ತುರುವೇಕೆರೆ: ಪಟ್ಟಣದ ತಾಲೂಕು ಕಚೇರಿಗೆ ಹೊಂದಿಕೊಂಡಂತಿರುವ ವಾಣಿಜ್ಯ ಸಂಕೀರ್ಣದಲ್ಲಿ ಇಂದು ಪ್ರೊಫೆಸರ್ ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ(DSS)ಯ ತಾಲೂಕು ಶಾಖೆಯನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅನಂತರಾಜು ಉದ್ಘಾಟಿಸಿದರು.
ಈ ಶಾಖೆಯು ಜಿಲ್ಲಾ ಸಂಚಾಲಕ ನಾಗತಿಹಳ್ಳಿ ಕೃಷ್ಣಮೂರ್ತಿ, ಜಿಲ್ಲಾ ಸಂಘಟನಾ ಸಂಚಾಲಕ ದಂಡಿನ ಶಿವರಕುಮಾರ್, ತಾಲೂಕು ಸಂಚಾಲಕ ಮಲ್ಲೂರು ತಿಮ್ಮೇಶ್ ರವರ ನೇತೃತ್ವದಲ್ಲಿ ಉದ್ಘಾಟನೆಗೊಂಡಿದ್ದು, ಇದೇ ವೇಳೆ ತಾಲೂಕು ಶಾಖೆ ಉದ್ಘಾಟಿಸಿದ ಅನಂತರಾಜು ಮಾತನಾಡಿ, ಪಟ್ಟಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ಇಂದಿನಿಂದ ಆರಂಭಗೊಂಡಿದ್ದು, ಇದರಿಂದಾಗಿ ನೊಂದವರಿಗೆ ಸಾಮಾಜಿಕವಾಗಿ ದೀನದಲಿತರಿಗೆ ಸರ್ವ ಜನಾಂಗದವರಿಗೂ ಆರೋಗ್ಯಕರ ಹೋರಾಟ ಮಾಡುವುದರ ಮೂಲಕ ನ್ಯಾಯ ದೊರಕಿಸಿ ಕೊಡುವಂತಹ ಕಾರ್ಯ ನಿರ್ವಹಿಸಬೇಕು, ನೊಂದವರ ಪಾಲಿಗೆ ದಾರಿ ದೀಪವಾಗಿ ಈ ಸಂಘಟನೆ ಕಾರ್ಯ ನಿರ್ವಹಿಸಿ ನ್ಯಾಯ ದೊರಕಿಸಿ ಕೊಡಬೇಕು, ಇದರ ಜೊತೆಗೆ ನಾನು ಕೂಡ ಒಬ್ಬ ಅಧಿಕಾರಿಯಾಗಿ ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದರು.

ನಂತರ ಜಿಲ್ಲಾ ಸಂಚಾಲಕರಾದ ನಾಗತಿಹಳ್ಳಿ ಕೃಷ್ಣಮೂರ್ತಿ ಮಾತನಾಡಿ, ತಾಲೂಕಿನಲ್ಲಿ ಇಂದು ತಾಲೂಕು ಶಾಖೆ ಆರಂಭವಾಗಿದ್ದು ನಮ್ಮ ಶಾಖೆಯ ಸರ್ವ ಸದಸ್ಯರಿಗೂ ಹೇಳುವುದೇನೆಂದರೆ ದೀನ ದಲಿತರ ಕಣ್ಣೀರು ಒರೆಸುವಂತಹ ಕೆಲಸ ಆಗಬೇಕಾಗಿದೆ ಜೊತೆಗೆ ಯಾರೇ ನೊಂದ ಜನರು ನಿಮ್ಮ ಸಹಾಯ ಕೇಳಿ ಬಂದರೆ ಅಂತಹವರನ್ನು ಕಚೇರಿಗೆ ಕರೆಯಿಸಿ ತಾಲೂಕಿನ ಸಂಚಾಲಕರೊಂದಿಗೆ ಮತ್ತು ಪದಾಧಿಕಾರಿಗಳೊಂದಿಗೆ ಚರ್ಚಿಸಿ ನೊಂದವರಿಗೆ ನ್ಯಾಯ ದೊರಕಿಸಿ ಕೊಡುವಂತಹ ಹೋರಾಟ ಆಗಬೇಕು ಜೊತೆಗೆ ಎಲ್ಲಾ ಸಮುದಾಯದ ಬಡವರಿಗೆ ನಿರ್ಗತಿಕರಿಗೆ ನಿವೇಶನಗಳು ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲೂ ಕೂಡ ನಮ್ಮ ಪ್ರೊಫೆಸರ್ ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ಕಾರ್ಯ ನಿರ್ವಹಿಸಲಿದೆ ಜೊತೆಗೆ ಎಲ್ಲಾ ಸಮುದಾಯದ ಜನಗಳಿಗೆ ತಾಲೂಕಿನ ದಸಂಸ ಶಾಖೆ ದಾರಿ ದೀಪವಾಗಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಪ್ರೊಫೆಸರ್ ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ತುರುವೇಕೆರೆ ತಾಲೂಕಿನ ಎಲ್ಲ ಪದಾಧಿಕಾರಿಗಳು ಯುವ ಮುಖಂಡರು ಹಾಗೂ ಹಿರಿಯ ಮುಖಂಡರು ಹಲವರು ಉಪಸ್ಥಿತರಿದ್ದರು.
ವರದಿ: ಮಂಜುನಾಥ್ ಕೆ.ಎ. ತುರುವೇಕೆರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


