ತುರುವೇಕೆರೆ: ದಯಮಾಡಿ ಅರ್ಥ ಮಾಡಿಕೊಳ್ಳಿ, ಜೆಡಿಎಸ್ ಪಕ್ಷದ ಸಂಘಟನೆಯ ವಿಚಾರದಲ್ಲಿ ಏನನ್ನು ಮಾತನಾಡುವುದಿಲ್ಲ ಅದರ ಅವಶ್ಯಕತೆಯೂ ಇಲ್ಲ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ತಮ್ಮ ತಮ್ಮ ಗ್ರಾಮಗಳಲ್ಲಿ ಮಟ್ಟದಲ್ಲಿ ಮತದಾರರನ್ನು ಹಿಡಿತದಲ್ಲಿ ಬಿಗಿ ಮಾಡಿಕೊಳ್ಳಿ ಪ್ರಚಾರವನ್ನು ತಮ್ಮ ತಮ್ಮ ಗ್ರಾಮಗಳಲ್ಲೇ ಮಾಡಿ ಯಾರು ಬೇರೆ ಊರುಗಳಿಗೆ ಹೋಗಿ ಪ್ರಚಾರ ಮಾಡುವುದ ಅವಶ್ಯಕತೆಯೂ ಇಲ್ಲ ಮತದಾನದ ದಿನದಂದು ಮತದಾನದ ಕಡೆಯ ಗಳಿಗೆವರೆಗೂ ಎಚ್ಚರದಿಂದ ಮತದಾನ ಮಾಡಿಸಿ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ತುರುವೇಕೆರೆ ಪಟ್ಟಣದ ಚೌದ್ರಿ ಕನ್ವೆನ್ಷನ್ ಹಾಲ್ನಲ್ಲಿ ಏರ್ಪಡಿಸಿದ್ದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮಗೆ ಏನು ಸವಲತ್ತು ಸೌಕರ್ಯಗಳು ಬೇಕು ಕೇಳಿ ನಾವು ಮಾಡಲು ಸಿದ್ಧನಿದ್ದೇನೆ. ಅದರ ಬಗ್ಗೆ ಯಾವುದೇ ಚಿಂತೆಯನ್ನು ಮಾಡಬೇಡಿ, ಬೇರೆ ಪಕ್ಷದವರು ಏನೇನು ಮಾಡುತ್ತಾರೋ ಅದನ್ನು ನಮ್ಮ ಪಕ್ಷದಿಂದ ಮಾಡುತ್ತೇವೆ. ಈ ಬಾರಿ ತುರುವೇಕೆರೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಗೆಲ್ಲದಿದ್ದರೆ ಸಂಪೂರ್ಣವಾಗಿ ನಾಶವಾಗುತ್ತದೆ ಎಂದು ಅವರು ಕಾರ್ಯಕರ್ತರನ್ನು ಎಚ್ಚರಿಸಿದರು.
ಕಳೆದ ಚುನಾವಣೆಯಲ್ಲಿ ನಾನು ಸೋತೆ ಆದರೂ ಅಂದಿನಿಂದ ಕ್ಷೇತ್ರವನ್ನು ಬಿಟ್ಟು ಕದಲೆಲ್ಲ ಪಕ್ಷದ ಕಾರ್ಯಕರ್ತರ ಸಂಪರ್ಕದಲ್ಲಿ ಇದ್ದೇನೆ ನಾನು ಕ್ಷೇತ್ರಕ್ಕೆ ಚುನಾವಣೆಗಾಗಿ ಹೊಸದಾಗಿ ಬಂದವನಲ್ಲ ಸತತವಾಗಿ 20 ಹೆಚ್ಚು ವರ್ಷಗಳಿಂದ ಸಕ್ರಿಯನಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಹೋರಾಟ ಮಾಡಿರುತ್ತೇನೆ. ನಾನು ಶಾಸಕನಾಗಿದ್ದ ಅವಧಿಯಲ್ಲಿ ಬಹಳಷ್ಟು ಅಭಿವೃದ್ಧಿಯ ಕಾರ್ಯಗಳನ್ನು ಮಾಡಿದ್ದೇನೆ. ಈ ಬಾರಿ ಪಕ್ಷದ ವರಿಷ್ಠರಾದ ದೇವೇಗೌಡರು ಬದುಕಬೇಕು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಉಳಿಯಬೇಕು, ರೈತರ ಪರವಾದ ಪಕ್ಷ ಉಳಿಯಬೇಕು ಎಂದರೆ, 2023ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಗೆಲ್ಲಲೇ ಬೇಕು ಎಂದು ಅವರು ಹೇಳಿದರು.
ಕಳೆದ ಚುನಾವಣೆಯಲ್ಲಿ ತುರುವೇಕೆರೆ ಭಾಗದಲ್ಲಿ ಹೆಚ್ಚು ಮತಗಳನ್ನು ನೀಡಿದ್ದೀರಿ, ಆದರೆ ಸಿ.ಎಸ್.ಪುರ ಭಾಗದಲ್ಲಿ ಕಡಿಮೆಯ ಮತಗಳನ್ನು ನೀಡಿದ್ದರು. ಈ ಬಾರಿ 30,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಲಿದ್ದಾರೆ. ಇಂದಿನಿಂದ ಶ್ರಮ ಹಾಕಿ ಪ್ರಚಾರ ಮಾಡಿ ಪಕ್ಷವನ್ನು ಉಳಿಸಿ ಗೆಲ್ಲಿಸಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಯನ್ನಾಗಿಸಿ ರೈತರ ಅಭಿವೃದ್ಧಿಗಾಗಿ ಪಕ್ಷ ಸಂಘಟನೆ ಮಾಡಿ ಎಂದರು
ಈ ಸಂದರ್ಭದಲ್ಲಿ ಜೆ ಡಿ ಎಸ್ ತಾಲೂಕು ಯುವ ಘಟಕದ ಅಧ್ಯಕ್ಷರಾದ ಬಾಣಸಂದ್ರ ರಮೇಶ್ ,ಮುಖಂಡರಾದ ದೊಡ್ಡಘಟ್ಟ ಚಂದ್ರೇಶ್ , ಎಡಗಿಹಳ್ಳಿ ವಿಶ್ವನಾಥ್, ವಕೀಲರಾದ ದನಪಾಲ್ ,ದಂಡಿನ ಶಿವರ ಶಂಕರೇಗೌಡ ,ಜಿಲ್ಲಾ ಉಪಾಧ್ಯಕ್ಷರಾದ ರಮೇಶ್ ಗೌಡ , ಹೆಚ್ ಆರ್ ರಾಮೇಗೌಡ, ದೊಡ್ಡೇಗೌಡ ,ಮಾಜಿ ಡಿಸಿಸಿ ಬ್ಯಾಂಕ್ ನಿರ್ದೇಶಕ ದೇವರಾಜು ,ಯೋಗೇಶ್ ವೆಂಕಟಪುರ ,ಡಿ ಪಿ ರಾಜು, ಮತ್ತಿತರರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy