ತುಮಕೂರು: ಜಿಲ್ಲೆ ತುರುವೇಕೆರೆ ಪಟ್ಟಣದ ಮಾಯಸಂದ್ರ ರಸ್ತೆ ಪೊಲೀಸ್ ಠಾಣೆಯ ಎದುರಿನಲ್ಲಿರುವ A. V. S. S, ಕಛೇರಿಯಲ್ಲಿ ತುರುವೇಕೆರೆ ತಾಲ್ಲೂಕಿನ ಛಲವಾದಿ ಮಹಾ ಸಭಾ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಹಯೋಗದೊಂದಿಗೆ 204 ನೇ ಭೀಮಾ ಕೊರೆಗಾಂವ್ ವಿಜಯೋತ್ಸವ ದಿನವನ್ನು ಆಚರಿಸಲಾಯಿತು.
ತಾಲ್ಲೂಕು ಛಲವಾದಿ ಮಹಾಸಭಾದ ಅಧ್ಯಕ್ಷರಾದ ಡೊಂಕಿಹಳ್ಳಿ ರಾಮಣ್ಣ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಕುಣಿಕೆನಹಳ್ಳಿ ಜಗದೀಶ್ ಮಾತನಾಡಿ, ಈ ಒಂದು ಹೋರಾಟದಲ್ಲಿ ಮಡಿದ ಮಹರ್ ಸೈನಿಕರ ಸ್ವಾಭಿಮಾನ ಮತ್ತು ಪೇಶ್ವೆಯವರ ದುರಾಡಳಿತ ಹಾಗೂ ಅಸ್ಪೃಶ್ಯತೆ, ಸಾಮಾಜಿಕ, ಹಕ್ಕಿಗಾಗಿ ಮಡಿದಂತಹ ದಿನ ಎಂದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೊಡಗಿಹಳ್ಳಿ ಹನುಮಂತಯ್ಯ,ಬೀಚನಹಳ್ಳಿ ಮಹಾದೇವಯ್ಯ, ಪುರ ರಾಮಚಂದ್ರಯ್ಯ, ಶಂಕರಪ್ಪ, ನರಸಿಂಹ, ಕಾಚಿಹಳ್ಳಿ ಪುಟ್ಟರಾಜು, ಪ್ರಸನ್ನಕುಮಾರ್, ಶಿವಲಿಂಗಯ್ಯ ಮುಂತಾದವರು ಹಾಜರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy