೆ ಯಾರ ಕೈಯಲ್ಲು ಆಗಲ್ಲ. ಜನ ಬೆಂಬಲವೇ ನನಗೆ ಆಸ್ತಿ. ನಾನು ನಿಮ್ಮಲ್ಲಿ ಮನವಿ ಮಾಡೋದು ಇಷ್ಟೆ. ಈ ನನ್ನ ತಮ್ಮನನ್ನ ಗೆಲ್ಲಿಸಿಕೊಡಿ. ನೀವು ಯಾವುದೇ ಆಮಿಷಗಳಿಗೆ ಒಳಗಾಗದೇ ಗೌರಿಶಂಕರ್ ನನ್ನ ಗೆಲ್ಲಿಸಿ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy