nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು: ಬುದ್ಧನ ತತ್ವಗಳು ಸೂರ್ಯ ಚಂದ್ರರು ಇರುವ ತನಕ ಪ್ರಸ್ತುತ: ಡಾ.ಜಿ.ಪರಮೇಶ್ವರ್

    May 2, 2026

    ತುಮಕೂರು: ಚುನಾವಣಾ ಆಯೋಗ ಕೈಗೊಂಡಿರುವ SIR ಪ್ರಕ್ರಿಯೆಗೆ ವಿರೋಧ: ಬಿಎಸ್‌ ಎನ್‌ ಎಲ್‌ ಕಚೇರಿ ಮುಂಭಾಗ ಸಿಪಿಎಂ ಪ್ರತಿಭಟನೆ

    May 2, 2026

    ತುಮಕೂರು: ರಾಷ್ಟ್ರೀಯ ಮಟ್ಟದ ತಾಂತ್ರಿಕ ವಿಚಾರ ಸಂಕಿರಣ

    May 2, 2026
    Facebook Twitter Instagram
    ಟ್ರೆಂಡಿಂಗ್
    • ತುಮಕೂರು: ಬುದ್ಧನ ತತ್ವಗಳು ಸೂರ್ಯ ಚಂದ್ರರು ಇರುವ ತನಕ ಪ್ರಸ್ತುತ: ಡಾ.ಜಿ.ಪರಮೇಶ್ವರ್
    • ತುಮಕೂರು: ಚುನಾವಣಾ ಆಯೋಗ ಕೈಗೊಂಡಿರುವ SIR ಪ್ರಕ್ರಿಯೆಗೆ ವಿರೋಧ: ಬಿಎಸ್‌ ಎನ್‌ ಎಲ್‌ ಕಚೇರಿ ಮುಂಭಾಗ ಸಿಪಿಎಂ ಪ್ರತಿಭಟನೆ
    • ತುಮಕೂರು: ರಾಷ್ಟ್ರೀಯ ಮಟ್ಟದ ತಾಂತ್ರಿಕ ವಿಚಾರ ಸಂಕಿರಣ
    • ನವಿಲುಗಳ ಸಾಮೂಹಿಕ ಸಾವಿನ ರಹಸ್ಯ ಬಯಲು: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾಹಿತಿ
    • ಕಾರ್ಮಿಕ ಚಳುವಳಿಗಳು ಮತ್ತೆ ಪುಟ್ಟಿದೇಳಬೇಕಿದೆ: ಕಾರ್ಮಿಕ ದಿನಾಚರಣೆಯಲ್ಲಿ ಎಲ್. ಹನುಮಂತಯ್ಯ ಕರೆ
    • ಅಂಬೇಡ್ಕರ್ ಸ್ಮರಣೆ: ಪುಸ್ತಕ ವಿತರಣೆ ಕಾರ್ಯಕ್ರಮ
    • ಬಸವ ತತ್ವಗಳಿಂದ ಸಾಮಾಜಿಕ ಪಿಡುಗನ್ನು ತೊಲಗಿಸಿ: ಶಾಸಕ ಎಂ.ಟಿ.ಕೃಷ್ಣಪ್ಪ
    • ಚಿಕ್ಲಿ (ಜೆ) ಗ್ರಾಮದಲ್ಲಿ ಸಂಭ್ರಮದ ಅಂಬೇಡ್ಕರ್ ಜಯಂತಿ: ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತುಮಕೂರು: ಚುನಾವಣಾ ಆಯೋಗ ಕೈಗೊಂಡಿರುವ SIR ಪ್ರಕ್ರಿಯೆಗೆ ವಿರೋಧ: ಬಿಎಸ್‌ ಎನ್‌ ಎಲ್‌ ಕಚೇರಿ ಮುಂಭಾಗ ಸಿಪಿಎಂ ಪ್ರತಿಭಟನೆ
    ತುಮಕೂರು May 2, 2026

    ತುಮಕೂರು: ಚುನಾವಣಾ ಆಯೋಗ ಕೈಗೊಂಡಿರುವ SIR ಪ್ರಕ್ರಿಯೆಗೆ ವಿರೋಧ: ಬಿಎಸ್‌ ಎನ್‌ ಎಲ್‌ ಕಚೇರಿ ಮುಂಭಾಗ ಸಿಪಿಎಂ ಪ್ರತಿಭಟನೆ

    By adminMay 2, 2026No Comments2 Mins Read
    cpim

    ತುಮಕೂರು: ಚುನಾವಣಾ ಆಯೋಗ ಕೈಗೊಂಡಿರುವ SIR ಪ್ರಕ್ರಿಯೆ ಮತದಾರ ಪಟ್ಟಿಯನ್ನು ಶುದ್ದೀಕರಿಸುವ ಹೆಸರಿನಲ್ಲಿ ಮನೆ ಮನೆಗೆ ಸಮೀಕ್ಷೆ ನಡೆಸಿ, ಸತ್ತವರು, ಸ್ಥಳಾಂತರಗೊಂಡವರು ಹಾಗೂ ನಕಲಿ ಹೆಸರುಗಳನ್ನು ತೆಗೆದುಹಾಕುವುದಾಗಿ ಹೇಳಿದರೂ, ಪ್ರಸ್ತುತ ನಡೆಯುತ್ತಿರುವ ಪ್ರಕ್ರಿಯೆಗಳು ಸರಿಯಾಗಿಲ್ಲ ಮತ್ತು ಅಸಂವಿಧಾನಿಕವಾಗಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್ ಮುಜೀಬ್ ತಿಳಿಸಿದರು.

    ಸಂವಿಧಾನ ವಿರೋಧಿ ದೇಶ ಸಮಗ್ರ ಪರಿಶೀಲನೆ (SIR) ವಿರುದ್ಧ ಸಿಪಿಎಂ ವತಿಯಿಂದ ಜನಜಾಗೃತಿ ಪ್ರತಿಭಟನೆಯನ್ನು ಭಾರತ ಕಮ್ಯುನಿಸ್ಟ್ ಪಕ್ಷ ಜಿಲ್ಲಾ ಸಮಿತಿಯು ನಗರದ ಬಾರ್ಲೈನ್ ವಾರ್ಡ್‌ಗಳ ಬಿಎಸ್ಎನ್‌ಎಲ್ ಕಚೇರಿ ಮುಂಭಾಗ ಶುಕ್ರವಾರ ನಡೆಸಲಾಯಿತು. ಎಸ್‌ಐಆರ್ ಪ್ರಕ್ರಿಯೆ ಮೂಲತಃ ಮತದಾರ ಪಟ್ಟಿಯನ್ನು ಶುದ್ದೀಕರಿಸುವ ಉದ್ದೇಶದಿಂದ ಚುನಾವಣಾ ಆಯೋಗ ನಡೆಸುವ ಪರಿಶೀಲನಾ ಅಭಿಯಾನವಾಗಿದ್ದು, ಅರ್ಹ ಮತದಾರರನ್ನು ಸೇರಿಸಿ, ಅನರ್ಹರನ್ನು ತೆಗೆದುಹಾಕುವುದು ಅದರ ಉದ್ದೇಶವಾಗಿದೆ ಆದರೆ ಪ್ರಸ್ತುತ ನಡೆಯುತ್ತಿರುವ ಕ್ರಮಗಳು ಜನವಿರೋಧಿಯಾಗಿದ್ದು, ಅದರ ಹಿಂದೆ ಎನ್‌ಆರ್‌ಸಿ ರೀತಿಯ ಉದ್ದೇಶಗಳು ಅಡಗಿವೆ ಎಂದು ಆರೋಪಿಸಿದರು.


    Provided by
    Provided by

    ಇತ್ತೀಚಿನ ವರದಿಗಳ ಪ್ರಕಾರ ಕೆಲವು ರಾಜ್ಯಗಳಲ್ಲಿ ಲಕ್ಷಾಂತರ ಜನರ ಹೆಸರುಗಳು ಮತದಾರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟಿರುವುದರಿಂದ ಮತದಾನದ ಹಕ್ಕು ಕಳೆದುಕೊಳ್ಳುವ ಆತಂಕ ವ್ಯಕ್ತವಾಗಿದೆ. ಇದರಿಂದ ಪ್ರಜಾಪ್ರಭುತ್ವದ ಮೂಲಭೂತ ಹಕ್ಕುಗಳಿಗೆ ಧಕ್ಕೆ ಉಂಟಾಗುತ್ತದೆ. ಇದು ಹಿಂದುತ್ವ ಹಾಗೂ ಕಾರ್ಪೊರೇಟ್ ನಿರಂಕುಶತೆಯ ಭಾಗವಾಗಿ ದೇಶವನ್ನು ನವ ಫ್ಯಾಸಿಸ್ಟ್ ದಿಕ್ಕಿನಲ್ಲಿ ಕೊಂಡೊಯ್ಯುವ ಪ್ರಯತ್ನವಾಗಿದೆ ಎಂದು ಆಕ್ಷೇಪಿಸಿದರು.

    ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ.ಉಮೇಶ್ ಮಾತನಾಡಿ, ಕರ್ನಾಟಕದಲ್ಲಿ ಈ ಪ್ರಕ್ರಿಯೆಯಿಂದ 1 ಕೋಟಿ 20 ಲಕ್ಷ ಮತದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ ಎಂದು ಸುದ್ದಿಗಳು ಹರಿದಾಡುತ್ತಿವೆ. ಆದ್ದರಿಂದ ಸಂಘಟಿತವಾಗಿ ಎಸ್‌ಐಆರ್ ಹೆಸರಿನಲ್ಲಿ ಅಘೋಷಿತ ಎನ್‌ಆರ್‌ಸಿ ಪ್ರಜಾಪ್ರಭುತ್ವವನ್ನು ಉಳಿಸಲು ಧ್ವನಿ ಎತ್ತಲು ಮತದಾರರು, ದೇಶಪ್ರೇಮಿಗಳು ಮತ್ತು ಸಂವಿಧಾನವನ್ನು ಕಾಪಾಡುವವರು ಈ ಕ್ರಮದ ವಿರುದ್ಧ ಒಂದಾಗಿ ಹೋರಾಡಬೇಕು ಎಂದರು.

    ನಗರ ಕಾರ್ಯದರ್ಶಿ ಎನ್.ಲೋಕೇಶ್ ರವರು ಮಾತನಾಡಿ, ತಮ್ಮ ಹೆಸರನ್ನು ಮತದಾರ ಪಟ್ಟಿಯಲ್ಲಿ ಪರಿಶೀಲಿಸಿಕೊಂಡು, ಬಿಎಲ್ ಒ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಮನವಿ ಮಾಡಲಾಗುವುದು ಎಂದರು.

    ಪ್ರತಿಭಟನೆಯಲ್ಲಿ ಇನ್ಸಾಫ್ ರಫೀಕ್, ಸುಬ್ರಮಣ್ಯ, ಶಿವಕುಮಾರಸ್ವಾಮಿ, ರಂಗನಾಥ್, ವಿಲೀಲ್, ಇಂತಿಯಾ, ಮಧುಸೂದನ್, ಕಲ್ಪನಾ, ಮಾರುತಿ, ಲಕ್ಷ್ಮೀಕಾಂತ್, ವಸೀಂ ಅಕ್ರಂ, ರಾಘವೇಂದ್ರ ಮುಂತಾದವರು ಭಾಗವಹಿಸಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ತುಮಕೂರು: ಬುದ್ಧನ ತತ್ವಗಳು ಸೂರ್ಯ ಚಂದ್ರರು ಇರುವ ತನಕ ಪ್ರಸ್ತುತ: ಡಾ.ಜಿ.ಪರಮೇಶ್ವರ್

    May 2, 2026

    ತುಮಕೂರು: ರಾಷ್ಟ್ರೀಯ ಮಟ್ಟದ ತಾಂತ್ರಿಕ ವಿಚಾರ ಸಂಕಿರಣ

    May 2, 2026

    ನವಿಲುಗಳ ಸಾಮೂಹಿಕ ಸಾವಿನ ರಹಸ್ಯ ಬಯಲು: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾಹಿತಿ

    May 2, 2026

    Leave A Reply Cancel Reply

    Our Picks

    ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ನಟ ದರ್ಶನ್: ಮೇ 4ಕ್ಕೆ ವಿಚಾರಣೆ

    April 29, 2026

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರು: ಬುದ್ಧನ ತತ್ವಗಳು ಸೂರ್ಯ ಚಂದ್ರರು ಇರುವ ತನಕ ಪ್ರಸ್ತುತ: ಡಾ.ಜಿ.ಪರಮೇಶ್ವರ್

    May 2, 2026

    ತುಮಕೂರು: ಜೀವನದ ಸತ್ಯವನ್ನು ಅರ್ಥಪೂರ್ಣವಾಗಿ ಬಹಳ ಸರಳವಾಗಿ ತಿಳಿಸಿದ ಬುದ್ಧನ ತತ್ವಗಳು ಸೂರ್ಯ ಚಂದ್ರರು ಇರುವ ತನಕ ಪ್ರಸ್ತುತವಾಗಿರುತ್ತವೆ ಎಂದು…

    ತುಮಕೂರು: ಚುನಾವಣಾ ಆಯೋಗ ಕೈಗೊಂಡಿರುವ SIR ಪ್ರಕ್ರಿಯೆಗೆ ವಿರೋಧ: ಬಿಎಸ್‌ ಎನ್‌ ಎಲ್‌ ಕಚೇರಿ ಮುಂಭಾಗ ಸಿಪಿಎಂ ಪ್ರತಿಭಟನೆ

    May 2, 2026

    ತುಮಕೂರು: ರಾಷ್ಟ್ರೀಯ ಮಟ್ಟದ ತಾಂತ್ರಿಕ ವಿಚಾರ ಸಂಕಿರಣ

    May 2, 2026

    ನವಿಲುಗಳ ಸಾಮೂಹಿಕ ಸಾವಿನ ರಹಸ್ಯ ಬಯಲು: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾಹಿತಿ

    May 2, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.