ತುರುವೇಕೆರೆ: ಪಟ್ಟಣದ ಹೃದಯ ಭಾಗದಲ್ಲಿರುವ ಕೆ ಈರಣ್ಣಯ್ಯ ಬಯಲು ರಂಗಮಂದಿರದಲ್ಲಿ ,ಇಂದು ನಡೆದ ಭೀಮೋತ್ಸವ ಕಾರ್ಯಕ್ರಮ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.
ಇನ್ನು ಈ ಕಾರ್ಯಕ್ರಮವನ್ನು ತುರುವೇಕೆರೆ ಪಟ್ಟಣದಲ್ಲಿರುವ ಶ್ರೀ ಆದಿಜಾಂಭವ ಕ್ಷೇಮಾಭಿವೃದ್ಧಿ ಸೇವಾ ಸಮಿತಿ ವತಿಯಿಂದ ಸಂಸ್ಥಾಪಕ ಅಧ್ಯಕ್ಷರಾದ ಮೂರ್ತಿ ಸಿ ಎಸ್ ರವರು ಆಯೋಜನೆ ಮಾಡಲಾಗಿದ್ದು. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ರಾಜರತ್ನಂ ಅಂಬೇಡ್ಕರ್ ರವರ ಆಗಮನ ಸಂಚಲನ ಮೂಡಿಸಿತ್ತು ,
ಕಾರ್ಯಕ್ರಮದ ಉದ್ಘಾಟನೆಯನ್ನು ರಾಜರತ್ನ ಅಂಬೇಡ್ಕರ್ ಹಾಗೂ ಸಚಿವರಾದ ಸತೀಶ್ ಜಾರಕಿಹೊಳಿ, ಜೊತೆಗೆ ದಿವ್ಯ ಸಾನಿಧ್ಯ ವಹಿಸಿದ್ದ ಜ್ಞಾನಪ್ರಕಾಶ್ ಸ್ವಾಮೀಜಿ, ಸಂಜಯ್ ಕುಮಾರ್ ಸ್ವಾಮೀಜಿ ಅವರು, ತಮಟೆ ಬಡಿಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಕಾರ್ಯಕ್ರಮದ ರೂವಾರಿ ಹಾಗೂ ಅಧ್ಯಕ್ಷತೆಯನ್ನು ವಹಿಸಿದ್ದ ಮೂರ್ತಿ ಸಿ.ಎಸ್. ಅವರು , ಸರ್ಕಾರಕ್ಕೆ ಜಾತಿಗಣತಿ ಮತ್ತು ಎ.ಜೆ. ಸದಾಶಿವ ಆಯೋಗ ಜಾರಿ ಮಾಡುವಂತೆ ಒತ್ತಾಯಿಸಿದರು.
ಈ ಕಾರ್ಯಕ್ರಮದಲ್ಲಿ ವಿವಿಧ ತಾಲೂಕುಗಳ ದಲಿತ ಮುಖಂಡರುಗಳು. ವಿವಿಧಪರ ಸಂಘಟನೆಗಳ ಪದಾಧಿಕಾರಿಗಳು, ತಾಲೂಕಿನ ಭೀಮ ಬಂಧುಗಳು, ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು.
ವರದಿ: ಸುರೇಶ್ ಬಾಬು ಎಂ, ತುರುವೇಕೆರೆ