ತುಮಕೂರು: ಯುಜಿಸಿ ಆದೇಶದ ಮೇರೆಗೆ ಕರಾಮುವಿಯು 2023-24ನೇ ಜುಲೈ ಆವೃತ್ತಿ ಪ್ರವೇಶಾತಿ ಅಂತಿಮ ದಿನಾಂಕವನ್ನು 2023ರ ಸೆಪ್ಟೆಂಬರ್ 30ರ ವರೆಗೆ ವಿಸ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗುವ ಆಸಕ್ತರು ಕರಾಮುವಿಯಲ್ಲಿ ಪ್ರವೇಶಾತಿ ಪಡೆಯಲು ಅನುಕೂಲ ಮಾಡಿಕೊಡುವ ಸಲುವಾಗಿ, 2023ರ ಸೆಪ್ಟೆಂಬರ್ 30ರ ವರೆಗೆ ಸಾರ್ವತ್ರಿಕ ರಜಾ ದಿನಗಳಾದ ಎರಡನೇ ಹಾಗೂ ನಾಲ್ಕನೇ ಶನಿವಾರ ಮತ್ತು ಭಾನುವಾರಗಳಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಕರಾಮುವಿ ಪ್ರಾದೇಶಿಕ ಕೇಂದ್ರ ತುಮಕೂರು ಕಛೇರಿಯನ್ನು ತೆರೆಯುವ ಮೂಲಕ ಪ್ರವೇಶಾತಿಯನ್ನು ಮಾಡಿಕೊಳ್ಳಲಾಗುವುದು.
ತುಮಕೂರಿನ ಕರಾಮುವಿ ಪ್ರಾದೇಶಿಕ ಕೇಂದ್ರದಲ್ಲಿ 2023-24ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿ ಪ್ರವೇಶಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಸ್ನಾತಕ/ ಸ್ನಾತಕೋತ್ತರ ಕೋರ್ಸ್ ಗಳಾದ ಬಿ.ಎ, ಬಿ.ಕಾಂ, ಬಿ.ಬಿ.ಎ, ಬಿ.ಸಿ.ಎ, ಬಿ.ಲಿಬ್.ಐ.ಎಸ್ಸಿ., ಬಿ.ಎಸ್ಸಿ (General,, IT)., ಬಿ.ಎಸ್.ಡಬ್ಲ್ಯೂ., ಎಂ.ಎ., ಎಂ.ಸಿ.ಜೆ., ಎಂ.ಕಾಂ., ಎಂ.ಎಸ್ಸಿ., ಎಂ.ಲಿಬ್.ಐ.ಎಸ್ಸಿ., {ಎಂ.ಬಿ.ಎ., ಎಂ.ಸಿ.ಎ(AICTE Approved)}., ಎಂ.ಎಸ್.ಡಬ್ಲ್ಯೂ ಮತ್ತು ಪಿ.ಜಿ ಸರ್ಟಿಫಿಕೇಟ್., ಡಿಪ್ಲೊಮಾ., ಸರ್ಟಿಫಿಕೇಟ್ ಪ್ರೋಗ್ರಾಮ್ಸ್ ಗಳಿಗೆ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದೆ.
ಕೆಎಸ್ಒಯು ಯುಜಿಸಿಯಿಂದ ಮಾನ್ಯತೆ ಪಡೆದಿದೆ ಮತ್ತು ನ್ಯಾಕ್ ನಿಂದ “ಎ ಪ್ಲಸ್” ಮಾನ್ಯತೆ ಪಡೆದಿದೆ. ಯುಜಿಸಿ ನಿಯಮಾವಳಿ ಪ್ರಕಾರ ಮುಕ್ತ ವಿಶ್ವವಿದ್ಯಾನಿಲಯ ನೀಡುವ ಪದವಿಗಳು ರೆಗ್ಯುಲರ್ ಮೂಲಕ ನೀಡುವ ಪದವಿಗಳಿಗೆ ಸಮನಾದ ಅರ್ಹತೆ ಇರುತ್ತದೆ.
ಹೆಚ್ಚಿನ ವಿವರಗಳಿಗಾಗಿ: ಕರಾಮುವಿ ತುಮಕೂರು ಪ್ರಾದೇಶಿಕ ಕೇಂದ್ರ, ಟೂಡಾ ಲೇಔಟ್, ರಾಜೀವ್ಗಾಂಧಿ ನಗರ, ಗಂಗಸಂದ್ರ ಮುಖ್ಯರಸ್ತೆ, ಮೆಳೆಕೋಟೆ, ತುಮಕೂರು-572105 ದೂರವಾಣಿ ಸಂಖ್ಯೆ- 0816-2955580, 9844506629, 9886112434, 7349474339 ಅನ್ನು ಸಂಪರ್ಕಿಸಬಹುದು ಎಂದು ಪ್ರಾದೇಶಿಕ ನಿರ್ದೇಶಕರಾದ ಡಾ. ಲೋಕೇಶ ಆರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


