ತುಮಕೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಅಕ್ಷಯ ಡೆವಲಪ್ ಮೆಂಟ್ ಫೌಂಡೇಷನ್ ಮಧುಗಿರಿ ಇವರ ಸಂಯುಕ್ತಾಶ್ರಯದಲ್ಲಿ ಡಿ.13 ಮತ್ತು 14 ರಂದು ಬಾಲ ಬಹದ್ದೂರ್ ಐಟಿಐ ಕಾಲೇಜು ಸಭಾಂಗಣ, ಶಿರಾಗೇಟ್, ಮಧುಗಿರಿ ಇಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯ ಜಾಗೃತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಡಿ.13ರಂದು ಬೆಳಗ್ಗೆ 10.30ಕ್ಕೆ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಾಬ್ ಬಹದ್ದೂರ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಪ್ರಕಾಶ್ ಬಾಬು ಎಂ.ಎಲ್. ವಹಿಸಲಿದ್ದು, ನಟ ಹನುಮಂತೇಗೌಡ ಕಾರ್ಯಕ್ರಮ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಡಾ.ರವಿಕುಮಾರ್ ನೀಹ, ಪ್ರೊ.ಮ.ಲ.ನ.ಮೂರ್ತಿ, ಡಾ. ನಳಿನ ಎನ್., ಡಾ.ಗೋವಿಂದರಾಯ ಎಂ., ಡಾ.ಮಂಜುನಾಥ್ ಬುಡಸನಹಳ್ಳಿ, ಮಲ್ಲಿಕಾರ್ಜುನಪ್ಪ ಬಿ.ಎಲ್., ಈಶ್ವರ ಕು. ಮಿರ್ಜಿ, ಡಾ.ಮಂಜುನಾಥ್ ಟಿ.ಹೆಚ್., ಬಿ.ಮಂಜುನಾಥ್, ಪಿ.ವಿ.ಹನುಮಂತರಾಯಪ್ಪ ಆಗಮಿಸುವರು. ನಂತರ ರತ್ನ ಯುವರಾಜ್ ಅಬ್ಬತ್ತನಹಳ್ಳಿ ಇವರಿಂದ ಕನ್ನಡ ಗೀತೆ ಮತ್ತು ಜಾನಪದ ಗೀತೆಗಳ ಗಾಯನ.
ಡಿ. 13 ರಂದು ಮಧ್ಯಾಹ್ನ 12.30ಕ್ಕೆ ನಡೆಯಲಿರುವ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ದೇಶ: ಸಾಂಸ್ಕೃತಿ ನಿರೂಪಣೆ ಕುರಿತು ಡಾ. ರವಿಕುಮಾರ್ ನೀಹ, ರೆಟ್ರೋ ಸಿನಿಮಾಗಳು ಮತ್ತು ಇತ್ತೀಚಿನ ಸಿನಿಮಾಗಳ ಭಾಷೆ ಕುರಿತು ಡಾ.ಗೋವಿಂದರಾಜು ಎಂ.ಕಲ್ಲೂರು, ಮಹಿಳಾ ಅಭಿವೃದ್ಧಿ ಮತ್ತು ಭಾಷೆ ಫಲುಕುಗಳು ಕುರಿತು ಅನುಸೂಯ ಯತೀಶ್, ಗಡಿನಾಡ ಕನ್ನಡ ಭಾಷಿಕ ಸಮಸ್ಯೆಗಳು, ಡಾ.ಕೆ.ವಿ.ಮುದ್ದವೀರಪ್ಪ ಉಪನ್ಯಾಸ ನೀಡುವರು.
.14 ರಂದು ಬೆಳಗ್ಗೆ 10.30 ರಿಂದ ಆಧುನಿಕ ಭಾಷಿಕ ಸವಾಲುಗಳ ಕುರಿತು ಕೆ.ಪಿ.ನಟರಾಜು, ಕರ್ನಾಟಕಾಂದ್ರ ನೆಲದಲ್ಲಿ ಕನ್ನಡ ಭಾಷೆ ಸಾಹಿತ್ಯಕ ನಂಟುಗಳ ಕುರಿತು ಡಾ.ನಾಗಭೂಷಣ್ ಕೆ., ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಾಮಾಜಿಕತೆ ಕುರಿತು ಡಾ.ಬೀರಂಜಗದೀಶ್ ಅವರುಗಳು ಉಪನ್ಯಾಸ ನೀಡುವರು. ನಂತರ ಕು.ಮಾನಸ ಮತ್ತು ಆಶಿಕ್ ಇವರಿಂದ ವಚನ ಮತ್ತು ಜನಪದ ಗೀತೆಗಳ ಗಾಯನ ಮೂಡಿಬರಲಿದೆ.
ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲರಾದ ಪ್ರೊ.ಮುನೀಂದ್ರ ಕುಮಾರ್ ವಹಿಸುವರು. ಕವಿ ಡಾ. ಶಿವಣ್ಣ ತಿಮ್ಮಾಪುರ ಸಮಾರೋಪ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಡಾ. ಮೂರ್ತಿ ತಿಮ್ಮನಹಳ್ಳಿ, ವೊದೇಕಲ್ಲು ರಂಗಮ್ಮ, ಡಾ.ಮುದ್ದುಗಂಗಯ್ಯ, ರಂಗಧಾಮಯ್ಯ, ನರಸಿಂಹರಾಜು, ಕುಮಾರ್ ಬ೦ದ್ರೆ ಹಳ್ಳಿ ಆಗಮಿಸುವರು. ಇದೇ ಸಂದರ್ಭದಲ್ಲಿ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪಿ.ವಿ.ಹನುಮಂತರಾಯಪ್ಪ, ಪುರವರ ಇವರನ್ನು ಸನ್ಮಾನಿಸಲಾಗುವುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


