ತುಮಕೂರು: ಹಾಲಪ್ಪ ಪ್ರತಿಷ್ಠಾನ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರೈಲ್ವೆ ಸ್ಟೇಷನ್ ರಸ್ತೆ, ತುಮಕೂರು, ಇವರ ನೇತೃತ್ವದಲ್ಲಿ “ಯುವ ಸಬಲೀಕರಣ ಶಿಬಿರ” (ಉದ್ಯೋಗ ಹಾಗೂ ಕೌಶಲ್ಯಮೇಳ)ವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮವು ಮಾನ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಜನ್ಮದಿನದ ಅಂಗವಾಗಿ, ಸರ್ಕಾರದ ವಿವಿಧ ಇಲಾಖೆಗಳನ್ನು, ಕಂಪನಿಗಳನ್ನು ಹಾಗೂ ಖಾಸಗಿ ಸಂಸ್ಥೆಗಳ ಸಹಭಾಗಿತ್ವವನ್ನು ಒಳಗೊಂಡಿತ್ತು.
ಈ ಉದ್ಯೋಗ ಮೇಳವು ಯುವಜನತೆಗೆ ಸುಭದ್ರ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಿದ್ದು, ಸುಮಾರು 34 ಕಂಪನಿಗಳು ಹಾಗೂ 3,906 ಅಭ್ಯರ್ಥಿಗಳು ಭಾಗವಹಿಸಿದ್ದಾರೆ. ಈ ಮೇಳದಲ್ಲಿ 203 ಅಭ್ಯರ್ಥಿಗಳು ನೇರವಾಗಿ ನೇಮಕಗೊಂಡಿದ್ದು, 207 ಅಭ್ಯರ್ಥಿಗಳು ಎರಡನೇ ಸಂದರ್ಶನಕ್ಕೆ ಆಯ್ಕೆಗೊಂಡಿದ್ದಾರೆ. 390 ಅಭ್ಯರ್ಥಿಗಳು ತರಬೇತಿಗೆ ಆಯ್ಕೆಯಾದರೆ, 51 ಅಭ್ಯರ್ಥಿಗಳು ಸ್ವಯಂ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಈ ಮಹತ್ವದ ಕಾರ್ಯಕ್ರಮವು ಸ್ಥಳೀಯ ಯುವಕರಿಗೆ ಹೊಸ ಅವಕಾಶಗಳನ್ನು ತೆರೆದಿದ್ದು, ಅವರ ಪ್ರತಿಭೆ ಮತ್ತು ಕೌಶಲ್ಯವನ್ನು ಪ್ರದರ್ಶಿಸಲು ಉತ್ತಮ ವೇದಿಕೆಯನ್ನು ಒದಗಿಸಿದೆ.
ಈ ಮೇಳದ ಯಶಸ್ಸಿಗೆ ಕಾರಣರಾದ ಹಾಲಪ್ಪ ಪ್ರತಿಷ್ಠಾನ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರೈಲ್ವೆ ಸ್ಟೇಷನ್ ರಸ್ತೆ, ತುಮಕೂರು, ಹಾಗೂ ಮುರಳೀಧರ ಹಾಲಪ್ಪ ಅವರಿಗೆ ಆಯೋಜಕರು ವಿಶೇಷ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಪ್ರಾಂಶುಪಾಲರು, ಪ್ರೊ.ಲಿಂಗರಾಜ್, ಪ್ರೊ. ಯೋಗೇಶ್, ಪ್ರೊ. ನರಸಿಂಹಮೂರ್ತಿ ಹಾಗೂ ವಿವಿಧ ಕಮಿಟಿಯ ಎಲ್ಲಾ ಪ್ರಾಧ್ಯಾಪಕರುಗಳಿಗೆ ಉದ್ಯೋಗ ಮೇಳ ಆಯೋಜಕರು ಕೃತಜ್ಞತೆ ಸಲ್ಲಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296