ತುಮಕೂರು: ನಗರದ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಯಾಂತ್ರಿಕ ವಿಭಾಗದ ವತಿಯಿಂದ ಮೊಮೆಂಟಮ್–2026 (ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿಗಳ ತಾಂತ್ರಿಕ ವಿಚಾರ ಸಂಕಿರಣ) ನಡೆಯಿತು.
ಆಂಧ್ರಪ್ರದೇಶದ ಪೆನುಕೊಂಡದ ಕಿಯಾ ಇಂಡಿಯಾ ಪ್ರೈ.ಲಿ.ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಡಾ.ಸಿ.ಬಿ.ಪಾಟೀಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ಸಮಾರಂಭವನ್ನು ಉದ್ಘಾಟಿಸಿದರು.
ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಮುಖ್ಯತೆ ಮತ್ತು ಆಧುನಿಕತೆಯ ಬಳಕೆಯ ದೃಷ್ಟಿಯಲ್ಲಿ ವಿಭಾಗದ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದಲ್ಲಿ ಹುದ್ದೆಗಳಿಗಿಂತ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ಹೇಳಿದರು. ಅಲ್ಲದೆ ಕಾಲಾನುಸಾರ ಅಗತ್ಯಗಳಿಗೆ ತಕ್ಕಂತೆ ಕಲಿಯಿರಿ, ಮರೆತುಬಿಡಿ ಮತ್ತು ಮರುಕಲಿಯಿರಿ ಎಂಬ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಮಾರಂಭದಲ್ಲಿ SIT ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಶಿವಕುಮಾರಯ್ಯ, SIT ಪ್ರಾಂಶುಪಾಲ ಡಾ.ದಿನೇಶ್, ಯಾಂತ್ರಿಕ ವಿಭಾಗದ ಮುಖ್ಯಸ್ಥರಾದ ಡಾ.ವಿರುಪಾಕ್ಷಿ ಔರಾದಿ, ಸಂಯೋಜಕ ಡಾ.ಎ.ಜಿ. ಶಿವಸಿದ್ಧರಾಮಯ್ಯ, ಖಜಾಂಚಿಗಳಾದ ಡಾ.ಟಿ.ವಿ.ವಿನೀತ್‌ಕುಮಾರ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನಿಶ್, ಕಾರ್ಯದರ್ಶಿ ಹೆಚ್.ಬಿ.ಮಧು ಮತ್ತು ಜೀವಿತ ಜೆ.ಎಸ್, ಉಪನ್ಯಾಸಕರುಗಳು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


