ತುರುವೇಕೆರೆ: ಇತಿಹಾಸ ಪ್ರಸಿದ್ಧ ತಾಲೂಕಿನ ಸಂಪಿಗೆ ಗ್ರಾಮದ ಶ್ರೀ ಶ್ರೀನಿವಾಸ ಸ್ವಾಮಿ ದೇವಾಲಯದಲ್ಲಿ ಡಿ.30 ಮಂಗಳವಾರ ವೈಕುಂಠ ಏಕಾದಶಿ ಮಹೋತ್ಸವ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಸಂಚಾಲಕ ಹರೀಶ್ ತಿಳಿಸಿದ್ದಾರೆ.
ಪಟ್ಟಣದ ಬೇಟರಾಯಸ್ವಾಮಿ ದೇವಾಲಯದ ಆವರಣದಲ್ಲಿ ಪತ್ರಿಕಾ ಪ್ರಕಟಣೆ ನೀಡಿ ಮಾತನಾಡಿದ ಅವರು, ಶ್ರೀನಿವಾಸ ಸ್ವಾಮಿಯವರ ವೈಕುಂಠ ಏಕಾದಶಿ ಮಹೋತ್ಸವದಲ್ಲಿ ಈ ಬಾರಿ ವಿಶೇಷವಾಗಿ ಅಮ್ಮನವರಿಗೆ ಹಾಗೂ ಸ್ವಾಮಿಗೆ ವಜ್ರಾಂಗಿ ಅಲಂಕಾರ ನಡೆಸಲಾಗುತ್ತದೆ. ಸ್ವಾಮಿಯ ಭಕ್ತರು ತುಮಕೂರು ಜಿಲ್ಲೆ ಅಲ್ಲದೆ ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಲಿದ್ದಾರೆ ಎಂದರು.
ಅಂದು ಬೆಳಿಗ್ಗೆ 5 ಗಂಟೆಯಿಂದ ಸ್ವಾಮಿಯವರಿಗೆ ಮತ್ತು ಅಮ್ಮನವರಿಗೆ ವಿವಿಧ ಧಾರ್ಮಿಕ ಪೂಜಾದಿಗಳೂ ಆರಂಭವಾಗುತ್ತವೆ. ಸಂಜೆ 5-30 ಘಂಟೆಗೆ ತುಮಕೂರಿನ ಸಾಯಿರಾಮನ್ ನೃತ್ಯ ಕೇಂದ್ರದ ವತಿಯಿಂದ ವೆಂಕಟೇಶ್ವರ ಕಲ್ಯಾಣ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ. ಇದರ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಈ ಸಂದರ್ಭದಲ್ಲಿ ಬ್ಯಾಂಕ್ ಶ್ರೀನಿವಾಸ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಾಗರಾಜು, ರಾಜೇಶ್, ಭಾಸ್ಕರ್, ಬಾಲಾಜಿ, ಯಶವಂತ್, ಗಗನ್, ಶ್ರೀನಿವಾಸ್ ಸೇರಿದಂತೆ ಇತರರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


